Ginger Chocolate Recipe:ಕೆಮ್ಮಿನಿಂದ ನಿಮ್ಮ ಮಕ್ಕಳು ನಿದ್ದೆ ಮಾಡ್ತಿಲ್ವಾ? ಹಾಗಾದ್ರೆ ಶುಂಠಿ ಚಾಕಲೇಟ್‌ ಮಾಡಿ ಕೊಡಿ

(Ginger Chocolate Recipe)ವಾತಾವರಣದ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಹೆಚ್ಚಿಗೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಚಿಕ್ಕ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿರುವುದರಿಂದ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಕೆಲ ಮಕ್ಕಳಲ್ಲಿ ದೀರ್ಘಕಾಲದ ವರೆಗೆ ಈ ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳತ್ತದೆ. ಮಕ್ಕಳಲ್ಲಿ ಕೆಮ್ಮು ಬೇಗ ನಿವಾರಣೆ ಮಾಡುವುದಕ್ಕೆ ಶುಂಠಿ ಚಾಕಲೇಟ್‌ ಮಾಡಿಕೊಡಿ. ಶುಂಠಿ ಚಾಕಲೇಟ್‌ ಹೇಗೆ ಮಾಡುವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

(Ginger Chocolate Recipe)ಬೇಕಾಗುವ ಸಾಮಾಗ್ರಿಗಳು:
ಶುಂಠಿ ಪುಡಿ
ಬೆಲ್ಲ
ನಿಂಬೆ ರಸ
ಏಲಕ್ಕಿ
ಲವಂಗ
ಜೇನುತುಪ್ಪ

ಮಾಡುವ ವಿಧಾನ:
ಬಾಣಲೆಯಲ್ಲಿ ಒಂದು ಲೋಟ ನೀರು ಹಾಕಿ ಸ್ವಲ್ಪ ಕಾಯಿಸಿಕೊಂಡು ಶುಂಠಿ ಪುಡಿ, ಬೆಲ್ಲ ಹಾಕಿ ಸೌಟನ್ನು ಆಡಿಸಬೇಕು. ನಂತರ ನಿಂಬೆರಸ, ಏಲಕ್ಕಿ, ಲವಂಗ ಹಾಕಿ ಸೌಟು ಆಡಿಸಬೇಕು ದಪ್ಪಹದ ಬರುತ್ತಿದ್ದ ಹಾಗೆ ಜೇನುತುಪ್ಪ ಸೇರಿಸಿ ಗ್ಯಾಸ್‌ ಆಫ್‌ ಮಾಡಿಕೊಂಡು ಉಂಡೆ ಕಟ್ಟಿಕೊಳ್ಳಬೇಕು. ಈ ಉಂಡೆಯನ್ನು ಸಕ್ಕರೆ ಪುಡಿ ಅಥವಾ ಹುರಿದು ಪುಡಿಮಾಡಿಕೊಂಡ ಅಕ್ಕಿಯ ಮೇಲೆ ಹೊರಡಿಸಿ ಡಬ್ಬಿಯಲ್ಲಿ ಶೇಖರಣೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಕೆಮ್ಮು ಇರುವಾಗ ಶುಂಠಿ ಚಾಕಲೇಟ್‌ ಕೊಡುತ್ತಾ ಬಂದರೆ ಕೆಮ್ಮು ಕಡಿಮೆ ಆಗುತ್ತದೆ.

ಇದನ್ನೂ ಓದಿ:Namma clinic: ಆರೋಗ್ಯ ಕ್ರಾಂತಿಗೆ ಕರ್ನಾಟಕ ಸಜ್ಜು: ಒಂದೇ ದಿನ 114 ನಮ್ಮ ಕ್ಲಿನಿಕ್‌ ಆರಂಭ

ಇದನ್ನೂ ಓದಿ:Hair Beauty Tips:ಕೂದಲು ತೊಳೆಯಲು ಶಾಂಪು ಬಳಸಬೇಕಿಲ್ಲ! ಈ ಟಿಪ್ಸ್ ಅನುಸರಿಸಿ

ಇದನ್ನೂ ಓದಿ:Health Tips : ನಿಮಗಿದು ಗೊತ್ತಾ; ಆಹಾರ ಸೇವಿಸಿ ಎಷ್ಟು ಸಮಯದ ನಂತರ ಔಷಧಿ ತೆಗೆದುಕೊಳ್ಳುವುದು ಸರಿ ಎಂದು

ಶುಂಠಿ ಪುಡಿ
ಶುಂಠಿ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿಕೊಂಡು ತಿನ್ನುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಶುಂಠಿಯನ್ನು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಚಹಾ ಮಾಡುವಾಗ ಅದರಲ್ಲಿ ಒಂದು ಸಣ್ಣ ಶುಂಠಿಯನ್ನು ಹಾಕಿ ಕಾಯಿಸಿಕೊಂಡು ಕುಡಿದರೆ ಉತ್ತಮ. ಅರ್ಧ ಚಮಚ ಶುಂಠಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಬೆಳಿಗ್ಗೆ ಕುಡಿಯುವುದರಿಂದ ( ಬೇಕಾದರೆ ಜೇನುತುಪ್ಪವನ್ನು ಕೂಡ ಹಾಕಿಕೊಳ್ಳಬಹುದು) ಗರ್ಭಿಣಿ ಮಹಿಳೆಯರ ವಾಕರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಸಿ ಶುಂಠಿ ಸೇವನೆ ಮಾಡುವುದರಿಂದ ಮೈಗ್ರೇನ್‌ ನಿಂದ ಬಳಲುತ್ತಿದ್ದರೆ ಇದನ್ನು ಕಡಿಮೆ ಮಾಡುತ್ತದೆ. ಶುಂಠಿಯಲ್ಲಿ ಮೆಗ್ನೀಶಿಯಂ, ಫೈಬರ್‌,ಸೋಡಿಯಂ,ಕಬ್ಬಿಣ ಅಂಶ ಹೇರಳವಾಗಿ ಇರುವುದರಿಂದ ಇದನ್ನು ಪುಡಿಮಾಡಿ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ‌ ಮೀತವಾಗಿ ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.ಮಲಗುವ ಮುನ್ನ ಶುಂಠಿಯನ್ನು ಸೇವನೆ ಮಾಡುವುದರಿಂದ ಆಹಾರವು ಜೀರ್ಣ ಆಗುವಂತೆ ಮಾಡುತ್ತದೆ. ಶುಂಠಿಯನ್ನು ಪ್ರತಿದಿನದ ಅಡುಗೆಯಲ್ಲಿ ಬಳಸಿದರೆ ಇನ್ನು ಉತ್ತಮ.

Ginger Chocolate Recipe Are your children not sleeping because of cough? give to the ginger chocolate

Comments are closed.