Skin care : ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಟೀ ಟ್ರೀ ಎಣ್ಣೆ

Skin care : ಸೌಂದರ್ಯ ರಕ್ಷಣೆಯ ವಿಚಾರಕ್ಕೆ ಬಂದರೆ ಹೆಣ್ಣು ಮಕ್ಕಳು ಹೆಚ್ಚು ಅಲರ್ಟ್​ ಆಗಿರ್ತಾರೆ. ಹೀಗಾಗಿಯೇ ಸೌಂದರ್ಯವರ್ಧನೆಗೆಂದೇ ಮಾರುಕಟ್ಟೆಗಳಲ್ಲಿ ಸಾಕಷ್ಟು ಉತ್ಪನ್ನಗಳು ನಿಮಗೆ ಸಿಗುತ್ತದೆ. ಆದರೆ ಇದರಲ್ಲಿ ಯಾವುದನ್ನು ಖರೀದಿಸಬೇಕು ಎಂಬುವುದೇ ಒಂದು ದೊಡ್ಡ ಗೊಂದಲವಾಗಿಬಿಡುತ್ತದೆ. ಕೆಲವೊಂದು ಉತ್ಪನ್ನಗಳು ಕೂದಲು ಹಾಗೂ ತ್ವಚೆಯ ಆರೈಕೆಗೆಂದು ತಯಾರಿಸಲಾಗಿದೆಯಾದರೂ ಸಹ ಅದರಲ್ಲಿರುವ ರಾಸಾಯನಿಕಗಳು ನಿಮ್ಮ ಚರ್ಮದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು.

ಇಂತಹ ಸಮಸ್ಯೆಗಳಿಂದ ಹೊರಬರಲು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಅವುಗಳ ವಿಶೇಷತೆ ಏನೆಂದರೆ, ಅವುಗಳನ್ನು ಸರಿಯಾಗಿ ಬಳಸಿದರೆ ಅದು ಹಾನಿಕಾರಕವಲ್ಲ.ಟೀ ಟ್ರಿ ಎಣ್ಣೆಯ ಬಗ್ಗೆ ನೀವು ಕೇಳಿರಬಹುದು. ಇದರ ಪ್ರಯೋಜನದ ಬಗ್ಗೆ ಇಲ್ಲಿದೆ ಮಾಹಿತಿ :

ಮೊಡವೆ ನಿವಾರಣೆ :
ಮೊಡವೆ ಸಮಸ್ಯೆಗಳು ಶುರುವಾಯ್ತು ಅಂದರೆ ಸಾಕು ಹೆಣ್ಮಕ್ಕಳಿಗಂತೂ ದೊಡ್ಡ ತಲೆನೋವೇ ಶುರುವಾಗಿಬಿಡುತ್ತದೆ. ಮೊಡವೆಯಿಂದ ಮುಖದ ಅಂದ ಹಾಳೋಗೋದರ ಜೊತೆಯಲ್ಲಿ ಅವುಗಳ ಉಂಟು ಮಾಡುವ ಕಲೆನೋವು ಮತ್ತೊಂದು ಸಮಸ್ಯೆ. ಇದನ್ನು ಹೋಗಲಾಡಿಸಲು ನೀವು ಟೀ ಟ್ರೀ ಎಣ್ಣೆಯನ್ನು ಬಳಕೆ ಮಾಡಬೇಕು. ನೀವು ನಿತ್ಯ ಬಳಸುವ ಮಾಯಿಶ್ಚುರೈಸರ್​​ನಲ್ಲಿ ಕೆಲವು ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡು ಮಲಗಿ. ಈ ರೀತಿ ಮಾಡಿದಲ್ಲಿ ನಿಮಗೆ ಮೊಡವೆ ಸಮಸ್ಯೆ ಉಂಟಾಗೋದಿಲ್ಲ.

ಮಾಯ್ಶ್ಚೂರೈಸರ್​ :
ಈ ಟೀ ಟ್ರೀ ಎಣ್ಣೆಯ ವಿಶೇಷತೆ ಅಂದರೆ ಇದು ಮಾಯಿಶ್ಚರೈಸರ್ ಆಗಿ ಕೂಡ ಕೆಲಸ ಮಾಡುತ್ತದೆ. ಚಳಿಗಾಲ ಅಂದಮೇಲೆ ಚರ್ಮವು ಒಣಗುವುದು ಸರ್ವೇ ಸಾಮಾನ್ಯ. ಹೀಗಾಗಿ ನೀವು ಈ ಸಮಯದಲ್ಲಿ ಟೀ ಟ್ರೀ ಎಣ್ಣೆಯನ್ನು ಬಳಕೆ ಮಾಡುವುದರಿಂದ ಮುಖದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಬಹುದಾಗಿದೆ. ಬೇಕಾದಲ್ಲಿ ನೀವು ಟೀ ಟ್ರೀ ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿಕೊಳ್ಳಬಹುದು.

ತ್ವಚೆಯ ಕಾಂತಿ ಹೆಚ್ಚಿಸುತ್ತದೆ :
ಟೀ ಟ್ರೀ ಎಣ್ಣೆಯು ಚರ್ಮದ ಮೃದುತ್ವವನ್ನು ಕಾಪಾಡುತ್ತದೆ. ಹೀಗಾಗಿ ನೀವಿದನ್ನು ಬಳಕೆ ಮಾಡಿದಲ್ಲಿ ತ್ವಚೆಯ ಕಾಂತಿ ಹೆಚ್ಚಲಿದೆ. ಇದರ ಜೊತೆಯಲ್ಲಿ ತುರಿಕೆ ಸಮಸ್ಯೆ ಹೊಂದಿರುವವರು ಇದನ್ನು ತುರಿಕೆ ಇರುವ ಜಾಗದಲ್ಲಿ ಲೇಪಿಸಬಹುದು. ಇದರಿಂದ ನೀವು ತುರಿಕೆ ಸಮಸ್ಯೆಯಿಂದಲೂ ಮುಕ್ತಿ ಕಾಣಲಿದ್ದೀರಿ.

ಇದನ್ನು ಓದಿ : Best Vastu Tips :ಮಲಗುವ ಕೋಣೆ ಹಾಗೂ ಅಡುಗೆ ಕೋಣೆಯಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ

ಇದನ್ನೂ ಓದಿ : Vaastu Tips Money loss : ಧನಹಾನಿಯಿಂದ ಪಾರಾಗಲು ಮನೆಯಲ್ಲಿ ಈ ಬದಲಾವಣೆಯನ್ನು ಮಾಡಿ

beauty tips in hindi tea tree oil is best in skin care know its benefits

Comments are closed.