Carambola Fruit Health Tips:ಸುಟ್ಟಗಾಯ, ನೋವಿಗೆ ಬಳಸಿ ದಾರೆಹುಳಿ ಎಣ್ಣೆ

(Carambola Fruit Health Tips)ಅಡುಗೆಮನೆಯಲ್ಲಿ ಬಿಸಿ ಇರುವ ಪಾತ್ರೆಗಳಿಂದ ಕೈ ಸುಟ್ಟುಕೊಳ್ಳುವುದು ಮತ್ತು ತರಕಾರಿ ಹೆಚ್ಚುವಾಗ ಕೈ ಗಾಯಮಾಡಿಕೊಳ್ಳುವುದು ಸಾಮಾನ್ಯ, ಅದರಲ್ಲೂ ಮಕ್ಕಳೂ ಕೂಡ ಆಟ ಆಡುವಾಗ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ, ಬಿಸಿ ಇರುವ ಪದಾರ್ಥವನ್ನು ಮೈ ಮೇಲೆ ಬಿಳಿಸಿಕೊಳ್ಳುತ್ತಾರೆ. ಬಿಸಿ ಪದಾರ್ಥ ಬಿದ್ದು ಅತಿ ಹೆಚ್ಚು ಸುಟ್ಟುಕೊಂಡರೆ ವೈದ್ಯರ ಹತ್ತಿರ ಹೋಗುವುದು ಉತ್ತಮ. ದಾರೆಹುಳಿ ಎಣ್ಣೆಯನ್ನು ಸುಟ್ಟ ಗಾಯ ಮತ್ತು ಮೈ ಕೈ ನೋವು, ಗಾಯವಿರುವ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಇದನ್ನು ಕಡಿಮೆ ಮಾಡುತ್ತದೆ. ದಾರೆಹುಳಿಯ ಎಣ್ಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Carambola Fruit Health Tips)ಬೇಕಾಗುವ ಸಾಮಾಗ್ರಿಗಳು:
ದಾರೆಹುಳಿ ಹಣ್ಣು
ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ದಾರೆಹುಳಿ ಹಣ್ಣನ್ನು ಜಜ್ಜಿಕೊಂಡು ರಸ ತೆಗೆದು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ನಂತರ ಬಾಣಲೆಗೆ ಮೂರು ಲೋಟ ದಾರೆಹುಳಿ ರಸ ಹಾಕಿ ಕಾಯಿಸಬೇಕು ಕುದಿ ಬರುತ್ತಿದ್ದ ಹಾಗೆ ಮೂರು ಲೋಟ ಕೊಬ್ಬರಿ ಎಣ್ಣೆ ಹಾಕಿಕೊಂಡು ಚೆನ್ನಾಗಿ ಕುದಿಸಿಕೊಂಡು ತಣ್ಣಗಾಗಲು ಬಿಡಬೇಕು, ಎಣ್ಣೆ ತಣ್ಣಗಾದ ನಂತರ ಡಬ್ಬಿಯ ಮೇಲೆ ಶುಭ್ರ ಬಟ್ಟೆ ಇಟ್ಟುಕೊಂಡು ಅದರ ಮೇಲೆ ಕಾಯಿಸಿಕೊಂಡ ಎಣ್ಣೆ ಹಾಕಿ ಸೊಸಿಕೊಂಡು ಶೇಖರಿಸಿ ಇಡಬೇಕು. ಸುಟ್ಟಗಾಯದ ಮೇಲೆ ಇದನ್ನು ಹಚ್ಚಿದರೆ ಗಾಯ ಕಡಿಮೆ ಆಗುವಂತೆ ಮಾಡುತ್ತದೆ.ಮಂಡಿ ನೋವು , ಬೆನ್ನು ನೋವಿದ್ದರೆ ನೋವಿರುವ ಜಾಗಕ್ಕೆ ಈ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್‌ ಮಾಡಿಕೊಂಡು ನಂತರ ಸ್ನಾನ ಮಾಡುವುದರಿಂದ ನೋವನ್ನುಕಡಿಮೆ ಮಾಡುತ್ತದೆ.

ದಾರೆಹುಳಿ ಹಣ್ಣು

ದಾರೆಹುಳಿ ಹಣ್ಣಿನಿಂದ ಅತಿ ಹೆಚ್ಚಾಗಿ ಉಪ್ಪಿನ ಕಾಯಿ , ತಂಬುಳಿ ಮಾಡಿ ಬಳಕೆ ಮಾಡುತ್ತಾರೆ. ದಾರೆಹುಳಿ ಹಣ್ಣು ನಾರು, ವಿಟಮಿನ್‌ ಎ, ಬಿ ಮತ್ತು ಸಿ ,ಖನಿಜ ರಂಜಕ, ಮೆಗ್ನೀಶಿಯಂ, ಸೋಡಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಂ ಅಂಶಗಳನ್ನು ಹೊಂದಿದೆ. ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ಜೀವ ನಿರೋಧಕ ಶಕ್ತಿಯನ್ನು ಹೆಚ್ಚಾಗುವಂತೆ ಮಾಡುತ್ತದೆ. ಆರೋಗ್ಯಕರ ಕೂದಲು, ಚರ್ಮ,ಉಗುರುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದಾರೆ ಹುಳಿಯನ್ನು ಜಜ್ಜಿಕೊಂಡು ರಸ ತೆಗೆದು ಸಕ್ಕರೆ ಸೇರಿಸಿ ಕರಡಿಕೊಂಡು ಕುಡಿಯುವುದರಿಂದ ಆಂಟಿ ಆಕ್ಸಿಡೆಂಟ್‌ ಆಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ:Calotropis gigantea Leaf Oil:ಮಂಡಿ ನೋವಿನಿಂದ ಬೇಸತ್ತಿದ್ದೀರಾ?ಎಕ್ಕ ಎಲೆಯ ಎಣ್ಣೆ ಬಳಸಿ ನೋಡಿ
ಇದನ್ನೂ ಓದಿ:Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ಎಣ್ಣೆಯಲ್ಲಿ ಕೊಬ್ಬಿನ ಅಂಶ ಹೇರಳವಾಗಿ ಇರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಾಗುವಂತೆ ಮಾಡುತ್ತದೆ. ಒಣ ಚರ್ಮ ಇರುವವರು ಇದನ್ನು ಹಚ್ಚುವುದರಿಂದ ಒಣ ಚರ್ಮವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಲಿನೋಲಿಕ್‌ ಆಮ್ಲ ಚರ್ಮವನ್ನು ಯಾವಾಗಲು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುತ್ತದೆ. ರಾತ್ರಿ ಮುಖಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಲಗುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಮುಖದಲ್ಲಿ ಒಣ ಚರ್ಮ ಹೊಂದಿರುವವರು ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಮುಖದ ಒಣ ಚರ್ಮವನ್ನು ಕಡಿಮೆ ಮಾಡುತ್ತದೆ.

Carambola Fruit Health Tips Use Carambola Fruit oil for burns and pain

Comments are closed.