Jeera Soda Juice Recipe : ಬೇಸಿಗೆಯ ದಾಹಕ್ಕಾಗಿ ಮನೆಯಲ್ಲೇ ತಯಾರಿಸಿ ತಂಪಾದ ಜೀರಾ ಸೋಡ

ಕಳೆದ ಏಪ್ರಿಲ್‌ ಹಾಗೂ ಮೇ ತಿಂಗಳ ಬಿಸಿಲಿನ ತಾಪಮಾನಕ್ಕೆ ಜನರು ಬಳಲುತ್ತಿದ್ದಾರೆ. ಅದರಲ್ಲೂ ಬೇಸಿಗೆ ದಗೆಯಿಂದಾಗಿ ಉಂಟಾಗುವ ದಾಹಕ್ಕೆ ಜನರು (Jeera Soda Juice Recipe)‌ ತಂಪು ಪಾನೀಯಗಳಿಗೆ ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಅದರಲ್ಲೂ ಆರೋಗ್ಯಕರವಾದ ತಂಪು ಪಾನೀಯಗಳಿಗೆ ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಹೀಗಾಗಿ ಮನೆಯಲ್ಲೇ ತಯಾರಿಸಿದ ಮಜ್ಜಿಗೆ, ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇನ್ನು ಅಂಗಡಿಯಲ್ಲಿ ಸಿಗುವ ಜ್ಯೂಸ್‌ಕ್ಕಿಂತ ಮನೆಯಲ್ಲೇ ತಯಾರಿಸಿ ಕುಡಿಯಬಹುದು. ಅದರಲ್ಲಿ ಒಂದಾದ ಜೀರಾ ಸೋಡವನ್ನು ಮನೆಯಲ್ಲೇ ಸುಲಭವಾಗಿ ಮಾಡಿ ಕುಡಿಯಬಹುದಾಗಿದೆ. ಹಾಗಾಗಿ ಮನೆಯಲ್ಲೇ ಜೀರಾ ಸೋಡಾ ಹೇಗೆ ಮಾಡುವುದು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Jeera Soda Juice Recipe : ಜೀರಾ ಸೋಡಾ ತಯಾರಿಸಲು ಬೇಕಾಗುವ ಸಾಮಾಗ್ರಿ :

  • ಜೀರಿಗೆ
  • ಕಾಳು ಮೆಣಸು
  • ಸಕ್ಕರೆ
  • ಕಲ್ಲು ಉಪ್ಪು
  • ಪುದೀನ ಸೊಪ್ಪು
  • ಚಾಟ್‌ ಮಸಾಲೆ
  • ಇನೋ ಪುಡಿ
  • ನೀರು

ಮಾಡುವ ವಿಧಾನ :
ಮೊದಲಿಗೆ ಗ್ಯಾಸ್‌ ಸ್ಟವ್‌ ಆನ್‌ ಮಾಡಿ ಅದರ ಮೇಲೆ ಒಂದು ಸಣ್ಣ ಕಡಾಯಿ ಇಟ್ಟುಕೊಂಡು ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಮೂರು ಟೇಬಲ್‌ ಸ್ಫೂನ್‌ನಷ್ಟು ಜೀರಿಗೆ ಎಂಟು ಕಾಳು ಮೆಣಸು ಹಾಕಿ ಡ್ರೈ ಆಗಿ ಹುರಿದುಕೊಳ್ಳಬೇಕು. ಚೆನ್ನಾಗಿ ಹುರಿದ ಜೀರಿಗೆ ಹಾಗೂ ಕಾಳು ಮೆಣಸನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಆಮೇಲೆ ಒಂದು ಪಾತ್ರೆಗೆ ಮುಕ್ಕಾಲು ಬೌಲ್‌ ಆಗುವಷ್ಟು ನೀರನ್ನು ಹಾಕಿ ಕುದಿಸಿಕೊಳ್ಳಬೇಕು. ನಂತರ ಅದಕ್ಕೆ ಹುಡಿ ಮಾಡಿ ಇಟ್ಟುಕೊಂಡ ಜೀರಿಗೆ ಹಾಗೂ ಕಾಳು ಮೆಣಸಿನ ಹುಡಿಯನ್ನು ನೀರಿಗೆ ಹಾಕಿ ಕುದಿಸಿಕೊಳ್ಳಬೇಕು. ಅದಕ್ಕೆ ಮುಕ್ಕಾಲು ಬೌಲ್‌ ಆಗುವಷ್ಟು ಸಕ್ಕರೆ ಹಾಕಿ ಸ್ವಲ್ಪ ಅಂದರೆ ಒಂದು ಕುದಿ ಕುದಿಸಿಕೊಳ್ಳಬೇಕು.

ಇದನ್ನೂ ಓದಿ : Pineapple Recipe : ಹುಳಿ ಸಿಹಿ ಮಿಶ್ರಣದ ಅನಾನಸ್‌ ಫಿರ್ನಿ; ಮಹಿಳಾ ದಿನಾಚರಣೆಗೊಂದು ವಿಶೇಷ ಪಾಕವಿಧಾನ

ಇದನ್ನೂ ಓದಿ : Breakfast Recipe : ಬೆಳಗ್ಗಿನ ಉಪಾಹಾರಕ್ಕೆ ಡಿಫರೆಂಟ್‌ ಆಗಿ ಪೌಷ್ಠಿಕವಾದ ಸೋರೆಕಾಯಿ ಚಿಲ್ಲಾ ಪ್ರಯತ್ನಿಸಿ

ಕಾಲು ಚಮಚವಾಗುವಷ್ಟು ಕಲ್ಲು ಉಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಸಕ್ಕರೆ ಸ್ವಲ್ಪ ಅಂಟು ಅಂಟು ಆದ ಮೇಲೆ ಸ್ಟವ್‌ ಆಫ್‌ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಕಾಲು ಚಮಚ ಆಗುವಷ್ಟು ಚಾಟ್‌ ಮಸಾಲೆಯನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಸ್ವಲ್ಪ ಹೊತ್ತು ಬಿಟ್ಟು ಸೊಸಿಕೊಳ್ಳಬೇಕು. ಈ ರೀತಿಯಾಗಿ ಮಿಶ್ರಣ ರೆಡಿ ಮಾಡಿ ಇಟ್ಟುಕೊಳ್ಳಬೇಕು. ಆನಂತರ ಒಂದು ಗ್ಲಾಸ್‌ಗೆ ಮೂರು ಟೀ ಸ್ಫೂನ್‌ ಆಗುವಷ್ಟು ಈ ಮಿಶ್ರಣ ಆಗುವಷ್ಟು ಹಾಕಿಕೊಂಡು ಅರ್ಧ ಟೀ ಸ್ಪೂನ್‌ ಆಗುವಷ್ಟು ಇನೋವನ್ನು ಹಾಕಿಕೊಂಡು ಬೇಕಾದಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬಹುದು. ಕೋಲ್ಡ್‌ ವಾಟರ್‌ನ್ನು ಕೂಡ ಹಾಕಿಕೊಳ್ಳಬಹುದು. ಈ ರೀತಿಯಾಗಿ ಮನೆಯಲ್ಲೇ ರುಚಿ ಸುಚಿಯಾಗಿ ಜೀರಾ ಸೋಡಾ ಮಾಡಿಕೊಂಡು ಈ ಬೇಸಿಗೆಯಲ್ಲಿ ಕುಡಿಯಬಹುದು.

Jeera Soda Juice Recipe : Homemade cool jeera soda for summer thirst

Comments are closed.