Cracked Heels Reduce Tips:ನಿಮ್ಮ ಹಿಮ್ಮಡಿ ಬಿರುಕು ಬಿಡುತ್ತಿದ್ದರೆ ಚಿಂತೆ ಬೇಡ ಇಲ್ಲಿದೆ ಪರಿಹಾರ

(Cracked Heels Reduce Tips)ಅತಿ ಹೆಚ್ಚು ಸಮಯ ನೀರಲ್ಲಿ ಕಾಲು ಒದ್ದೆ ಮಾಡುವುದರಿಂದ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಹಿಮ್ಮಡಿ ಬಿರುಕು ಬಿಡುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮನೆ ಕೆಲಸವನ್ನು ಮಾಡುತ್ತಾ ಹೆಚ್ಚಿನ ಸಮಯ ನೀರಲ್ಲಿ ಕಾಲ ಕಳೆಯುವುದರಿಂದ ಹಿಮ್ಮಡಿ ಬಿರುಕು ಬಿಡುತ್ತದೆ. ಕೆಲವರಲ್ಲಿ ಚಳಿಗಾಲದಲ್ಲಿ ಅತಿ ಹೆಚ್ಚು ಹಿಮ್ಮಡಿ ಬಿರುಕು ಬಿಡುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಿಮ್ಮಡಿ ಬಿರುಕು ಕೆಲವರಲ್ಲಿ ವಿಪರೀತ ನೋವು ಆಗುವಂತೆ ಮಾಡುತ್ತದೆ ಮತ್ತು ಕಾಲಿನ ಸೌಂದರ್ಯವನ್ನು ಕೆಡಿಸುತ್ತದೆ. ಹಿಮ್ಮಡಿ ಬಿರುಕು ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ಹಿಮ್ಮಡಿ ಸಮಸ್ಯೆ ಹೇಗೆ ನಿವಾರಣೆ ಮಾಡಿಕೊಳ್ಳುವುದು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Cracked Heels Reduce Tips)ವ್ಯಾಸಲಿನ್‌ , ಕೊಬ್ಬರಿ ಎಣ್ಣೆ, ನಿಂಬೆ ಹಣ್ಣಿನ ರಸ ಮಿಶ್ರಣ

ಬೇಕಾಗುವ ಸಾಮಾಗ್ರಿಗಳು:
ವ್ಯಾಸಲಿನ್‌
ಕೊಬ್ಬರಿ ಎಣ್ಣೆ
ನಿಂಬೆ ಹಣ್ಣಿನ ರಸ

ಮಾಡುವ ವಿಧಾನ
ಬೌಲ್‌ ನಲ್ಲಿ ಒಂದು ಚಮಚ ವ್ಯಾಸಲಿನ್‌, ಒಂದು ಚಮಚ ಕೊಬ್ಬರಿ ಎಣ್ಣೆ, ಒಂದು ಚಮಚ ನಿಂಬೆ ಹಣ್ಣಿನ ರಸ ಹಾಕಿ ಮಿಶ್ರಣಮಾಡಿಕೊಳ್ಳಬೇಕು. ಇದನ್ನು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಬಿರುಕು ಮೂಡಿದ ಹಿಮ್ಮಡಿಗೆ ಹಚ್ಚಿಕೊಂಡರೆ ಇದನ್ನು ಕಡಿಮೆ ಮಾಡುತ್ತದೆ.

ಕ್ಯಾಂಡಲ್‌, ಅಲವೇರಾ,ಕೊಬ್ಬರಿ ಎಣ್ಣೆ ಮಿಶ್ರಣ

ಬೇಕಾಗುವ ಸಾಮಾಗ್ರಿಗಳು:
ಕ್ಯಾಂಡಲ್‌
ಅಲವೇರಾ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಕ್ಯಾಂಡಲ್‌ ತುರಿದುಕೊಂಡು ಬೌಲ್‌ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಅಲವೇರಾದ ಸಿಪ್ಪೆ ಬಿಡಿಸಿಕೊಂಡು ಬೌಲ್ ಗೆ ಹಾಕಿ ಇಟ್ಟುಕೊಳ್ಳಬೇಕು. ಪಾತ್ರೆಯಲ್ಲಿ ತುರಿದ ಕ್ಯಾಂಡಲ್‌ ಒಂದು ಚಮಚ, ಅಲವೇರಾ ಒಂದು ಚಮಚ, ಕೊಬ್ಬರಿ ಎಣ್ಣೆ ಎರಡು ಚಮಚ ಹಾಕಿ ಮಿಶ್ರಣ ಮಾಡಿಕೊಂಡು ಸ್ಟೌವ್‌ ಮೇಲೆ ಇಟ್ಟುಕೊಂಡು ಕಾಯಿಸಿಕೊಳ್ಳಬೇಕು. ತಣ್ಣಗಾದ ನಂತರ ಇದನ್ನು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿದಿನ ರಾತ್ರಿ ಈ ಕ್ರೀಮ್‌ ಹಚ್ಚಿಕೊಂಡರೆ ನಿಮ್ಮ ಹಿಮ್ಮಡಿ ಬಿರುಕು ಕಡಿಮೆ ಆಗುತ್ತದೆ.

ಇದನ್ನೂ ಓದಿ:ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್‌ ಲಸಿಕೆ: ಪೂರ್ಣ ವಿವರ ಇಲ್ಲಿದೆ

ಇದನ್ನೂ ಓದಿ:Mustard Oil Health Tips:ಹಳೆ ನೋವು ನಿಮ್ಮನ್ನು ಕಾಡುತ್ತಿದೇಯೇ? ಹಾಗಾದ್ರೆ ಬಳಸಿ ಸಾಸಿವೆ ಎಣ್ಣೆ

ಕ್ಯಾಂಡಲ್‌ , ಸಾಸಿವೆ ಎಣ್ಣೆ, ಅಲವೇರಾ ಮಿಶ್ರಣ

ಬೇಕಾಗುವ ಸಾಮಾಗ್ರಿಗಳು
ಕ್ಯಾಂಡಲ್‌
ಸಾಸಿವೆ ಎಣ್ಣೆ
ಅಲವೇರಾ ಜೆಲ್

ಮಾಡುವ ವಿಧಾನ
ಪಾತ್ರೆಯಲ್ಲಿ ಪುಡಿಮಾಡಿಕೊಂಡ ನಾಲ್ಕು ಸಣ್ಣ ಕ್ಯಾಂಡಲ್‌, ಎರಡು ಚಮಚ ಸಾಸಿವೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಂಡು ಬೌಲ್‌ ಗೆ ಹಾಕಬೇಕು ಅದಕ್ಕೆ ಒಂದು ಚಮಚ ಅಲವೇರಾ ಜೆಲ್‌ ಹಾಕಿ ಮಿಶ್ರಣ ಮಾಡಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಡಬೇಕು. ಇದನ್ನು ಪ್ರತಿದಿನ ಹಚ್ಚಿಕೊಳ್ಳುವುದರಿಂದ ಹಿಮ್ಮಡಿ ಬಿರುಕಿನ ಸಮಸ್ಯೆ ಕಡಿಮೆ ಆಗುತ್ತದೆ.

Cracked Heels Reduce Tips If your heel is cracking then don’t worry here is the solution

Comments are closed.