Millet Biscuits Recipe:ಆರೋಗ್ಯಕರ ಟೇಸ್ಟಿ ರಾಗಿ ಬಿಸ್ಕತ್ತು ಮಾಡುವ ವಿಧಾನ ತಿಳಿದುಕೊಳ್ಳಿ

(Millet Biscuits Recipe)ರಾಗಿಯನ್ನು ಕ್ಯಾಲ್ಸಿಯಂನ ಆಗರ ಎಂದು ಹೇಳಬಹುದು ಬೇರೆ ಧಾನ್ಯಗಳಿಗಿಂತ ರಾಗಿಯಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶ ಇರುತ್ತದೆ. ರಾಗಿಯಿಂದ ಮುದ್ದೆ, ರಾಗಿದೊಸೆ ಮಾಡಿ ತಿನ್ನುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮಕ್ಕಳಿಗೆ ರಾಗಿಯಿಂದ ಮಾಡಿದ ತಿಂಡಿಯನ್ನು ಕೊಡುವುದರಿಂದ ಮೂಳೆಗಳು ಬಲಗೊಳ್ಳುತ್ತೆ. ಹಾಗಾಗಿ ರಾಗಿಯ ಬಿಸ್ಕತ್ತು ಮಾಡಿ ಕೊಟ್ಟರೆ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. ರಾಗಿ ಬಿಸ್ಕತ್ತು ಮಾಡುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿಯೋಣ.

(Millet Biscuits Recipe)ಬೇಕಾಗುವ ಸಾಮಾಗ್ರಿಗಳು:
ರಾಗಿಹಿಟ್ಟು
ಗೋಧಿ ಹಿಟ್ಟು
ಕೊ ಕೊ ಪೌಡರ್‌
ಅಡುಗೆ ಸೋಡ
ಬೆಲ್ಲ
ವೆನಿಲ್ಲಾ ಎಸೆನ್ಸ್‌

ಮಾಡುವ ವಿಧಾನ
ಬೌಲ್‌ ನಲ್ಲಿ ರಾಗಿ ಹಿಟ್ಟು, ಗೋಧಿ ಹಿಟ್ಟು, ಕೊ ಕೊ ಪೌಡರ್‌ , ಅಡುಗೆ ಸೋಡ, ಬೆಲ್ಲ, ವೆನಿಲ್ಲಾ ಎಸೆನ್ಸ್‌ ಹಾಕಿಕೊಂಡು ಚಪಾತಿ ಹಿಟ್ಟಿನ ಹದ ಬರುವಂತೆ ಕಲಸಿಕೊಳ್ಳಬೇಕು. ಆ ಹಿಟ್ಟನ್ನು ಬಿಸ್ಕತ್ತಿನ ಶೇಪ್‌ ಮಾಡಿಕೊಂಡು ಅದರ ಮೇಲೆ ಬಾದಾಮಿ ಇಡಬೇಕು. ರಾಗಿ ಬಿಸ್ಕತ್ತನ್ನು ತಟ್ಟೆಯಲ್ಲಿ ಜೋಡಿಸಿ ಇಟ್ಟುಕೊಂಡು ಓವನ್‌ ಒಳಗಡೆ ಇಡಬೇಕು. ಓವನ್‌ ನಲ್ಲಿ ಕನ್ವಿಕ್ಷನ್‌ ಮೋಡ್‌ ನಲ್ಲಿ 180 ಡಿಗ್ರಿ ಸೇಟ್‌ ಮಾಡಿಕೊಂಡು ಹತ್ತು ನಿಮಿಷ ಬಿಟ್ಟರೆ ರುಚಿಯಾಗಿ ಸವಿಯಲು ರಾಗಿ ಬಿಸ್ಕತ್ತು ರೆಡಿ.

ಇದನ್ನೂ ಓದಿ:Ginger Chocolate Recipe:ಕೆಮ್ಮಿನಿಂದ ನಿಮ್ಮ ಮಕ್ಕಳು ನಿದ್ದೆ ಮಾಡ್ತಿಲ್ವಾ? ಹಾಗಾದ್ರೆ ಶುಂಠಿ ಚಾಕಲೇಟ್‌ ಮಾಡಿ ಕೊಡಿ

ಇದನ್ನೂ ಓದಿ:Pappaya Halva: ಸಿಹಿ ಸಿಹಿಯಾದ ಪಪ್ಪಾಯಿ ಹಲ್ವಾ: ನೀವೊಮ್ಮೆ ಟ್ರೈ ಮಾಡಲೇ ಬೇಕು

ಇದನ್ನೂ ಓದಿ:Dates And Almond Recipe:ಖರ್ಜೂರ, ಬಾದಾಮಿ ಉಂಡೆ ಟ್ರೈ ಮಾಡಿ : ಆರೋಗ್ಯ ವೃದ್ದಿಸಿಕೊಳ್ಳಿ

ರಾಗಿ
ರಾಗಿಯು ತೂಕ ಇಳಿಸಿಕೊಳ್ಳುವುದಕ್ಕೆ ಉತ್ತಮ ಎಂದು ಹೇಳಬಹುದು. ರಾಗಿಯನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತೆ ಮಾಡುವುದರಿಂದ ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ರಾಗಿಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಮಧುಮೇಹ ಇರುವವರು ರಾಗಿಯನ್ನು ಸೇವನೆ ಮಾಡುವುದರಿಂದ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ರಾಗಿಯನ್ನು ನಿತ್ಯ ಬಳಕೆ ಮಾಡುವುದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ. ಇದರಲ್ಲಿ ಇರುವ ಅಮಿನೋ ಆಮ್ಲ ಮೈಗ್ರೇನ್‌ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ದೂರ ಮಾಡುತ್ತದೆ. ರಾಗಿಯನ್ನು ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಮೆಥಿಯೋನಿನ್‌ ಮತ್ತು ಲೈಸಿನ್‌ ಆಮ್ಲವು ಚರ್ಮದಲ್ಲಿ ನೆರಿಗೆ ಆಗುವುದನ್ನು ತಪ್ಪಿಸುತ್ತದೆ. ರಾಗಿಯಲ್ಲಿರುವ ವಿಟಮಿನ್‌ ಡಿ ಅಂಶವು ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರತಿನಿತ್ಯ ರಾಗಿ ಅಂಬಲಿ ಮಾಡಿ ಕುಡಿಯುವುದನ್ನು ರೂಡಿಸಿಕೊಂಡರೆ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

Millet Biscuits Recipe Learn how to make healthy tasty millet biscuits

Comments are closed.