ಉಡುಪಿಯಲ್ಲಿ ಕೈಕೊಟ್ಟ ಮತಯಂತ್ರ : ಕುಕ್ಕೆಕಟ್ಟೆಯಲ್ಲಿ ರಕ್ಷಿತ್‌ ಶೆಟ್ಟಿ ಮತದಾನ

ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆಯಲ್ಲಿ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಉಡುಪಿ ನಗರಲ್ಲಿರುವ ಬೋರ್ಡ್‌ ಹೈಸ್ಕೂಲಿನ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದು, 30 ನಿಮಿಷಗಳಿಗೂ ಅಧಿಕ ಕಾಲ ಮತದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಉಡುಪಿ ಜಿಲ್ಲೆಯ ಕುಕ್ಕೆಕಟ್ಟೆ ಮತಕೇಂದ್ರದಲ್ಲಿ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (Rakshit Shetty vote) ಮತದಾನ ಮಾಡಿದ್ದಾರೆ.

ಇನ್ನು ಕಾಪುವಿನಲ್ಲಿ ನವವಧುವೊಬ್ಬರು ಮದುವೆಗೂ ಮುನ್ನ ಮತಕೇಂದ್ರಕ್ಕೆ ಬಂದು ತಮ್ಮ ಮತ ಚಲಾಯಿಸಿದ್ದಾರೆ. ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅವರಾಲುವಿನ ಮಟ್ಟು ಮತಗಟ್ಟೆಯಲ್ಲಿ ವಧು ಮೆಲಿಟಾ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರ ಅವರು ಮದುವೆ ಸಮಾರಂಭಕ್ಕಾಗಿ ಚರ್ಚ್‌ಗೆ ತೆರಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಿರುಸಿನಿಂದಲೇ ಮತದಾನ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆದಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗಿನ ವೇಳೆಯಲ್ಲಿ ಅತೀ ಕಡಿಮೆ ಮತದಾನವಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯ ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ 26 ಮತ್ತು 27ರ ಮತದಾನ ಕೇಂದ್ರ ನಿರ್ಮಲ ಪ್ರೌಢ ಶಾಲೆಯನ್ನು ಸಾಂಪ್ರದಾಯಿಕವಾಗಿ ಶೃಂಗಾರ ಮಾಡಲಾಗಿತ್ತು. ಶಾಲೆ ಪ್ರವೇಶ ದ್ವಾರವನ್ನು ಬಿದಿರಿನಲ್ಲಿ ಮಾಡಲಾದ ಸ್ವಾಗತ ಕಮಾನು ಅದರಲ್ಲಿ ಮತದಾನ ಮಾಡೋಣ ಪ್ರಜಾ ಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ ಎನ್ನುವ ಧ್ಯೇಯ ವಾಕ್ಯ, ಮತದಾರು ಕೇಂದ್ರಕ್ಕೆ ಹೋಗುವಲ್ಲಿ ಕರಾವಳಿಯ ಯಕ್ಷಗಾನ ಶೈಲಿಯ ನಾಮ ಫಲಕ. ಶಾಲಾ ತರಗತಿ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ಕೃಷಿ ಸಂಬಂದಿತ ಸಲಕರಣೆ, ಮೀನುಗಾರರು ಬಳಸುವ ದೋಣಿ ತೆಂಗಿನ ಗರಿಗಳ ಚಪ್ಪರ ಇದೆಲ್ಲವೂ ಮತದಾರರೀಗೆ ಸದಾ ನೆನಪಿನಲ್ಲಿ ಇರಿಸುವಂತಿದ್ದು ಇದೊಂದು ತೀರಾ ವಿಭಿನ್ನ ಮತಗಟ್ಟೆಯಾಗಿದೆ.

ಇದನ್ನೂ ಓದಿ : Sringeri : ಚುನಾವಣಾ ಕರ್ತವ್ಯ ಲೋಪ : ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅಮಾನತ್ತು

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ : ಇಂದು ಮತದಾನ

ಇದನ್ನೂ ಓದಿ : ಕರ್ನಾಟಕ ಚುನಾವಣೆ 2023 : ಮತದಾನದ ದಿನಾಂಕ, ಫಲಿತಾಂಶ, ಪ್ರಮುಖ ಕ್ಷೇತ್ರಗಳು ಇಲ್ಲಿದೆ ಸಂಪೂರ್ಣ ವಿವರ

Udupi Election 2023 Kannada Actor Rakshit Shetty vote in Kukkekatte

Comments are closed.