Yoga Tips Chakrasana Information : ಚಕ್ರಾಸನದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಚಕ್ರಾಸನ ಮಾಹಿತಿ ನಿಮಗಾಗಿ

ಮನುಷ್ಯನ ಜೀವನಕ್ಕೆ ಆಹಾರ ಎಷ್ಟು ಮುಖ್ಯವೋ ವ್ಯಾಯಾಮ ಕೂಡ ಅಷ್ಟೇ ಮುಖ್ಯ. ವ್ಯಾಯಾಮ ಇಲ್ಲದೇ ಮನುಷ್ಯ ಜೀವಂತವಾಗಿರಬಹುದು ನಿಜ. ಆದರೆ ವ್ಯಾಯಾಮ ಇಲ್ಲದೇ ದೇಹ ಉಲ್ಲಾಸದಿಂದ ಕೂಡಿರುವುದಿಲ್ಲಾ. ಅಲ್ಲದೇ ವ್ಯಾಯಾಮ ಇಲ್ಲದ ದೇಹದಲ್ಲಿ ಕ್ರಮೇಣ ರೊಗಗಳು ಹುಟ್ಟುತ್ತವೆ. ಆದ್ದರಿಂದ ವ್ಯಾಯಾಮ ಬಹು ಮುಖ್ಯವಾದದ್ದು. ಹೊಟ್ಟೆ, ಸೊಂಟ ಭಾಗ ಕಡಿಮೆಯಾಗಬೇಕೆಂದರೆ ತಲೆನೋವು ಬರಬಾರದು ಅಂತಿದ್ದರೆ ಚಕ್ರಾಸನ (Chakrasana Information) ಸೂಕ್ತ ವ್ಯಾಯಾಮ.

ಪ್ರತಿದಿನ ಈ ರೀತಿಯ ಆಸನ ಮಾಡುವುದರಿಂದ ಹಲವಾರು ಅನುಕೂಲಗಳು ಉಂಟು. ದೇಹ ತೂಕ ಕಡಿಮೆ ಮಾಡಿಕೊಳ್ಳಲು, ದೇಹದಲ್ಲಿ ಸೇರಿರುವ ಕೊಬ್ಬು ಕಡಿಮೆ ಮಾಡಲು, ದೇಹದಲ್ಲಿನ ಖಂಡಗಳು ಉತ್ತೇಜನಗೊಳ್ಳಲು, ದೇಹಕ್ಕೆ ರಕ್ತ ಸರಬರಾಜು ಸರಾಗವಾಗಿ ಸಾಗಲು ಈ ಆಸನ ಮಾಡುವುದು ಒಳ್ಳೆಯದು. ಇದರಿಂದ ಥೈರಾಯಿಡ್ ಸಮಸ್ಯೆ ಕೂಡ ನಿಯಂತ್ರಣದಲ್ಲಿರುತ್ತದೆ. ಸೊಂಟ ಮತ್ತು ಶ್ವಾಸ ಸಮಸ್ಯೆಗಳು ಹತೋಟಿಯಲ್ಲಿರುತ್ತದೆ.

ಇದನ್ನೂ ಓದಿ: wallnut : ‘ವಾಲ್ ನಟ್ʼ ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ ?

ಮೊದಲು ಮ್ಯಾಟ್ ಮೇಲೆ ಅಂಗಾತ ಮಲಗಬೇಕು. ಕೈಗಳನ್ನು ನೆಲಕ್ಕೆ ಸಮನಾಂತರವಾಗಿ ಇರಿಸಬೇಕು. ಕಾಲುಗಳನ್ನು ಮೊಳಕಾಲಿನವರೆಗೆ ಮಡಚಿಕೊಳ್ಳಬೇಕು. ಹಾಗೆಯೇ ಪಾದಗಳನ್ನು ನೆಲಕ್ಕೆ ತಾಗುವಂತೆ ಇರಿಸಬೇಕು. ಈಗ ನಿಧಾನವಾಗಿ ಕೈಗಳನ್ನು ಮೇಲಕ್ಕೆ ಏರಿಸಿ ಮೊಳಕೈವರೆಗೆ ಮಡಚಿ ಅಂಗೈಯನ್ನು ಭುಜಕ್ಕೆ ಹತ್ತಿರ ನೆಲದ ಮೇಲೆ ಇಡಬೇಕು.

ಶ್ವಾಸ ತೆಗೆದುಕೊಳ್ಳುತ್ತಾ ನಿಧಾನವಾಗಿ ಸೊಂಟ ಹಾಗೂ ಎದೆಯನ್ನು ಎತ್ತುವ ಪ್ರಯತ್ನ ಮಾಡಬೇಕು. ಸಾಧ್ಯವಾದಷ್ಟು ಸೊಂಟದ ಭಾಗ ಮೇಲಕ್ಕೆತ್ತಬೇಕು. ದೇಹದ ಭಾರ ಒಟ್ಟು ಅಂಗಾಲು ಅಂಗೈ ಮೇಲಿರಬೇಕು. ಆಗ ಆಸನ ಸರಿಯಾಗಿ ಆಗಿ ದೇಹ ಚಕ್ರದಂತೆ ಇರುತ್ತದೆ. ಈ ಆಸನವನ್ನು ಹೃದ್ರೋಗಿಗಳು, ಸೊಂಟ ನೋವು ಮತ್ತು ಹೈಬಿಪಿ ಇರುವವರು ಮಾಡಬಾರದು.

ಇದನ್ನೂ ಓದಿ: ಮುಟ್ಟಿನ ದಿನದ ನಿಯಮದ ಒಳ ಅರ್ಥ, ಆ ದಿನಗಳ ಆರೈಕೆ ಹೇಗಿರಬೇಕು ಗೊತ್ತಾ ?

ಇದನ್ನೂ ಓದಿ : Father’s Day 2022: ಕೋಪದಲ್ಲೂ ಪ್ರೀತಿಯ ತೋರುವ ಅಪ್ಪ; ವಿಶ್ವ”ತಂದೆಯಂದಿರ ದಿನ”ದ ಆಚರಣೆ ಕುರಿತು ನಿಮಗೆಷ್ಟು ಗೊತ್ತು!

ಇದನ್ನೂ ಓದಿ : Mango Leaves Benefits:ಅಲಂಕಾರಕ್ಕಷ್ಟೇ ಅಲ್ಲಾ ಆರೋಗ್ಯಕ್ಕೂ ಉತ್ತಮ ಮಾವಿನ ಎಲೆ

(Do you know what the benefits of Chakrasana? Chakrasana Information is for you)

Comments are closed.