ಆಕಳಿಕೆಗೂ ಮಿದುಳಿಗೂ ಏನು ಸಂಬಂಧ? ಈ ವಿಶೇಷ ಪ್ರತಿಕ್ರೆಯೆಯ ಹಿಂದಿರುವ ಕಾರಣ ತಿಳಿಯಿರಿ

Contagious Yawning: ನೀವೂ ಕೂಡಾ ನಿಮ್ಮ ಮುಂದಿರುವವರನ್ನು ನೋಡಿ ಆಕಳಿಸುತ್ತೀರಾ? ಹಾಗಾದರೆ ಇದಕ್ಕೆ ಕಾರಣವೇನು? ಮಿದುಳಿಗೂ ಆಕಳಿಕೆಗೂ ಏನಾದರೂ ಸಂಬಂಧವಿದೆಯಾ? ಇಲ್ಲಿದೆ ಓದಿ.

Contagious Yawning: ಕೆಲವೊಂದಿಷ್ಟು ಅನುಕರಣೆಗಳನ್ನು ನಾವು ನಮ್ಮ ಎದುರಿಗಿರುವವರನ್ನು ನೋಡಿ ಮಾಡುತ್ತೇವೆ. ಅದರಲ್ಲಿ ಅತಿ ಹೆಚ್ಚು ನಮ್ಮ ಗಮನಕ್ಕೆ ಬರುವುದು ಆಕಳಿಸುವುದು. ಹೌದು.., ಮೀಟಿಂಗ್‌ ಹಾಲ್‌ನಲ್ಲಿ, ತರಗತಿಯಲ್ಲಿ ಅಥವಾ ಯಾವುದಾದರೂ ಸಮಾರಂಭಗಳಲ್ಲಿ ನಿಮ್ಮ ಮುಂದಿರುವವರು ಆಕಳಿಸಿದರೆ ನೀವೂ ಕೂಡಾ ಹಾಗೆ ಅನುಕರಣೆ ಮಾಡುವುದು ಒಮ್ಮೆಯಾದರೂ ನಿಮ್ಮ ಅನುಭವಕ್ಕೆ ಬಂದೇ ಇರುತ್ತದೆ. ಕೆಲವೊಮ್ಮೆಯಂತೂ ಯಾರೋ ಒಬ್ಬರು ಮೊದಲು ಆಕಳಿಸುತ್ತಾರೆ ನಂತರ ಅಲ್ಲಿರುವ ಪ್ರತಿಯೊಬ್ಬರಿಗೂ ಆಕಳಿಕೆ ಬರಲು ಪ್ರಾರಂಭವಾಗುತ್ತದೆ.

ಆಕಳಿಕೆ ಎನ್ನುವುದು ಕೇವಲ ಆಯಾಸ ಅಥವಾ ಬೇಸರ ಆಗಿರುವುದರ ಸಂಕೇತವಲ್ಲ. ಇದರ ಹಿಂದೆ ನಮ್ಮ ಮಿದುಳಿನ ಕಾರ್ಯವಿಧಾನ ಅಡಕವಾಗಿದೆ. ವಿಜ್ಞಾನದ ಭಾಷೆಯಲ್ಲಿ ಇದಕ್ಕೆ ಕಾಂಟೆಜಿಯಸ್‌ ಯಾನಿಂಗ್‌ ಎಂದು ಕರೆಯಲಾಗುತ್ತದೆ. ನಮ್ಮ ಮಿದುಳು ಭಾವನಾತ್ಮಕ ಮತ್ತು ಸಮಾಜಿಕವಾಗಿ ಆಳವಾಗಿ ಪ್ರತಿಕ್ರಿಯೆ ನೀಡುತ್ತದೆ. ನಮ್ಮ ಮಿದುಳಿನಲ್ಲಿರುವ ಮಿರರ್‌ ನ್ಯೂರಾನ್ಸ್‌ ಮತ್ತೊಬ್ಬರನ್ನು ನಕಲು ಮಾಡುವಂತೆ ಪ್ರೇರೇಪಿಸುತ್ತದೆ. ಆಕಳಿಕೆಯ ವಿಷಯದಲ್ಲೂ ಅದೇ ಆಗುತ್ತದೆ. ನ್ಯೂರಾನ್ಸ್‌ಗಳು ಆಕ್ಟೀವ್‌ ಆಗುತ್ತದೆ. ಇದರಿಂದ ನಾವೂ ಕೂಡಾ ನಮ್ಮ ಅರಿವಿಗೆ ಬರದಂತೆ ಅದನ್ನು ಅನುಕರಿಸುತ್ತೇವೆ.

ಆಕಳಿಕೆ ಪ್ರತಿ ಬಾರಿಯೂ ಬರುತ್ತದೆಯೇ?

ಅತ್ಯಂತ ಆಚ್ಚರಿಯ ಸಂಗತಿಯೆಂದರೆ ಆಕಳಿಸುವುದನ್ನು ನಾವು ಪ್ರತಿಯೊಬ್ಬರನ್ನು ನೋಡಿ ಅನುಕರಿಸುವುದಿಲ್ಲ. ನಮ್ಮ ಮಿದುಳಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿರುವವರನ್ನು ನೋಡಿದಾಗ ಮಾತ್ರ ಆಕಳಿಕೆ ಬರುತ್ತದೆ. ಇದು ನಮ್ಮ ಮಿದುಳು ಮತ್ತೊಬ್ಬರಿಗೆ ಪ್ರತಿಕ್ರಿಯಿಸುವ ವಿಧಾನವಾಗಿದೆ.

ಇದನ್ನೂ ಓದಿ: ಅಕ್ರಮ ಮದ್ದು ಮಾರಾಟಕ್ಕೆ ಅಂಕುಶ..! ವೈದ್ಯರ ಚೀಟಿಯಿಲ್ಲದೇ ಔಷಧಿ ನೀಡಿದ್ರೆ ಮೆಡಿಕಲ್​ ಶಾಪ್​ ಲೈಸೆನ್ಸ್​ ರದ್ದು

ಮಿದುಳಿನ ಕೂಲಿಂಗ್‌ ತಂತ್ರ

ಆಕಳಿಸುವುದು ಕೇವಲ ಅನುಕರಣೆ, ಆಯಾಸ ಪ್ರದರ್ಶಿಸುವುದಷ್ಟೇ ಅಲ್ಲ. ಅದು ಮಿದುಳನ್ನು ತಂಪಾಗಿಸುವ ತಂತ್ರವೂ ಹೌದು. ಹೇಗೆಂದರೆ, ನಾವು ಆಳವಾಗಿ ಉಸಿರಾಡಿದಾಗ ತಂಪಾದ ಗಾಳಿಯು ದೇಹದೊಳಗೆ ಪ್ರವೇಶಿಸುತ್ತದೆ. ಅದು ರಕ್ತಪರಿಚಲನೆಯ ಮೂಲಕ ಮಿದುಳಿನ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ಅಂದರೆ ಅತಿಯಾಗಿ ಸೆಕೆಯಾದರೆ ಫ್ಯಾನ್‌ ಹಚ್ಚಿಕೊಳ್ಳಿವಂತೆ. ನಾವು ಆಕಳಿಸಿದಾಗ ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ. ಮಿದುಳಿಗೆ ರಕ್ತದ ಹರಿವು ಹೆಚ್ಚುತ್ತದೆ. ನರಕೋಶಗಳು ಸಕ್ರೀಯವಾಗುತ್ತದೆ. ಇದರಿಂದ ಮಿದುಳಿನ ಕಾರ್ಯ ವೇಗ ಪಡೆದುಕೊಳ್ಳುತ್ತದೆ. ಅತ್ಯಂತ ಕುತೂಹಲಕಾರಿ ವಿಷಯವೆಂದರೆ ನಾವು ಆಳವಾಗಿ ಓದುತ್ತಿರುವಾಗ, ಆಲೋಚನೆಯಲ್ಲಿ ಮಗ್ನರಾಗಿದ್ದಾಗಲೂ ಆಕಳಿಸುತ್ತೇವೆ. ಅಂದರೆ ಆಕಳಿಕೆಯೆನ್ನುವುದು ಸಂಪೂರ್ಣವಾಗಿ ಮಿದುಳಿನ ತಂತ್ರವಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories