ಆರೋಗ್ಯ‌ ಕೇಂದ್ರಗಳಿಗೂ ಮಾದರಿ ನೀತಿ ಸಂಹಿತೆ ಪ್ರಕಟ : ಕಟ್ಟುನಿಟ್ಟಿನ ಆದೇಶ ಪಾಲನೆಗೆ ಸೂಚನೆ

ಬೆಂಗಳೂರು : (Model Code of Conduct) ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಆರೋಗ್ಯ ಇಲಾಖೆ ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಿದ್ದು, ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಜನೌಷದಿ ಕೇಂದ್ರಗಳಲ್ಲಿ ಹಾಗೂ ಇನ್ನೀತರ ಕಚೇರಿಗಳಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್ಸ್‌ ಗಳು, ನಾಮಫಲಕಗಳನ್ನು ಕೂಡಲೇ ತೆಗೆಯುವಂತೆ ಆದೇಶಿಸಿದೆ.

ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಜನೌಷಧಿ ಕೇಂದ್ರಗಳು ಹಾಗೂ ಮತ್ತಿತರ ಕಛೇರಿಗಳಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್‌ ಗಳು, ನಾಮಫಲಕಗಳು, ಫಲಕಗಳು, ಜಾಹೀರಾತುಗಳಲ್ಲಿ ಪ್ರದರ್ಶಿಸಲಾದ ಛಾಯಾಚಿತ್ರಗಳನ್ನು ಕೂಡಲೇ ತೆಗೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದಲ್ಲದೇ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ. ಇದರ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೊತ್ತುಕೊಂಡಿದ್ದು, ಆದೇಶ ಪಾಲನೆಯಾದ ತಕ್ಷಣದಲ್ಲಿ ಈ ಕುರಿತು ಆಯುಕ್ತಾಲಯಕ್ಕೆ ದೃಢಿಕರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸದ್ಯ ಜಾರಿಯಾಗಿರುವ ಮಾದರಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಗ್ರತೆವಹಿಸಿ ಕಾರ್ಯನಿರ್ವಹಿಸಲು ಆರೋಗ್ಯ ಇಲಾಖೆ ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆಯು ಯಾವುದೇ ಐಇಸಿ ಕಾರ್ಯಕ್ರಮಗಳು, ಟೆಂಡರ್‌ ಕಾರ್ಯಕ್ರಮಗಳು, ವರ್ಗಾವಣೆಗಳು ಇವುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ದೂರಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿದೆ. ಇನ್ನೂ ಈ ಕುರಿತು ಯಾವುದೇ ಪ್ರಸ್ತಾವನೆಗಳನ್ನು ಸೂಕ್ತ ಸಮರ್ಥನೆಯೊಂದಿಗೆ ಹಾಗೂ ಆಯುಕ್ತಾಲಯದ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸಲು ನಿರ್ದೇಶಿಸಲಾಗಿದೆ.

ಇದನ್ನೂ ಓದಿ : ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ, ಮಧ್ಯ ಮಾರಾಟ ನಿಷೇಧ

ಇದನ್ನೂ ಓದಿ : ಮತದಾರರು ನೋಟಾ ವೋಟ್‌ ಹಾಕಿದ್ರೆ ಏನಾಗುತ್ತೆ : ವಿವರಣೆ ಕೊಟ್ಟ ನಟ ಉಪೇಂದ್ರ

ಇದನ್ನೂ ಓದಿ : B.S Yediyurappa : ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ : ಹರಕೆ ಕುರಿ ಪ್ಲ್ಯಾನ್ ನಿಂದ ಮಗನನ್ನು ಬಚಾವ್ ಮಾಡಿದ ಬಿ.ಎಸ್.ಯಡಿಯೂರಪ್ಪ

Model Code of Conduct: Model code of conduct for health centers also announced: instructions for strict order compliance

Comments are closed.