ನಿಮ್ಮ ದೇಹವನ್ನು ತಂಪಾಗಿರಿಸಲು ಪುದೀನ, ಹಸಿ ಮಾವಿನ ಪಾನೀಯ ಕುಡಿಯಿರಿ

ಬೇಸಿಗೆ ಕಾಲದ ಸೆಕೆಯಲ್ಲಿ ಜನರು ತಂಪಾಗಿರುವ ಆಹಾರ ಪದಾರ್ಥಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಯಾಕೆಂದರೆ ಬೇಸಿಗೆ ಕಾಲದಲ್ಲಿ ದೇಹವು ಹೆಚ್ಚಿನ ಉಷ್ಣತೆಗೆ ಒಳಗಾಗಿರುತ್ತದೆ. ಹೀಗಾಗಿ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮನೆಯಲ್ಲೇ ತಯಾರಿಸುವ ಪಾನೀಯಗಳನ್ನು ಕುಡಿಯುವುದು ಹೆಚ್ಚು ಸೂಕ್ತವಾಗಿರುತ್ತದೆ. ಅದರಲ್ಲೂ ಪುದೀನ, ಹಸಿ ಮಾವಿನ ಹಣ್ಣಿನ ಪಾನೀಯ ಅಥವಾ ಆಮ್‌ ಪಾನೀಯ (Mint – Raw Mango Panna Recipe) ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ತುಂಬಾ ಪ್ರಯೋಜನಕಾರಿ ಆಗಿರುತ್ತದೆ.

ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಹೆಚ್ಚಾಗಿ ಈ ಪಾನೀಯವನ್ನು ಹೊಟ್ಟೆ ನೋವು, ಮಲಬದ್ಧತೆ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕುಡಿಯುತ್ತಾರೆ. ಇದಲ್ಲದೆ, ಸೆಕೆಯು ಪ್ರತಿದಿನ ಹೆಚ್ಚುತ್ತಿರುವಾಗ, ಪುದೀನ ಮತ್ತು ಹಸಿ ಮಾವಿನ ಪನ್ನಾವನ್ನು ಕುಡಿಯುವುದು ಹೆಚ್ಚು ಅಗತ್ಯವಾಗುತ್ತದೆ. ಹಾಗಾದರೆ, ಆಮ್ ಪನ್ನಾ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಮೊದಲು ತಿಳಿದುಕೊಳ್ಳೋಣ. ಹಾಗೆಯೇ ಅದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿಯೋಣ.

ಆಮ್ ಪನ್ನಾ ಅಥವಾ ಪುದೀನ ಮತ್ತು ಹಸಿ ಮಾವಿನ ಪಾನೀಯ ಕುಡಿಯುವುದರಿಂದ ಆಗುವ ಪ್ರಯೋಜನಗಳು :

ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯಕಾರಿ :
ಬೇಸಿಗೆಯಲ್ಲಿ, ದೇಹದಲ್ಲಿ ಪೋಷಕಾಂಶಗಳ ಕೊರತೆಯು ಶಾಖದ ಹೊಡೆತಕ್ಕೆ ಬಲಿಯಾಗಲು ಕಾರಣವಾಗುತ್ತದೆ. ಆದ್ದರಿಂದ, ಈ ಪರಿಸ್ಥಿತಿಯನ್ನು ತಪ್ಪಿಸಲು ಸೋಡಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿರುವ ಒಂದು ಲೋಟ ಆಮ್ ಪನ್ನಾ ದೇಹದಲ್ಲಿ ಉತ್ತಮ ಪೋಷಕಾಂಶಗಳ ಸರಿಯಾದ ಸಮತೋಲನವನ್ನು ಮರಳಿ ತರಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ವಿವಿಧ ಕೊರತೆಯನ್ನು ಗುಣಪಡಿಸುವ ಮೂಲಕ, ಶಾಖದ ಹೊಡೆತವನ್ನು ತಡೆಗಟ್ಟುವಲ್ಲಿ ಇದು ಸಹಾಯಕವಾಗಿದೆ.

ಹಸಿ ಮಾವಿನ ಹಣ್ಣಿನ ಪನ್ನಾ ಹೊಟ್ಟೆಗೆ ಪ್ರಯೋಜನಕಾರಿ :
ಆಮ್ ಪನ್ನಾ ಹೊಟ್ಟೆಯ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುವ ಅಲ್ಡಿಹೈಡ್‌ಗಳು ಮತ್ತು ಎಸ್ಟೆರೇಸ್‌ಗಳಂತಹ ಕೆಲವು ಸಕ್ರಿಯ ಪದಾರ್ಥಗಳನ್ನು ಒಳಗೊಂಡಿದೆ. ಅಲ್ಲದೆ, ಇದರಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕರುಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಮಲಬದ್ಧತೆ, ಅಜೀರ್ಣ ಮತ್ತು ಆಮ್ಲೀಯತೆಯ ಸಮಸ್ಯೆಯಲ್ಲೂ ಇದು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೇ ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅತಿಸಾರ ಭೇದಿ ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ : World Liver Day 2023: ಫ್ಯಾಟಿ ಲಿವರ್‌ ಸಮಸ್ಯೆ ಎದುರಿಸಲು ಸಹಾಯ ಮಾಡುವ ಆಹಾರಗಳಿವು; ತಪ್ಪದೇ ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ

ಇದನ್ನೂ ಓದಿ : Summer Diet Plan For Kids : ಬೇಸಿಗೆಯ ಬಿಸಿಲಿನಿಂದ ಮಕ್ಕಳನ್ನು ಕಾಪಾಡಲು ಈ ಆಹಾರಗಳನ್ನು ನೀಡಿ…

ಪುದೀನ ಮತ್ತು ಹಸಿ ಮಾವಿನ ಪನ್ನಾ (ಆಮ್ ಪನ್ನಾ) ತಯಾರಿಸುವ ವಿಧಾನ :
ಆಮ್ ಪನ್ನಾ ಮಾಡಲು, ಮೊದಲು, ಹಸಿ ಮಾವಿನಹಣ್ಣುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಕುದಿಸಬೇಕು. ಈಗ ಅದನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ರುಬ್ಬುವಾಗ, ಅದಕ್ಕೆ ಸ್ವಲ್ಪ ಪುದೀನ ಎಲೆಗಳು, ಹುರಿದ ಜೀರಿಗೆ ಮತ್ತು ಉಪ್ಪು ಸೇರಿಸಿಕೊಳ್ಳಬೇಕು. ನಂತರ ಹದಕ್ಕೆ ಬೇಕಾಗುವಷ್ಟು ನೀರು, ಐಸ್, ಉಪ್ಪು, ಸ್ವಲ್ಪ ಸಕ್ಕರೆ ಮತ್ತು 1 ನಿಂಬೆ ರಸವನ್ನು ಹಾಕಿಕೊಳ್ಳಬೇಕು. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಆಮ್‌ ಪನ್ನಾವನ್ನು ಕುಡಿಯಬೇಕು.

Mint – Raw Mango Panna Recipe : Drink mint, raw mango drink to keep your body cool.

Comments are closed.