healthy lifestyle :ಅತ್ಯುತ್ತಮ ಜೀವನಶೈಲಿಗಾಗಿ ಅನುಸರಿಸಿ ಈ ಪಂಚ ಸೂತ್ರ..!

healthy lifestyle ಎರಡು ವರ್ಷಗಳ ಹಿಂದೆ ಕೊರೊನಾ ಸಾಂಕ್ರಾಮಿಕಕ್ಕೆ ಒಳಗಾದಾಗಿನಿಂದ ಎಲ್ಲರ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ. ಬಹುತೇಕ ಜನರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ. ಇದೀಗ ವರ್ಕ್​ ಫ್ರಾಮ್​ ಹೋಮ್​ ಶೈಲಿಯು ಎರಡು ವರ್ಷಗಳಿಂದಲೂ ನಡೆದುಕೊಂಡು ಬಂದಿರೋದ್ರಿಂದ ಅನೇಕರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಉದಾಸೀನದಿಂದ ಕೂಡಿರುತ್ತಿದ್ದ ಜೀವನ ಶೈಲಿಯು ವರ್ಕ್ ಫ್ರಾಮ್​ ಹೋಮ್​ನಿಂದ ಮತ್ತಷ್ಟು ಜಡವಾಗಿದೆ. ವ್ಯಾಯಾಮಯದ ಕೊರತೆ, ಅಕಾಲಿಕ ನಿದ್ರೆ, ಅತಿಯಾಗಿ ತಿನ್ನುವುದು ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಅನೇಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು , ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.


ಮನೆಯಲ್ಲಿಯೇ ಇದ್ದರೂ ಸಹ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಅನುಸರಿಸಿ ಈ ಮಾರ್ಗ :

ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಿ
ಇದು ನಿಮಗೆ ಪುನರಾವರ್ತಿ ಸಲಹೆ ಎನಿಸಬಹುದು. ಆದರೆ ಆರೋಗ್ಯಕರ ಜೀವನ ಶೈಲಿಗೆ ಆರೋಗ್ಯಕರ ಆಹಾರ ಅತ್ಯಂತ ಪ್ರಮುಖವಾಗಿದೆ. ನೀವು ಯಾವುದೇ ನಿರ್ದಿಷ್ಟ ವೇಳಾಪಟ್ಟಿಯಿಲ್ಲದೇ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದರೂ ಸಹ ಊಟದ ಸಮಯದಲ್ಲಿ ರಾಜಿ ಮಾಡಿಕೊಳ್ಳದಿರಿ. ಪ್ರೋಟಿನ್​ ಹಾಗೂ ಹೆಚ್ಚು ನಾರುಯುಕ್ತ ಆಹಾರವನ್ನು ಸೇವನೆ ಮಾಡಿ. ಸಕ್ಕರೆ, ಕೊಬ್ಬು ಹಾಗೂ ಉಪ್ಪಿನಂಶ ಹೆಚ್ಚಿರುವ ಆಹಾರ ಸೇವನೆ ಮಾಡಬೇಡಿ.

ದಿನನಿತ್ಯ ವ್ಯಾಯಾಮ
ಏರೋಬಿಕ್ಸ್, ಜುಂಬಾ ಅಥವಾ ಇತರ ಕಾರ್ಡಿಯೋ ವ್ಯಾಯಾಮಗಳು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಟ್ರ್ಯಾಕ್ ಮಾಡಲು ಉತ್ತಮ ಮಾರ್ಗವಾಗಿದೆ. ಜಡ ಜೀವನಶೈಲಿಯಿಂದ ಹೊಟ್ಟೆಯ ಮೇಲೆ ಕುಳಿತ ಕೊಬ್ಬು ನಿಯಮಿತ ವ್ಯಾಯಾಮದಿಂದ ಕರಗಲಿದೆ.

ಹೆಚ್ಚೆಚ್ಚು ನೀರು ಕುಡಿಯಿರಿ.
ಅತಿಯಾಗಿ ನೀರು ಸೇವನೆ ಮಾಡುವುದರಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುವುದರ ಜೊತೆಯಲ್ಲಿ ಆರೋಗ್ಯವೂ ಸುಧಾರಿಸಲಿದೆ.

ಅನಾರೋಗ್ಯಕರ ಅಭ್ಯಾಸಗಳನ್ನು ತಪ್ಪಿಸಿ
ಮದ್ಯಪಾನ, ಧೂಮಪಾನ ಅಥವಾ ಮಾದಕ ವ್ಯಸನವು ಸಾಮಾನ್ಯವಾಗಿ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಇವುಗಳಲ್ಲಿ ಯಾವುದಾದರೂ ಅಭ್ಯಾಸವನ್ನು ಹೊಂದಿದ್ದರೆ, ಕ್ರಮೇಣ ಅವುಗಳನ್ನು ನಿಲ್ಲಿಸಲು ಪ್ರಯತ್ನಿಸಿ. ಇದು ಉತ್ತಮ ಜೀವನಶೈಲಿಗೆ ಕಾರಣವಾಗುವುದಲ್ಲದೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತದೆ

ಧ್ಯಾನ ಮಾಡಿ
ದೀರ್ಘಕಾಲದ ಕಾಯಿಲೆಗಳನ್ನು ಉಂಟು ಮಾಡಲು ಪ್ರಮುಖ ಕಾರಣ ಒತ್ತಡ. ಒತ್ತಡವು ದೇಹದ ರಕ್ತದ ಸಕ್ಕರೆಯ ಮಟ್ಟಗಳು, ಆಹಾರದ ಆಯ್ಕೆಗಳು, ದೇಹದ ತೂಕ, ಅನಾರೋಗ್ಯಕ್ಕೆ ಒಳಗಾಗುವಿಕೆ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಯೋಗಕ್ಷೇಮಕ್ಕಾಗಿ, ನಿಯಮಿತವಾಗಿ ಧ್ಯಾನ ಮಾಡುವುದು ಸೂಕ್ತ. ದಿನಕ್ಕೆ ಕೆಲವು ನಿಮಿಷಗಳನ್ನು ಧ್ಯಾನಕ್ಕಾಗಿ ಮೀಸಲಿಡುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ.

ಇದನ್ನು ಓದಿ : Skincare Tips : ಹುಷಾರ್‌! ಅಡುಗೆ ಮನೆಯ ಈ ಪದಾರ್ಥಗಳು ನಿಮ್ಮ ಕೋಮಲ ತ್ವಚೆಗೆ ಹಾನಿಮಾಡಬಹುದು! ಅವುಗಳಿಂದ ದೂರವಿರಿ

ಇದನ್ನೂ ಓದಿ : Ice cubes For Glowing Skin : ತ್ವಚೆಯ ಸಮಸ್ಯೆಗಳಿಗೆ ಐಸ್‌ ಕ್ಯೂಬ್‌ ಉಪಯೋಗಿಸಿದ್ದೀರಾ ? ಐಸ್‌ ಕ್ಯೂಬ್‌ ಉಪಯೋಗಿಸಿ ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

5 Wellness Tips For A Healthy Lifestyle

Comments are closed.