ಅನಾರೋಗ್ಯ ಪೀಡಿತರಿಗೆ ಮತದಾನ : ಮಾನವೀಯತೆ ಮೆರೆದ ಬ್ರಹ್ಮಾವರ ತಹಶೀಲ್ದಾರ್‌

ಕೋಟ : ಮತದಾನ ಪ್ರತಿಯೊಬ್ಬರ ಹಕ್ಕು. ಆದರೆ ಅನಾರೋಗ್ಯದ ಕಾರಣದಿಂದಾಗಿ ಬಹುತೇಕರಿಗೆ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಯಾರೊಬ್ಬರು ಮತದಾನದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಅನಾರೋಗ್ಯ ಪೀಡಿತರಾಗಿದ್ದ ಮಹಿಳೆಯೋರ್ವರಿಗೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿ ನೆರವಾಗುವ ಮೂಲಕ ಬ್ರಹ್ಮಾವರ ತಹಶೀಲ್ದಾರ್‌ (Brahmavar Tahsildar ) ರಾಜಶೇಖರ್‌ ಮೂರ್ತಿ ಅವರು ಮಾನವೀಯತೆ ಮೆರೆದಿದ್ದಾರೆ.

Voting for the sick Brahmavar Tahsildar RajaShekar Humanity 3

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯ ಎಂಜಿ ಕಾಲೋನಿಯ ನಿವಾಸಿಯಾಗಿರುವ ಪುಟ್ಟಿ ಮರಕಾಲ್ತಿ ಅವರು ಕಳೆದ ನಾಲ್ಕೈದು ವರ್ಷಗಳಿಂದಲೂ ಅನಾರೋಗ್ಯ ಪೀಡಿತರಾಗಿದ್ದರು. ಹಾಸಿಗೆಯಿಂದ ಬಿಟ್ಟು ಏಳಲಾಗದ ಸ್ಥಿತಿಗೆ ತಲುಪಿದ್ದರು. ವೈದ್ಯರು ಕೂಡ ಮನೆಗೆ ಬಂದು ಚಿಕಿತ್ಸೆಯನ್ನು ನೀಡಿ ಹೋಗುತ್ತಿದ್ದರು. ಆದ್ರೆ ಪುಟ್ಟಿ ಮರಕಾಲ್ತಿ ಅವರಿಗೆ ಮತದಾನ ಮಾಡಬೇಕು ಅನ್ನೋ ಹಂಬಲ. ಆದರೆ ಮನೆಯವರಿಗೆ ಅವರನ್ನು ಮತಕೇಂದ್ರಕ್ಕೆ ಕರೆದೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರ ನ್ಯೂಸ್‌ ನೆಕ್ಸ್ಟ್‌ ಗಮನಕ್ಕೆ ಬರುತ್ತಿದ್ದಂತೆಯೇ ಬ್ರಹ್ಮಾವರ ತಹಶೀಲ್ದಾರ್‌ (Brahmavar Tahsildar ) ರಾಜಶೇಖರ್‌ ಮೂರ್ತಿ ಅವರನ್ನು ಸಂಪರ್ಕಿಸಿತ್ತು.

Voting for the sick Brahmavar Tahsildar RajaShekar Humanity 3

ಕೂಡಲೇ ಮನೆಗೆ ವಾಹನವನ್ನು ಕಳುಹಿಸಿ ಮತದಾನ ಮಾಡಿಸುವ ಭರವಸೆಯನ್ನು ತಹಶೀಲ್ದಾರ್‌ ನೀಡಿದ್ದಾರೆ. ಕೂಡಲೇ ವಡ್ಡರ್ಸೆ ಗ್ರಾಮ ಆಡಳಿತ ಅಧಿಕಾರಿ ವಿಜಯ್‌ ಎಸ್. ಶೆಟ್ಟಿ ಅವರಿಗೆ ಸೂಚನೆಯನ್ನು ನೀಡಿದ್ದರು. ಕೂಡಲೇ ಕಾರನ್ನು ಮನೆಗೆ ಕಳುಹಿಸಿದ್ದಾರೆ. ಆದರೆ ಪುಟ್ಟಿ ಮರಕಾಲ್ತಿ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ದುಸ್ಥರವಾಗಿದ್ದು, ಪುಟ್ಟಿ ಮರಕಾಲ್ತಿ ಅವರ ಮಕ್ಕಳು ಅವರನ್ನು ಕೈಯಲ್ಲಿ ಎತ್ತಿಕೊಂಡು ಬಂದು ವಾಹನ ಹತ್ತಿಸಿದ್ದಾರೆ. ನಂತರ ವಡ್ಡರ್ಸೆಯ ಮತಕೇಂದ್ರಕ್ಕೆ ಕರೆತಂದು ಮತದಾನ ಮಾಡಿಸಿದ್ದಾರೆ. ‌

Voting for the sick Brahmavar Tahsildar RajaShekar Humanity 3

ಮತದಾನದ ಹಕ್ಕಿನಿಂದ ಯಾರೊಬ್ಬರೂ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ತಹಶೀಲ್ದಾರ್‌ ಅವರು ಮಾಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಧಿಕಾರಿಗಳ ಕಾಳಜಿಯಿಂದಾಗಿ ಪುಟ್ಟಿ ಮರಕಾಲ್ತಿ ಅವರ ಮತದಾನದ ಕನಸು ಈಡೇರಿಕೆಯಾದಂತಾಗಿದೆ. ತಹಶೀಲ್ದಾರ್‌ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : Sringeri : ಚುನಾವಣಾ ಕರ್ತವ್ಯ ಲೋಪ : ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅಮಾನತ್ತು

ಇದನ್ನೂ ಓದಿ : ಉಡುಪಿಯಲ್ಲಿ ಕೈಕೊಟ್ಟ ಮತಯಂತ್ರ : ಕುಕ್ಕೆಕಟ್ಟೆಯಲ್ಲಿ ರಕ್ಷಿತ್‌ ಶೆಟ್ಟಿ ಮತದಾನ

ಇದನ್ನೂ ಓದಿ : ಮದ್ಯ ಪ್ರಿಯರಿಗೆ ಶಾಕ್ ! ಮೂರು ದಿನ ಮದ್ಯ ಮಾರಾಟ ಬಂದ್

ಇದನ್ನೂ ಓದಿ : ಕರ್ನಾಟಕ ಚುನಾವಣೆ 2023 : ಮತದಾನದ ದಿನಾಂಕ, ಫಲಿತಾಂಶ, ಪ್ರಮುಖ ಕ್ಷೇತ್ರಗಳು ಇಲ್ಲಿದೆ ಸಂಪೂರ್ಣ ವಿವರ

Comments are closed.