Indoor Plants : ಮನೆಯ ಒಳಗೆ ಗಿಡ ಬೆಳೆಸಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ!!

ಒಳಾಂಗಣ ಸಸ್ಯಗಳು (Indoor Plants ) ಮನೆ ಮತ್ತು ಕಛೇರಿಯ ಒಳಗಿನ ಗಾಳಿಯನ್ನಷ್ಟೇ ಶುದ್ಧೀಕರಿಸುವುದಿಲ್ಲ (Air Purifier) ಬದಲಿಗೆ ಅವುಗಳು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು (Immunity System) ಹೆಚ್ಚಿಸಲು ಸಹಾಯ ಮಾಡುತ್ತವೆ. ಮನೆಯ ಗಿಡಗಳು (Plant) ಗಾಳಿಯನ್ನು ಶುದ್ಧೀಕರಿಸಲು ಮತ್ತು ನಮ್ಮ ಸಾಮಾನ್ಯ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತವೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ನಮ್ಮ ನೆಚ್ಚಿನ 5 ಗಿಡಗಳು ಇಲ್ಲಿವೆ.

  1. ಅಲೋವೆರಾ:
    ಭಾರಿ ಪ್ರಯೋಜನವಿರುವ ಅಲೋವೆರಾದ ಅನುಕೂಗಳನ್ನು ಪಟ್ಟಿ ಮಾಡುವುದು ಸ್ವಲ್ಪ ಕಷ್ಟ. ಇದನ್ನು ಪಾನೀಯಗಳಲ್ಲಿ, ತ್ವಚೆಗೆ ಹೆಚ್ಚು ಬಳಸುತ್ತಾರೆ. ಈ ಗಿಡಗಳನ್ನು ಸ್ವಲ್ಪ ಬೆಚ್ಚಿಗಿನ ಜಾಗದಲ್ಲಿರಸಿ, ಮತ್ತು ಸಾದ್ಯವಾದಷ್ಟು ನೈಸರ್ಗಿಕ ಬೆಳಕಿನಲ್ಲಿ ಇಡಿ. ಅಡುಗೆ ಮನೆಯ ಕಟ್ಟೆಗಳ ಮೇಲಿನ ಜಾಗವು ಇದನ್ನಿಡಲು ಸೂಕ್ತ ಜಾಗ. ಉತ್ತಮ ಮಣ್ಣಿನಲ್ಲಿ ಇದು ವೇಗವಾಗಿ ಬೆಳೆಯಬಲ್ಲದು. ಇದರ ಮಣ್ಣು ಸಂಪೂರ್ಣವಾಗಿ ಒಣಗಿದಾಗ ನೀರುಹಾಕಿ. ಅತಿಯಾದ ನೀರು ಈ ಗಿಡಕ್ಕೆ ಒಳ್ಳೆಯದಲ್ಲ.
  1. ಸ್ಪೈಡರ್‌ ಪ್ಲಾಂಟ್‌:
    ಸ್ಪೈಡರ್‌ ಪ್ಲಾಂಟ್‌ಗಳು ಗಾಳಿಯಲ್ಲಿರುವ ಕಾರ್ಬನ್‌ ಮೋನಾಕ್ಸೈಡ್‌, ಬೆಂಜಿನ್‌ ಮತ್ತು ಫಾರ್ಮಾಲ್ಡಿಹೈಡ್‌ ಗಳನ್ನು ತೆಗೆಯಲು ಬಹಳ ಪ್ರಯೋಜನಕಾರಿಯಾಗಿದೆ. ಇವುಗಳು ಹಾನಿಕಾರಕ ಮಾಲಿನ್ಯಕಾರಕಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುವ ಮೂಲಕ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ವಿವಿಧ ಜೈವಿಕ ಕ್ರಿಯೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸ್ಪೈಡರ್‌ ಪ್ಲಾಂಟ್‌ಗಳಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆಯಿಲ್ಲ. ಇದು ಯಾವುದೇ ಒಳಾಂಗಣ ಪರಿಸರದಲ್ಲಿ ಬೆಳೆಯಬಹುದು. ಈ ಗಿಡಗಳಿಗೆ ಪ್ರಖರವಾದ ಬೆಳಕಿನ ಅವಶ್ಯಕತೆಯಿದೆ. ಆದರೆ ಸೂರ್ಯನ ನೇರ ಬೆಳಕಲ್ಲ. ಬೇಸಿಗೆ ಉದ್ದಕ್ಕೂ ಈ ಗಿಡಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆಯಿದೆ. ಚಳಿಗಾಲದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ.

ಇದನ್ನೂ ಓದಿ : PM-Kisan Samman Nidhi ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆ ಪಡೆಯಲು ಯಾರು ಅರ್ಹರು ?

  1. ಸ್ನೇಕ್‌ ಪ್ಲಾಂಟ್‌:
    ಅತ್ಯಂತ ಸುಲಭವಾಗಿ ನಿರ್ವಹಿಸಬಲ್ಲ ಗಿಡಗಳಲ್ಲಿ ಸ್ನೇಕ್‌ ಪ್ಲಾಂಟ್‌ ಕೂಡಾ ಒಂದು. ಮನೆ ಬಳಕೆಯ ಹಲವಾರು ವಸ್ತುಗಳಲ್ಲಿರುವ ಫಾರ್ಮಾಲ್ಡಿಹೈಡ್‌ ನ ಪ್ರಮಾಣವನ್ನು ತಗ್ಗಿಸುವುದು. ಇದು ನಿದ್ರೆಗೆ ಸಹಕಾರಿಯಾಗಿದ್ದರಿಂದ ಮಲಗುವ ಕೋಣೆಗೂ ಸೇರಿಸಿಕೊಳ್ಳಬಹುದು. ಇವುಗಳು ನೀರು ಮತ್ತು ಬೆಳಕು ಇಲ್ಲದೆಯೇ ವಾರಗಳವರೆಗೆ ಬದುಕಬಲ್ಲವು. ಸೂಕ್ತ ಫಲಿತಾಂಶಕ್ಕಾಗಿ ಇವುಗಳನ್ನು ಕಡಿಮೆ ಬೆಳಕಿನಲ್ಲಿ ಇಡಿ ಮತ್ತು ಒಣಗಿದಾಗ ಮಾತ್ರ ನೀರುಣಿಸಿ.
  2. ವಾರ್ನೆಕ್‌ ಡ್ರಾಕೇನಾ :
    ಡ್ರಾಕೆನಾಗಳು ಉತ್ತಮ ಗಾಳಿ ಶುದ್ಧೀಕರಣಗಳು. ಇವು ಅಸ್ತಮಾ ಮತ್ತು ಅಲರ್ಜಿ ಸಮಸ್ಯೆಗಳಿಗೆ ಸಹಾಯ ಮಾಡಬಲ್ಲವು. ಈ ಗಿಡಗಳು ನೆರಳಿನಲ್ಲಿಯೂ ಬೆಳೆಯ ಬಲ್ಲವು. ಇದರ ನಿರ್ವಹಣೆಯೂ ಅತಿ ಸುಲಭ. ಕಡಿಮೆ ಬೆಳಕಿನ ಪ್ರಮಾಣವು ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದು. ಈ ಗಿಡಗಳು ಕೆಡಿಮೆ ಬೆಳಕಿನಲ್ಲಿಯೂ ಚೆನ್ನಾಗಿ ಬೆಳೆಯಬಲ್ಲವು ಮತ್ತು ಕಡಿಮೆ ನೀರು ಸಾಕು. ಅವುಗಳ ಎಲೆ ಮತ್ತು ಮಣ್ಣು ಒಣಗಿದಾಗ ನೀರುಣಿಸಿದರೆ ಸಾಕು.
  3. ಸೇವಂತಿಗೆ :
    ಸೇವಂತಿಗೆ ಗಿಡಗಳು ಅಲೋವೆರಾ ಗಿಡಗಳಂತೆ ನಮ್ಮ ಸಾಮಾನ್ಯ ಆರೋಗ್ಯ ಕಾಪಾಡಬಲ್ಲವು. ಗಾಳಿಯಲ್ಲಿರುವ ಬೆಂಜಿನ್‌ ಅಂಶ ತೆಗೆಯುವುದು. ಇದರ ಹೂಗಳನ್ನು ಚಹಾದಲ್ಲಿಯೂ ಬಳಸಲಾಗುವುದು.

ಇದನ್ನೂ ಓದಿ : Arecanut Farming : ಭಾರೀ ಬೇಡಿಕೆ ಪಡೆದುಕೊಂಡ ಈ ಅಡಿಕೆ ಗಿಡ! ಕುಬ್ಜ ತಳಿ ಅಡಿಕೆ ಗಿಡದ ಬಗ್ಗೆ ನಿಮಗೆ ತಿಳಿದಿದೆಯೇ?

(Indoor Plants will boost your immunity system)

Comments are closed.