Insomnia Home Remedies:ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡಲು ಮನೆಮದ್ದು

(Insomnia Home Remedies)ಇತ್ತಿಚೀನ ದಿನಗಳಲ್ಲಿ ಹಲವಾರು ಜನರಲ್ಲಿ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ನಿದ್ದೆ ಆಗದಿದ್ದಾಗ ಆಯಾಸ, ಏಕಾಗ್ರತೆ ತೊಂದರೆ,ಮನಸ್ಥಿತಿ ಎರುಪೇರು ಹಾಗೂ ಕೆಲಸದಲ್ಲಿ ಆಸಕ್ತಿ ಇರದೆ ಇರುವುದು ಇಂತಹ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗಳು ನಮ್ಮನ್ನು ಕಾಡದೆಯಿರಲು ನಿದ್ದೆ ಅತಿ ಮುಖ್ಯ ಹಾಗಾಗಿ ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡುವ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

(Insomnia Home Remedies)ಬೇಕಾಗುವ ಸಾಮಾಗ್ರಿಗಳು:
ಸಾಂಬಾರ್‌ ಸೊಪ್ಪು(ದೊಡ್ಡ ಪತ್ರೆ)
ಜೇನುತುಪ್ಪ
ನೀರು

ಮಾಡುವ ವಿಧಾನ:
ಮೊದಲಿಗೆ ಮೊದಲಿಗೆ ಮಿಕ್ಸಿ ಜಾರಿಯಲ್ಲಿ ಟೊಂಗೆಯ ಸಮೇತ ಸಾಂಬಾರ್‌ ಸೊಪ್ಪನ್ನು ಹಾಕಿ ರುಬ್ಬಿಕೊಳ್ಳಬೇಕು ನಂತರ ಮತ್ತೆ ನೀರನ್ನು ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಸಾಂಬಾರ್‌ ಸೊಪ್ಪಿನ ರಸವನ್ನು ಲೋಟದಲ್ಲಿ ಸೊಸಿಕೊಂಡು ಇದಕ್ಕೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಕುಡಿಯಬೇಕು. ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿದರೆ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ.

ಪುದೀನ ಎಲೆ
ಪುದೀನ ಎಲೆಯನ್ನು ಒಂದುಲೋಟ ನೀರಿನಲ್ಲಿ ನೆನಸಿಡಬೇಕು. ನಂತರ ಮಲಗುವ ಮುನ್ನ ಪುದೀನ ಎಲೆಯನ್ನು ನೆನಸಿಟ್ಟ ನೀರನ್ನು ಕುಡಿಯುವುದರಿಂದ ನಿದ್ರಾಹೀನತೆ ಕಡಿಮೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಜೀರಿಗೆ ಪುಡಿ
  • ತುಪ್ಪ
  • ಬಾಳೆಹಣ್ಣು

ಮಾಡುವ ವಿಧಾನ:
ಒಗ್ಗರಣೆ ಸೌಟ್‌ ನಲ್ಲಿ ತುಪ್ಪ ಹಾಕಿಕೊಂಡು ಅದಕ್ಕೆ ಜೀರಿಗೆ ಹಾಕಿ ಕೆಂಪಾಗುವವರೆಗೆ ಕಾಯಿಸಿಕೊಳ್ಳಬೇಕು. ನಂತರ ಒಂದು ಬೌಲ್ ನಲ್ಲಿ ಹೆಚ್ಚಿಕೊಂಡ ಬಾಳೆಹಣ್ಣು ಹಾಕಿಕೊಂಡು ಅದಕ್ಕೆ ಕಾಯಿಸಿಕೊಂಡ ತುಪ್ಪ ಮತ್ತು ಜೀರಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಮಲಗುವ ಮುನ್ನ ಸೇವಿಸಿದರೆ ನಿದ್ರಾಹೀನತೆ ಕಡಿಮೆ ಆಗುತ್ತದೆ.

ಇದನ್ನೂ ಓದಿ:Banana Hair pack:ಸುಕ್ಕುಗಟ್ಟುವ ಕೂದಲಿಗೆ ಬಾಳೆಹಣ್ಣಿನ ಹೇರ್‌ ಪ್ಯಾಕ್ ಟ್ರೈ ಮಾಡಿ

ಇದನ್ನೂ ಓದಿ:Chemical Free Shampoo:ರಾಸಾಯನಿಕ ಮುಕ್ತ ಶಾಂಪೂ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಇದನ್ನೂ ಓದಿ:Natural Powder :ಕೂದಲು ತೊಳೆಯಲು ಶಾಂಪೂ ಬದಲು ನೈಸರ್ಗಿಕ ಪುಡಿಯನ್ನು ಬಳಸಿ

ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುವುದರಿಂದ ಒಳ್ಳೆಯ ನಿದ್ರೆ ಮಾಡುವುದಕ್ಕೆ ಸಹಕಾರಿಯಾಗಿದೆ. ಒಂದು ಕಪ್‌ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ನಿದ್ದೆ ಬರಲು ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್‌ ಅಮೈನೋ ಆಸಿಡ್‌ ಇರುವುದರಿಂದ ನಿದ್ದೆ ಬರಿಸುವ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ. ನಿದ್ರಾಹೀನತೆ ಬಳಲುತ್ತಿರುವವರು ಮಲಗುವ ಮುನ್ನ ಅರ್ಧಗಂಟೆ ಧ್ಯಾನ ಮಾಡಿ ಮಲಗಿದರೆ ಮಧ್ಯ ರಾತ್ರಿಯಲ್ಲಿ ಎಚ್ಚರಗೊಳ್ಳುವುದು ತಪ್ಪುತ್ತದೆ. ಜೇನುತುಪ್ಪವನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ತಿನ್ನುವುದರಿಂದ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Ginger Health Tips:ಶುಂಠಿರಸದಿಂದ ಸೈನಸ್‌, ಮೈಗ್ರೇನ್‌ ನಿವಾರಣೆ

ಇದನ್ನೂ ಓದಿ:Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

Home Remedies for Insomnia hear the information

Comments are closed.