Diabetes Bhagavad Gita : ನೀವು ಡಯಾಬಿಟಿಸ್ ನಿಂದ ಬಳಲುತ್ತಿದ್ದೀರಾ : ಹಾಗಿದ್ದರೇ ಭಗವದ್ಗೀತೆ ಓದಿ ! ಗೀತೆಯಲ್ಲಿದೆ ಮಧುಮೇಹಕ್ಕೆ ಮದ್ದು

ಒಸ್ಮಾನಿಯಾ: ನೀವು ಮಧುಮೇಹದಿಂದ (Diabetes ) ಬಳಲುತ್ತಿದ್ದೀರಾ? ಈ ಕಾಯಿಲೆಗೆ ಶಾಶ್ವತ ಪರಿಹಾರ ಬಯಸುತ್ತಿದ್ದೀರಾ? ಹಾಗಿದ್ದರೇ ದಿನವೂ ಭಗವದ್ಗೀತೆ (Bhagavad Gita ) ಪಠಿಸಿ. ಹಾಗಂತ ನಾವು ಹೇಳ್ತಿಲ್ಲ. ಬದಲಾಗಿ ಈ ಬಗ್ಗೆ ಅಧ್ಯಯನ ನಡೆಸಿದ ತಜ್ಞರು ಹೇಳ್ತಿದ್ದಾರೆ. ನಿಮ್ಮ ಡಯಾಬಿಟಿಸ್ ನ್ನು ದೂರ ಮಾಡುವ ಶಕ್ತಿ ಭಗವದ್ಘೀತೆಗೆ ಇದೆಯಂತೆ. ಮಧುಮೇಹಿಗಳು ಹೇಗೆ ತಮ್ಮ ಆಹಾರದಲ್ಲಿ ಪಥ್ಯ ಅನುಸರಿಸುತ್ತಾರೋ ಹಾಗೆ ಅದರೊಂದಿಗೆ ಪ್ರತಿನಿತ್ಯ ಗೀತಾಪಠಣ ಮಾಡುವ ಮೂಲಕ ತಮ್ಮ ಶುಗರ್ ನ್ನು ನಿಯಂತ್ರಣಕ್ಕೆ ತಂದು ಸಮಸ್ಯೆ ನಿವಾರಿಸಿಕೊಳ್ಳಬಹುದಂತೆ. ಇದನ್ನು ಒಸ್ಮಾನಿಯಾ ಯುನಿವರ್ಸಿಟಿ ದೃಡ ಪಡಿಸಿದೆ.

ಒಸ್ಮಾನಿಯಾ ವಿಶ್ವವಿದ್ಯಾಲಯದ (osmania university)ತಜ್ಞರು  ಈ ಬಗ್ಗೆ ಸಂಶೋಧನೆ ನಡೆಸಿದ್ದು, ಹಲವು ಮಧುಮೇಹಿ ರೋಗಿಗಳ ಮೇಲೆ ಪ್ರಯೋಗಿಸಿ ಯಶಸ್ಸು ಕಂಡಿದ್ದಾರೆ. ಭಗವದ್ಗೀತೆಯಲ್ಲಿ  ತನ್ನ ಸಹೋದರರ ವಿರುದ್ಧ ಮಾಡಲು ಹಿಂಜರಿದ ಅರ್ಜುನ್ ನಿಗೆ ಶ್ರೀಕೃಷ್ಣಯುದ್ಧ ಧರ್ಮ ಹಾಗೂ ಬದುಕಿನ ಧರ್ಮವನ್ನು ಬೋಧಿಸಿದ್ದಾನೆ. ಈ  ಭಗವದ್ಗೀತೆ ಯಲ್ಲಿ 700 ಶ್ಲೋಕ್ ಗಳಿವೆ. ಇದರಲ್ಲಿ ಬಹುತೇಕ ಶ್ಲೋಕಗಳು ಮನುಷ್ಯನ ಮಾನಸಿಕ ತುಮುಲವನ್ನು ಕಟ್ಟಿಕೊಡು ವಂತಿದೆ. ಮನುಷ್ಯನ ಮನಸ್ಸು, ದೇಹ, ಅದರ ಸ್ವಭಾವ, ಮನುಷ್ಯ ಬದುಕಬೇಕಾದ ರೀತಿ-ನೀತಿ, ಅನುಸರಿಸಬೇಕಾದ ಧರ್ಮ, ಪಾಲಿಸಬೇಕಾದ ನಿಯಮಗಳು, ಬದುಕಿನ ತತ್ವ, ಯುದ್ಧದ ರೀತಿನೀತಿ ಸಮಸ್ಥಿತಿ, ಸ್ಥಿತಪ್ರಜ್ಞೆ ಹೀಗೆ ಬದುಕಿನ ಬೇಕಾದ ಅಂಶಗಳನ್ನೇ ಭಗವದ್ಗೀತೆ ಬೋಧಿಸಿದೆ.

ಒಸ್ಮಾನಿಯಾ ತಜ್ಞರ ಪ್ರಕಾರ, ಮನುಷ್ಯ ಇದನ್ನು ಓದಿ ಸರಿಯಾಗಿ ಅರ್ಥೈಸಿಕೊಂಡು ಓದಿದರೇ, ಅರ್ಥ ಮಾಡಿಕೊಂಡರೇ, ಇದು ಮನಸ್ಸಿನ ರಾಗದ್ವೇಷಗಳನ್ನು ನಿವಾರಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ. ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ರಕ್ತದೊತ್ತಡ ನಿಯಂತ್ರಣಕ್ಕೆಬಂದರೇ ರಕ್ತದಲ್ಲಿನ ಸಕ್ಕರೆ ಅಂಶವು ಸಮತೋಲನ ಕಾಯ್ದುಕೊಳ್ಳುತ್ತದೆ. ಇದರಿಂದ ನೀವು ಶುಗರ್ ಸಮಸ್ಯೆಯಿಂದ ಪಾರಾಗಬಹುದು ಎಂದಿದ್ದಾರೆ.

ಈ ಅಧ್ಯಯನದಲ್ಲಿ ಒಸ್ಮಾನಿಯಾ ವಿವಿ ಜೊತೆ, ಢಾಕಾ ಮೆಡಿಕಲ್ ಕಾಲೇಜ್ ಹಾಸ್ಟಿಟಲ್ ಹಾಗೂ ಪಾಕಿಸ್ತಾನದ ಕರಾಚಿಯ ಆಗಾ ಖಾನ್ ಯೂನಿವರ್ಸಿಟಿ ತಜ್ಞರು ಸಹ ಪಾಲ್ಗೊಂಡಿ ದ್ದರು ಎನ್ನಲಾಗಿದೆ. ಮನುಷ್ಯನಿಗೆ ತನಗೆ ಮಧುಮೇಹವಿದೆ ಎಂಬುದು ಗೊತ್ತಾದಾಗ ಆತ ಹತಾಶನಾಗುತ್ತಾನೆ. ಆತನ ಮನಸ್ಸಿನಲ್ಲಿ ದುಃಖ, ಸಾವಿನ ಭಯ, ಅಸಹಾಯಕತೆ, ಚಿಂತೆ ಆವರಿಸಿಕೊಳ್ಳುತ್ತದೆ. ಇದೆಲ್ಲದಕ್ಕೂ ಉತ್ತರ ಗೀತೆಯಲ್ಲಿರೋದರಿಂದ ಶುಗರ್ ನಿಯಂತ್ರಣಕ್ಕೆ ಭಗವದ್ಗೀತೆ ಒಳ್ಳೆಯ ಔಷಧ ಎಂದು ತಜ್ಞರು ಹೇಳಿದ್ದಾರೆ.

https://kannada.newsnext.live/lady-escape-highschool-student-diffrent-love/

ಇದನ್ನೂ ಓದಿ : Beat the Heat : ಬಿಸಿಲಿನ ಬೇಗೆ ನೀಗಿಸಲು ಉತ್ತಮ ತಂಪು ತಂಪು ಎಳನೀರು ಮತ್ತು ಮಜ್ಜಿಗೆ!

ಇದನ್ನೂ ಓದಿ : ವಾಯುಮಾಲಿನ್ಯದಿಂದ ಆಸ್ತಮಾ ಹೇಗೆ ಹೆಚ್ಚಾಗುತ್ತದೆ ಎಂಬುದು ನಿಮಗೆ ಗೊತ್ತಾ?

Are you suffering from Diabetes: So read the Bhagavad Gita

Comments are closed.