ಬಿಸಿಲಿನಲ್ಲಿ ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಬಿಸಿಲಿನಿಂದ ಬಂದ ತಕ್ಷಣ ಐಸ್ ನೀರು ಅಥವಾ ತಂಪು ಪಾನೀಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಎದುರಾಗಬಹುದು.

ಬೇಸಿಗೆಯ ಬಿರು ಬಿಸಿಲಿನಲ್ಲಿ ಬಾಯಾರಿಕೆ ಆದಾಗ ನಾವು ಯಾವುದೋ ಒಂದು ಪಾನೀಯ ಕುಡಿಯುವುದು ಸಾಮಾನ್ಯ. ಆದರೆ, ಅತಿಯಾದ ತಂಪು ಅಥವಾ ಸಕ್ಕರೆ ಅಂಶವಿರುವ ಪಾನೀಯಗಳು ಆರೋಗ್ಯದ ಮೇಲೆ ಇದು ನಮಗೆ ಗೊತ್ತಿಲ್ಲದೆಯೇ ಗಂಭೀರ ಪರಿಣಾಮ ಬೀರುತ್ತದೆ.

ಬಿರು ಬಿಸಿಲಿನಲ್ಲಿ ತಪ್ಪು ಪಾನೀಯಗಳನ್ನು ಕುಡಿಯುವುದರಿಂದ ಆಗುವ ತೊಂದರೆಗಳು ಇಲ್ಲಿವೆ:

1. ನಿರ್ಜಲೀಕರಣ (Dehydration): ಹೆಚ್ಚು ಸಕ್ಕರೆ ಇರುವ ಸೋಡಾ, ಕೋಲ್ಡ್ ಡ್ರಿಂಕ್ಸ್ ಅಥವಾ ಕೆಫೀನ್ (ಕಾಫಿ, ಟೀ) ಅಂಶವಿರುವ ಪಾನೀಯಗಳು ದೇಹದಲ್ಲಿರುವ ನೀರನ್ನು ಹೊರಹಾಕುತ್ತವೆ. ಇದು ಬಾಯಾರಿಕೆಯನ್ನು ತಣಿಸುವ ಬದಲು ದೇಹವನ್ನು ಮತ್ತಷ್ಟು ಒಣಗುವಂತೆ ಮಾಡುತ್ತದೆ.

2. ಜೀರ್ಣಕ್ರಿಯೆಯಲ್ಲಿ ವ್ಯತ್ಯಯ: ಬಿಸಿಲಿನಲ್ಲಿ ದೇಹದ ಉಷ್ಣಾಂಶ ಹೆಚ್ಚಿರುತ್ತದೆ. ಅಂತಹ ಸಮಯದಲ್ಲಿ ದಿಢೀರನೆ ಅತೀ ತಣ್ಣಗಿರುವ (Ice cold) ಪಾನೀಯಗಳನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಶಾಕ್ ಉಂಟಾಗಿ ಹೊಟ್ಟೆ ನೋವು ಅಥವಾ ಅಜೀರ್ಣವಾಗಬಹುದು.

3. ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ :ಸಿದ್ಧಪಡಿಸಿದ ತಂಪು ಪಾನೀಯಗಳಲ್ಲಿ (Soft Drinks) ಅತಿಯಾದ ಸಕ್ಕರೆ ಇರುತ್ತದೆ. ಇದು ತಕ್ಷಣಕ್ಕೆ ಶಕ್ತಿ ನೀಡಿದಂತೆ ಕಂಡರೂ, ನಂತರ ಸುಸ್ತು ಮತ್ತು ನಿಶಕ್ತಿಯನ್ನು ಉಂಟುಮಾಡುತ್ತದೆ.

4. ಗಂಟಲಿನ ಸೋಂಕು : ಬಿಸಿಲಿನಿಂದ ಬಂದ ತಕ್ಷಣ ಐಸ್ ನೀರು ಅಥವಾ ತಂಪು ಪಾನೀಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಎದುರಾಗಬಹುದು.

Also Read ; ಆಕಳಿಕೆಗೂ ಮಿದುಳಿಗೂ ಏನು ಸಂಬಂಧ? ಈ ವಿಶೇಷ ಪ್ರತಿಕ್ರೆಯೆಯ ಹಿಂದಿರುವ ಕಾರಣ ತಿಳಿಯಿರಿ

ಬಿಸಿಲಿನಿಂದ ತಕ್ಷಣದ ಉಪಶಮನ ಪಡೆಯಲು ಮತ್ತು ದೇಹವನ್ನು ತಂಪಾಗಿರಿಸಲು ಇಲ್ಲಿವೆ ಕೆಲವು ನೈಸರ್ಗಿಕ ಪರ್ಯಾಯಗಳು:

1. ನೈಸರ್ಗಿಕ ಪಾನೀಯಗಳು

  • ಎಳನೀರು: ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತದೆ.
  • ಮಜ್ಜಿಗೆ: ಇದು ದೇಹವನ್ನು ತಂಪಾಗಿಸುವುದಲ್ಲದೆ ಜೀರ್ಣಕ್ರಿಯೆಗೆ ಸಹಕಾರಿ.
  • ಲಿಂಬು ಪಾನಕ: ವಿಟಮಿನ್ ಸಿ ಮತ್ತು ಶಕ್ತಿಯನ್ನು ನೀಡುತ್ತದೆ (ಕಡಿಮೆ ಸಕ್ಕರೆ ಬಳಸಿ).
  • ಸಾಮಾನ್ಯ ತಾಪಮಾನದ ನೀರು: ಮಣ್ಣಿನ ಮಡಕೆಯ ನೀರು ಕುಡಿಯುವುದು ಅತ್ಯಂತ ಸುರಕ್ಷಿತ.

2. ಆಹಾರ ಕ್ರಮದಲ್ಲಿ ಬದಲಾವಣೆ


Also Read : ಅಕ್ರಮ ಮದ್ದು ಮಾರಾಟಕ್ಕೆ ಅಂಕುಶ..! ವೈದ್ಯರ ಚೀಟಿಯಿಲ್ಲದೇ ಔಷಧಿ ನೀಡಿದ್ರೆ ಮೆಡಿಕಲ್​ ಶಾಪ್​ ಲೈಸೆನ್ಸ್​ ರದ್ದು

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೆಲವು ಟಿಪ್ಸ್:

ಬಾಯಾರಿಕೆ ಆದಾಗ ಹಣ್ಣಿನ ರಸ ಅಥವಾ ನೀರನ್ನು ಕುಡಿಯಿರಿ, ಆದರೆ ಕೆಫೀನ್ ಮತ್ತು ಕೃತಕ ಬಣ್ಣದ ಪಾನೀಯಗಳಿಂದ ದೂರವಿರಿ.

Exit mobile version