Control Diabetes Tips: ಮಧುಮೇಹ ಕಂಟ್ರೋಲ್ ಮಾಡಲು ಇಲ್ಲಿದೆ ಬೆಸ್ಟ್ ಟಿಪ್ಸ್

(Control Diabetes Tips)ಸಕ್ಕರೆ ಕಾಯಿಲೆ ಇರುವವರು ಪ್ರತಿದಿನ ಸೇವನೆ ಮಾಡುವ ಆಹಾರ ಕ್ರಮದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದರ ಜೊತೆಗೆ ಹಲವು ಔಷಧೀಗಳನ್ನು ಕೂಡ ಸೇವನೆ ಮಾಡುತ್ತಾರೆ. ಕೆಲವರು ಮನೆಯಲ್ಲಿ ಹಲವು ಮನೆಮದ್ದು ಮಾಡಿಕೊಂಡು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿಯೇ ಮೆಂತ್ಯ, ಅಜ್ವಾನ , ಜೀರಿಗೆಯ ಪುಡಿ ಮಾಡಿ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಪ್ರತಿದಿನ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಪುಡಿಯನ್ನು ತಯಾರಿಸುವ ಮಾಹಿತಿ ಕುರಿತು ತಿಳಿದುಕೊಳ್ಳೋಣ.

(Control Diabetes Tips)ಬೇಕಾಗುವ ಸಾಮಾಗ್ರಿಗಳು:
ಮೆಂತ್ಯ
ಅಜ್ವಾನ (ಓಮದ ಕಾಳು)
ಜೀರಿಗೆ

ಮಾಡುವ ವಿಧಾನ
ಬಾಣಲೆಯಲ್ಲಿ ಮೆಂತ್ಯ, ಅಜ್ವಾನ,ಜೀರಿಗೆ ಹಾಕಿ ಹುರಿದುಕೊಳ್ಳಬೇಕು. ನಂತರ ಹುರಿದುಕೊಂಡ ಪದಾರ್ಥವನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ಪುಡಿಮಾಡಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿದಿನ ಇದನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಈ ಪುಡಿಯನ್ನು ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಈ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕುಡಿಯಬೇಕು ಅಥವ ಹಾಗೆಯೂ ಕೂಡ ಇದನ್ನು ತಿನ್ನಬಹುದು. ಈ ಪುಡಿ ಸೇವನೆ ಮಾಡಿದ ಒಂದು ಗಂಟೆಯ ಬಳಿಕ ಆಹಾರ ಸೇವನೆ ಮಾಡಬೇಕು. ಹೀಗೆ ಪ್ರತಿನಿತ್ಯ ಈ ಪುಡಿಯನ್ನು ತಿನ್ನುವುದರಿಂದ ನಿಮ್ಮ ಶುಗರ್‌ ಕಂಟ್ರೋಲ್‌ ಗೆ ಬರುತ್ತದೆ. ಶುಗರ್‌ ಇಲ್ಲದವರೂ ಕೂಡ ಇದನ್ನೂ ಸೇವನೆ ಮಾಡಿದರೆ ಉತ್ತಮ.

ಮೆಂತ್ಯ
ಮೆಂತ್ಯೆ ಕಾಳನ್ನು ನೀರಲ್ಲಿ ನೆನಸಿ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಹಸಿವನ್ನು ಕಡಿಮೆ ಮಾಡಿ ತೂಕ ಇಳಿಸಲು ಸಹಾಯ ಮಾಡುತ್ತದೆ. ರಾತ್ರಿ ಬೌಲ್‌ ನಲ್ಲಿ ಮೆಂತ್ಯ ಕಾಳು ಮತ್ತು ಹೆಸರು ಕಾಳನ್ನು ನೆನಸಿಟ್ಟು ಮೊಳಕೆ ಬರಿಸಿ ತಿನ್ನುವುದರಿಂದ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದಲ್ಲದೆ, ಕರುಳಿನ ಕ್ಯಾನ್ಸರ್‌ ತಡೆಯುತ್ತದೆ ಮತ್ತು ಎದೆಯುರಿ ಕಡಿಮೆ ಮಾಡಲು ನೆರವಾಗುವುದು. ಮೆಂತ್ಯ ಕಾಳಿನಲ್ಲಿ ನಾರಿನ ಅಂಶ ಇರುವುದರಿಂದ ಹೊಟ್ಟೆ ಯಾವಾಗಲೂ ತುಂಬಿಕೊಂಡು ಇರುವಂತೆ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿ ಆಗಿದೆ. ಒಂದು ಚಮಚ ನಿಂಬೆರಸ ಹಾಗೂ ಜೇನುತುಪ್ಪ ಜತಗೆ ಮೆಂತ್ಯಕಾಳನ್ನು ಸೇವನೆ ಮಾಡುವುದರಿಂದ ಜ್ವರವನ್ನು ಕಡಿಮೆ ಮಾಡುತ್ತದೆ. ಮಹಿಳೆಯರಲ್ಲಿನ ಹಲವಾರು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಇದನ್ನೂ ಓದಿ:Reasons for back pain: ಬೆಳಿಗ್ಗೆ ಎದ್ದಾಗ ಬೆನ್ನು ನೋವು ಕಾಡುತ್ತಿದೆಯೆ? ಇದಕ್ಕೆ ಕಾರಣಗಳೇನು ? ಇಲ್ಲಿದೆ ಪೂರ್ಣ ಮಾಹಿತಿ

ಇದನ್ನೂ ಓದಿ:Banana Scrub :ಚಳಿಗಾಲದಲ್ಲಿ ಮುಖ ಒಡೆಯದಂತೆ ರಕ್ಷಿಸಲು ಬಾಳೆಹಣ್ಣಿನ ಸ್ಕ್ರಬ್‌

ಅಜ್ವಾನ (ಓಮದ ಕಾಳು)

ಅಜ್ವಾನವನ್ನು ಸೇವನೆ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆಯಬಹುದು. ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಅಜ್ವಾನ ನೆನಸಿಟ್ಟ ನೀರನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸದ ರೋಗಗಳನ್ನು ದೂರವಿರಿಸುತ್ತದೆ. ಮತ್ತು ದೇಹದ ಚಯಾಪಚಯ ಕ್ರಿಯೆ ಹೆಚ್ಚಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ತೂಕ ಇಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ತಲೆನೋವಿನಿಂದ ಬಳಲುತ್ತಿರುವವರು ಅಜ್ವಾನ ನೆನಸಿಟ್ಟ ನೀರನ್ನು ಕುಡಿಯುವುದರಿಂದ ತಲೆನೋವು ಕಡಿಮೆ ಮಾಡುತ್ತದೆ.

Control Diabetes Tips Here are the best tips to control diabetes

Comments are closed.