Banana Scrub :ಚಳಿಗಾಲದಲ್ಲಿ ಮುಖ ಒಡೆಯದಂತೆ ರಕ್ಷಿಸಲು ಬಾಳೆಹಣ್ಣಿನ ಸ್ಕ್ರಬ್‌

(Banana Scrub) ಚಳಿಗಾಲದಲ್ಲಿ ತ್ವಚೆ ಒಡೆಯಬಾರದು ಎಂದು ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡುತ್ತೇವೆ. ತ್ವಚೆಯ ಆರೈಕೆಯ ಜೊತೆಗ ಮುಖದ ಆರೈಕೆಯು ಕೂಡ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ಮುಖ ಒಡೆಯದಂತೆ ನೋಡಿಕೊಳ್ಳಲು ಬಾಳೆಹಣ್ಣಿನ ಸ್ಕ್ರಬ್‌ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಚಳಿಗಾಲದಲ್ಲಿ ನಿಮ್ಮ ಮುಖ ಬಿರುಕು ಬಿಡುವುದರಿಂದ ತಪ್ಪಿಸಿಕೊಳ್ಳಬಹುದು. ಬಾಳೆಹಣ್ಣಿನ ಸ್ಕ್ರಬ್‌ ಹೇಗೆ ಮಾಡುವುದು ಎಂಬುದರ ಕುರಿತು ಮಾಹಿತಿ ತಿಳಿಯೋಣ.

(Banana Scrub) ಬೇಕಾಗುವ ಸಾಮಾಗ್ರಿಗಳು:

  • ಬಾಳೆಹಣ್ಣು
  • ಹಾಲು
  • ಕಾಫಿಪುಡಿ
  • ಕಡ್ಲೆಹಿಟ್ಟು

ಮಾಡುವ ವಿಧಾನ:
ಸಣ್ಣದಾಗಿ ಹೆಚ್ಚಿಕೊಂಡ ಬಾಳೆಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು . ರುಬ್ಬಿಕೊಂಡ ಬಾಳೆಹಣ್ಣನ್ನು ಬೌಲ್‌ ಗೆ ಹಾಕಿಕೊಂಡು ಒಂದು ಚಮಚ ಹಾಲು, ಅರ್ಧ ಚಮಚ ಕಾಫಿ ಪುಡಿ, ಅರ್ಧ ಚಮಚ ಕಡ್ಲೆ ಹಿಟ್ಟು ಹಾಕಿ ಮಿಶ್ರಣ ಮಾಡಿಕೊಂಡು ಫೇಸ್‌ ಸ್ಕ್ರಬ್‌ ತಯಾರಿಸಿಕೊಳ್ಳಬೇಕು ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಸ್ಕ್ರಬ್‌ ಮಾಡುತ್ತಾ ಮುಖ ತೊಳೆದರೆ ನಿಮ್ಮ ಮುಖ ಬಿರುಕು ಬಿಡದಂತೆ ನೋಡಿಕೊಳ್ಳುತ್ತದೆ. ಕಲೆ ಮತ್ತು ಪಿಂಪಲ್‌ ಅನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Mouth Ulce Relief:ಬಾಯಿ ಹುಣ್ಣಿನಿಂದ ಆಹಾರ ಸೇವಿಸಲು ಆಗುತ್ತಿಲ್ಲವೇ ? ಹಾಗಾದ್ರೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

ಇದನ್ನೂ ಓದಿ:Sinus Headache Remedies:ಸೈನಸ್‌ ತಲೆನೊವಿನಿಂದ ಮುಕ್ತಿ ಪಡೆಯಲು ಈ ಮೂರು ಪದಾರ್ಥ ಟ್ರೈ ಮಾಡಿ

ಇದನ್ನೂ ಓದಿ:Blocked Nose : ನಿಮಗೆ ಶೀತದಿಂದ ಮೂಗು ಕಟ್ಟಿದೆಯೇ; ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ

ಫೇಸ್‌ ಪ್ಯಾಕ್‌

ಬೇಕಾಗುವ ಸಾಮಾಗ್ರಿಗಳು:

  • ಮೊಸರು
  • ಕಡ್ಲೆಹಿಟ್ಟು
  • ಜೇನುತುಪ್ಪ
  • ನಿಂಬೆರಸ

ಮಾಡುವ ವಿಧಾನ:
ಬೌಲ್ ನಲ್ಲಿ ಎರಡು ಚಮಚ ಮೊಸರು, ಒಂದು ಚಮಚ ಕಡ್ಲೆ ಹಿಟ್ಟು, ಅರ್ಧ ಚಮಚ ಜೇನುತುಪ್ಪ, ಎರಡು ಹನಿ ನಿಂಬೆರಸ ಹಾಕಿ ಮಿಶ್ರಣ ಮಾಡಿಕೊಂಡು ಫೇಸ್‌ ಪ್ಯಾಕ್‌ ತಯಾರಿಸಿಕೊಳ್ಳಬೇಕು . ಈ ಪೇಸ್‌ ಪ್ಯಾಕ್‌ ಅನ್ನು ಮುಖಕ್ಕೆ ಲೇಪನ ಮಾಡಿಕೊಂಡು ಇಪ್ಪತ್ತು ನಿಮಿಷ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆದರೆ ಮುಖದ ಕಲೆಗಳನ್ನು ಕಡಿಮೆ ಮಾಡಿ ಮುಖದ ಕಾಂತಿ ಹೆಚ್ಚಿಸುತ್ತದೆ.

ಬಾಳೆಹಣ್ಣು
ಬಾಳೆಹಣ್ಣು ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನ ಪಡೆದುಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪೌಷ್ಠಿಕಾಂಶ ಇರುವುದರಿಂದ ಆರೋಗ್ಯವನ್ನು ಕಾಪಾಡುವುದಲ್ಲದೇ, ಕೂದಲು ಮತ್ತು ಚರ್ಮದ ಸೌಂಧರ್ಯವನ್ನು ಕಾಪಾಡಲು ಸಹಕಾರಿ ಆಗಿದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶ ಒಣ ಚರ್ಮ ಹಾಗೂ ಒಣ ಕೂದಲಿನ ಪೋಷಣೆಯನ್ನು ಮಾಡುತ್ತದೆ. ಬರಿ ಬಾಳೆಹಣ್ಣನ್ನು ರುಬ್ಬಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದ ಬಿರುಕು ಕಡಿಮೆ ಆಗುತ್ತದೆ. ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಸ್ಕ್ರಬ್‌ ರೀತಿಯಲ್ಲಿ ಬಳಸುವುದರಿಂದ ಮುಖದಲ್ಲಿರುವ ಕಪ್ಪು ಕಲೆಯನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ ಆಗಿದೆ.

Banana scrub to protect face from breakouts in winters

Comments are closed.