The leopard: ಬೆಂಗಳೂರಲ್ಲಿ ಚಿರತೆ ಕಾಟ :ಶಾಲೆಗೆ ತೆರಳಲು ಮಕ್ಕಳಿಗೆ ಆತಂಕ

ಬೆಂಗಳೂರು: (The leopard) ಕಾಡು ಪ್ರದೇಶಗಳಲ್ಲಿ ಚಿರತೆ ಕಾಟ ಕಂಡು ಬರುವುದು ಸಾಮಾನ್ಯ. ಆದ್ರೀಗ ಸಿಲಿಕಾನ್ ಸಿಟಿ ಬೆಂಗಳೂರಲ್ಲಿಯೂ ಚಿರತೆಯ ಭಯ ಶುರುವಾಗಿದೆ. ಬೆಂಗಳೂರಿನ ಕೋಡಿಪಾಳ್ಯದಲ್ಲಿ ನಾಲ್ಕು ಚಿರತೆಗಳು ಕಂಡು ಬಂದಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿ ಮೈಸೂರು ಬೆನ್ನಲ್ಲೇ ಇದೀಗ ಬೆಂಗಳೂರಲ್ಲಿಯೂ ಚಿರತೆಗಳ (The leopard) ಹಾವಳಿ ಶುರುವಾಗಿದೆ. ಬೆಂಗಳೂರಿನ ಉತ್ತರ ಹಳ್ಳಿ ಮುಖ್ಯ ರಸ್ತೆಯ ಕೋಡಿಪಾಳ್ಯದ ಬಿಜಿಎಸ್ ಆಸ್ಪತ್ರೆಯ ಹಿಂಬದಿಯ ಗೇಟ್ ಬಳಿ ಚಿರತೆ, ಜಿಂಕೆಯನ್ನು ಬೇಟೆಯಾಡಿ ತಿಂದು ಹೋಗಿರುವುದು ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಕೋಡಿಪಾಳ್ಯ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಇಂದು ಬೆಳಗ್ಗಿನ ಜಾವ ರಸ್ತೆಯ ಪಕ್ಕದಲ್ಲೇ ಜಿಂಕೆಯನ್ನು ಚಿರತೆ ಬೇಟೆಯಾಡಿರುವುದು ಕಂಡುಬಂದಿದೆ.

ಈ ಪ್ರದೇಶದಲ್ಲಿ ಒಟ್ಟು 4 ಚಿರತೆಗಳು ಓಡಾಡುತ್ತಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ವಾಕಿಂಗ್ ಮತ್ತು ಮುಖ್ಯ ರಸ್ತೆಗೆ ಹೋಗಲು ಈ ರಸ್ತೆಯನ್ನು ಬಳಸುತಿದ್ದು, ಈ ನಡುವೆ ಇದೇ ರಸ್ತೆಯಲ್ಲಿ ಒಟ್ಟು 5 ಶಾಲೆಗಳಿವೆ. ಹಾಗಾಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಭಯಬೀತರಾಗಿದ್ದಾರೆ.

ಇದನ್ನೂ ಓದಿ : MBBS students: ರಾಜೀವ್‌ ಗಾಂಧಿ ವಿವಿ ಕುಲಸಚಿವರ ನಿರ್ಲಕ್ಷ್ಯ: ಹೈಕೋರ್ಟ್‌ ಮೆಟ್ಟಿಲೇರಿದ MBBS ವಿದ್ಯಾರ್ಥಿಗಳು

ಇದನ್ನೂ ಓದಿ : Rape by bus driver: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ

ಇದನ್ನೂ ಓದಿ : Assault on staff: ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ಹಲ್ಲೆ: 7 ಮಂದಿ ಅರೆಸ್ಟ್

ಈ ಕುರಿತು ನಗರದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಇನ್ನೊಂದೆಡೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇಟ್ಟು ಚಿರತೆಯನ್ನು ಸೇರೆ ಹಿಡಿಯುವುದಕ್ಕಾಗಿ ಹಾತೊರೆಯುತ್ತಿದ್ದಾರೆ.

(The leopard) It is common to find leopards in wild areas. Meanwhile, the fear of leopards has also started in Silicon City Bangalore. Four leopards have been found in Kodipalya, Bengaluru. Due to this, children are afraid to go to school.

Comments are closed.