Ajawan And Camphor Health Tips:ಅಜವಾನ, ಪಚ್ಚ ಕರ್ಪೂರ ಬಳಸಿದ್ರೆ ಶೀತ ,ಕೆಮ್ಮು ,ತಲೆನೋವು ಕಡಿಮೆಯಾಗುತ್ತೆ

(Ajawan And Camphor Health Tips)ಅಜವಾನ ಸೇವನೆ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ಪಚ್ಚ ಕರ್ಪೂರ ಕೂಡ ಔಷಧೀ ಆಗಿ ಬಳಕೆ ಮಾಡುತ್ತಾರೆ ಎಂಬ ಮಾಹಿತಿ ಕಡಿಮೆ ಜನರಿಗೆ ತಿಳಿದಿರುತ್ತದೆ. ಹೌದು ಅಜವಾನ ಮತ್ತು ಪಚ್ಚ ಕರ್ಪೂರವನ್ನು ಬಳಕೆ ಮಾಡುವುದರಿಂದ ಶೀತ , ಕೆಮ್ಮು,ತಲೆನೋವಿನಿಂದ ಮುಕ್ತಿ ಪಡೆಯಬಹುದು. ಅಜವಾನ , ಪಚ್ಚ ಕರ್ಪೂರದಿಂದ ತಲೆನೋವು ಹೇಗೆ ನಿವಾರಿಸುವುದು ಎಂಬ ಮಾಹಿತಿಯ ಕುರಿತು ತಿಳಿದುಕೋಳ್ಳಿ.

(Ajawan And Camphor Health Tips)ಶೀತ, ತಲೆನೋವಿನ ನಿವಾರಣೆಯ ಮಾಹಿತಿ:
ಶೀತ , ತಲೆನೋವು ನಿವಾರಣೆ ಆಗಲು ಅಜವಾನ ಮತ್ತು ಪಚ್ಚ ಕರ್ಪೂರವನ್ನು ಪುಡಿಮಾಡಿ ನೀರಲ್ಲಿ ಹಾಕಿ ಹಬೆಯನ್ನು ತೆಗೆದುಕೊಳ್ಳಬೇಕು. ಕುಟ್ಟಣಿಗೆಯಲ್ಲಿ ಒಂದು ಚಮಚ ಅಜವಾನ , ಒಂದು ಪಚ್ಚ ಕರ್ಪೂರ ಹಾಕಿ ಕುಟ್ಟಿ ಪುಡಿಮಾಡಿಕೊಳ್ಳಬೇಕು( ಅಂಗಡಿಯಲ್ಲಿ ನೈಸರ್ಗಿಕವಾಗಿ ಸಿಗುವಂತಹ ಪಚ್ಚ ಕರ್ಪೂರವನ್ನು ಖರೀದಿ ಮಾಡಿ). ಬೌಲ್ ನಲ್ಲಿ ಅರ್ಧ ಲೀಟರ್‌ ನೀರು ಹಾಕಿಕೊಂಡು ಅದಕ್ಕೆ ಪುಡಿ ಮಾಡಿ ಇಟ್ಟುಕೊಂಡ ಅಜವಾನ ಮತ್ತು ಕರ್ಪೂರ ಮಿಶ್ರಣ ಹಾಕಿಕೊಂಡು ಹಬೆಯನ್ನು ತೆಗೆದುಕೊಂಡರೆ ಶೀತ ಕಡಿಮೆ ಆಗುತ್ತದೆ.

ಕೆಮ್ಮು ನಿವಾರಣೆಯ ಮಾಹಿತಿ:
ಶುಭ್ರ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಎರಡು ಚಮಚ ಅಜವಾನ , ಒಂದು ಪಚ್ಚ ಕರ್ಪೂರ ಹಾಕಿ ಗಂಟು ಕಟ್ಟಿಕೊಂಡು ದೊಸೆ ಹಂಚಿನಲ್ಲಿ ಬಿಸಿಮಾಡಿಕೊಳ್ಳಬೇಕು. ನಂತರ ಬೇವಿನ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್‌ ಮಾಡಿ ಅಜವಾನ, ಪಚ್ಚ ಕರ್ಪೂರದ ಗಂಟನ್ನು ಎದೆಯ ಮೇಲೆ ಇರಿಸಿ ಶಾಖ ಕೊಡಬೇಕು. ಹೀಗೆ ಮಾಡುವುದರಿಂದ ಎದೆಯಲ್ಲಿ ಕಫ ಕರಗಿ ಕೆಮ್ಮು ಕಡಿಮೆ ಆಗುತ್ತದೆ.

ತಲೆನೋವು ನಿವಾರಣೆ ಮಾಹಿತಿ:
ತಲೆನೋವಿನಿಂದ ಬಳಲುತ್ತಿರುವವರು ಒಂದು ಕಪ್‌ ನೀರಿಗೆ ಒಂದು ಚಮಚ ಅಜವಾನವನ್ನು ಹಾಕಿ ನೆನಸಿಡಬೇಕು. ಆ ನೀರನ್ನು ಕುಡಿಯುವುದರಿಂದ ತಲೆನೋವಿಗೆ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲದೆ ಅಜವಾನದ ನೀರನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಅಜವಾನ ನೆನಸಿಟ್ಟ ನೀರು ಕುಡಿಯುವುದರಿಂದ ವೇಗವಾಗಿ ತೂಕ ಇಳಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:How To Improve Eyesight:ಕಣ್ಣಿನ ದೃಷ್ಟಿ ಹೆಚ್ಚಿಸಿಕೊಳ್ಳಬೇಕೆ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ……

ಇದನ್ನೂ ಓದಿ:White Spots Removal:ಬಿಳಿಸಿಬ್ಬು ನಿವಾರಣೆಗೆ ಮನೆಯಲ್ಲಿದೆ ಮದ್ದು

ಪಚ್ಚಕರ್ಪೂರ
ಪೂಜೆಗೆ ಬಳಸುವ ಪಚ್ಚಕರ್ಪೂರ ದೇಹದ ಭಾಗದಲ್ಲಿ ಬಾವು ಮತ್ತು ಉರಿ ಇದ್ದರೆ ನಿವಾರಣೆ ಮಾಡುತ್ತದೆ. ಪಚ್ಚಕರ್ಪೂರವನ್ನು ಪುಡಿಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಬೇರೆಸಿ ಅದನ್ನು ಹಚ್ಚಿಕೊಳ್ಳುವುದರಿಂದ ದೇಹದ ಬಾಗದಲ್ಲಿ ಬಾವು ಮತ್ತು ಉರಿಯನ್ನು ನಿವಾರಣೆ ಮಾಡುತ್ತದೆ (ನೈಸರ್ಗಿಕವಾಗಿ ಸಿಗುವಂತಹ ಪಚ್ಚಕರ್ಪೂರವನ್ನು ಬಳಕೆ ಮಾಡಿ).

Ajawan And Camphor Health Tips Ajawan, camphor is to reduce cold, cough and headache

Comments are closed.