Hot or Cold Water Bath In Winter:ಚಳಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳಿತೋ, ಕೆಡಕೋ?

(Hot or Cold Water Bath In Winter)ಚಳಿಗಾಲದಲ್ಲಿ ಹೆಚ್ಚಿನವರು ಬಿಸಿನೀರಿನಲ್ಲಿ ಸ್ನಾನ ಮಾಡುತ್ತಾರೆ. ತಣ್ಣೀರಿನಲ್ಲಿ ಸ್ನಾನ ಮಾಡುವವರು ಅತಿ ವಿರಳ ಆದರೆ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯ ಮತ್ತು ಸೌಂದರ್ಯಕ್ಕೆ ಹಲವು ಪ್ರಯೋಜನವಿದೆ. ಚಳಿಗಾಲದಲ್ಲಿ ತಂಡಿ ವಾತವರಣವಿರುವುದರಿಂದ ಹಲವರು ಬಿಸಿ ನೀರಲ್ಲಿ ಸ್ನಾನ ಮಾಡುತ್ತಾರೆ. ಚಳಿಗಾಲದಲ್ಲಿ ಬೀಸಿನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಚಳಿಗಾಲದಲ್ಲಿ ಹೆಚ್ಚು ಜ್ವರ, ಶೀತ ಕಾಣಿಸಿಕೊಳ್ಳುವುದರಿಂದ ಬಿಸಿ ನೀರಲ್ಲಿ ಸ್ನಾನ ಮಾಡಿದರೆ ಇದರಿಂದ ದೂರ ಇರಬಹುದು. ಅತಿ ಹೆಚ್ಚು ಬೀಸಿ ನೀರಿನ ಬಳಕೆ ಆರೋಗ್ಯಕ್ಕೆ ಉತ್ತಮವೋ ಇಲ್ಲವೋ ಎಂದು ತಿಳಿಯಿರಿ.

(Hot or Cold Water Bath In Winter)ಬಿಸಿನೀರಿನ ಅನುಕೂಲಗಳು
ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಹಲವು ಪ್ರಯೋಜನವನ್ನು ಪಡೆಯಬಹದು. ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ.ಉತ್ತಮ ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ. ಶೀತ ಆಗುವುದನ್ನು ತಪ್ಪಿಸುತ್ತದೆ. ಅತಿಯಾದ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ ಆದಷ್ಟು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಉತ್ತಮ. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದರಿಂದ ರಕ್ತ ಸಂಚಾರವಾಗುವುದಕ್ಕೆ ಸಹಾಯ ಮಾಡುತ್ತದೆ.

ಬಿಸಿನೀರಿನ ಅನಾನುಕೂಲ
ಅತಿಯಾದ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಚರ್ಮ ಸುಡಬಹುದು ಆದ್ದರಿಂದ ಉಗುರು ಬೆಚ್ಚಗಿರುವ ನೀರು ಬಳಸುವುದು ಉತ್ತಮ. ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ತಲೆಯಲ್ಲಿರುವ ಹೊಟ್ಟು ಜಾಸ್ತಿ ಆಗುತ್ತದೆ ಮತ್ತು ಮುಖದ ಚರ್ಮ ಹಾನಿಯಾಗುತ್ತದೆ.ಹಾಗಾಗಿ ಆದಷ್ಟು ತಣ್ಣಿರು ಮತ್ತು ಉಗುರು ಬೆಚ್ಚಗೆ ಇರುವ ನೀರು ಬಳಕೆ ಮಾಡಿ. ಮುಖವನ್ನು ಆದಷ್ಟು ತಣ್ಣಿರಿನಿಂದ ತೊಳೆಯಿರಿ.

ಚಳಿಗಾಲದಲ್ಲಿ ಪ್ರತಿದಿನ ಸ್ನಾನ ಮಾಡುವುದು ಒಳಿತು ಆದರೆ ಸ್ನಾನ ಮಾಡುವುದಕ್ಕೆ ಹೆಚ್ಚು ಸಮಯ ಕಳೆಯಬೇಡಿ .ಐದರಿಂದ ಹತ್ತು ನಿಮಿಷದಲ್ಲಿ ಸ್ನಾನ ಮುಗಿಸಿ. ಆದಷ್ಟು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುವುದಕ್ಕೆ ಪ್ರಯತ್ನಿಸಿ.

ತಣ್ಣೀರಿನ ಪ್ರಯೋಜನಗಳು
ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಮುಖದ ಸೌಂದರ್ಯಕ್ಕೆ ಒಳ್ಳೆಯದು. ತಣ್ಣೀರಿನಿಂದ ಅಥವಾ ಐಸ್‌ ವಾಟರ್‌ ಮುಖಕ್ಕೆ ಹಾಕುವುದರಿಂದ ಚರ್ಮವು ಬಿಗಿ ಆಗುತ್ತದೆ ಇದರಿಂದ ರಂಧ್ರಗಳು ಮುಚ್ಚಲು ಸಹಾಯವಾಗುತ್ತದೆ.ತಣ್ಣೀರಿನಿಂದ ಸ್ನಾನ ಮಾಡುವುದರಿಂದ ರೋಗನೀರೋಧಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ಬಿಳಿ ರಕ್ತ ಕಣಗಳನ್ನು ಹೆಚ್ಚಾಗುವಂತೆ ಮಾಡುತ್ತದೆ.

ತಣ್ಣೀರಿನ ಅನಾನುಕೂಲ
ಚಳಿಗಾಲದಲ್ಲಿ ಆದಷ್ಟು ತಣ್ಣೀರು ಸ್ನಾನವನ್ನು ಕಡಿಮೆ ಮಾಡಿ ಎಕೆಂದರೆ ಅತಿಯಾದ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಬ್ರೈನ್‌ ಸ್ಟ್ರೋಕ್‌ , ಮಧುಮೇಹ, ಅಧಿಕ ರಕ್ತದೊತ್ತಡ ಹಲವಾರು ತೊಂದರೆಗಳು ನಿಮ್ಮನ್ನು ಕಾಡುತ್ತದೆ ಹಾಗಾಗಿ ಚಳಿಗಾಲದಲ್ಲಿ ಆದಷ್ಟು ತಣ್ಣೀರಿನ ಸ್ನಾನ ಕಡಿಮೆ ಮಾಡಿ.

ಇದನ್ನೂ ಓದಿ:Purify Your Blood Naturally:ನಿಮ್ಮ ದೇಹದ ರಕ್ತ ಶುದ್ಧಿಗಾಗಿ ಬಳಸಿ ಈ ಕೆಳಗಿನ ಆಹಾರ

ಇದನ್ನೂ ಓದಿ:Neck Pain Reduce Tips:ಕಂಪ್ಯೂಟರ್‌ ಮುಂದೆ ಕುಳಿತು ಕುತ್ತಿಗೆ ನೋವು ಬರುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ

ಇದನ್ನೂ ಓದಿ:Control Body Cholesterol Tips:ದೇಹದ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಇಲ್ಲಿದೆ ಸುಲಭ ಮಾರ್ಗ

ಅತಿಯಾಗಿ ಬಿಸಿನೀರು ಮತ್ತು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ಕಡಿಮೆ ಮಾಡಿ ಆದಷ್ಟು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

Hot or Cold Water Bath In Winter Is it good or bad to take hot water bath in winter?

Comments are closed.