Natural Powder :ಕೂದಲು ತೊಳೆಯಲು ಶಾಂಪೂ ಬದಲು ನೈಸರ್ಗಿಕ ಪುಡಿಯನ್ನು ಬಳಸಿ

(Natural Powder)ಶಾಂಪೂಯಿಂದ ಕೂದಲು ತೊಳೆದರೆ ಇದರಲ್ಲಿರುವ ಕೆಮಿಕಲ್‌ ಕೂದಲಿಗೆ ಅತಿ ಹೆಚ್ಚು ಹಾನಿ ಮಾಡುತ್ತದೆ. ಇದರ ಬದಲು ನೈಸರ್ಗಿಕವಾಗಿ ಸಿಗುವ ಪುಡಿಗಳಿಂದ ಕೂದಲನ್ನು ತೊಳೆದರೆ ಹಾನಿ ಉಂಟು ಮಾಡುವುದರಿಂದ ತಪ್ಪಿಸಿಕೊಳ್ಳಬಹುದು. ಅಷ್ಟಕ್ಕೂ ಈ ನೈಸರ್ಗಿಕ ಪುಡಿಗಳನ್ನು ತಯಾರಿಸಿಕೊಳ್ಳುವುದು ಹೇಗೆ ಅನ್ನುವ ಮಾಹಿತಿ ಇಲ್ಲಿದೆ.

(Natural Powder)ಬೇಕಾಗುವ ಸಾಮಾಗ್ರಿಗಳು:

  • ಅಂಟುವಾಳ ಪುಡಿ
  • ನೆಲ್ಲಿಕಾಯಿ ಪುಡಿ
  • ಮೆಂತೆ ಪುಡಿ
  • ಬೇವಿನ ಪುಡಿ
  • ಭೃಂಗರಾಜ ಪುಡಿ

ಮಾಡುವ ವಿಧಾನ:

ಒಂದು ಬೌಲ್ ನಲ್ಲಿ ಅರ್ಧ ಕಪ್‌ ಅಂಟುವಾಳ ಪುಡಿ ,ಅರ್ಧ ಕಪ್‌ ನೆಲ್ಲಿಕಾಯಿ ಪುಡಿ, ಅರ್ಧಕಪ್‌ ಮೆಂತೆ ಪುಡಿ, ಅರ್ಧಕಪ್‌ ಬೇವಿನ ಪುಡಿ, ಅರ್ಧ ಕಪ್‌ ಭೃಂಗರಾಜ ಪುಡಿ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ನಂತರ ಮಿಶ್ರಣ ಮಾಡಿಕೊಂಡ ಪುಡಿಯನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ತಲೆಸ್ನಾನ ಮಾಡುವಾಗ ಈ ಪುಡಿಯನ್ನು ಒಂದು ಬೌಲ್‌ ಗೆ ಹಾಕಿಕೊಂಡು ಸ್ವಲ್ಪ ಅಕ್ಕಿ ನೀರನ್ನು ಬೆರೆಸಿಕೊಳ್ಳಬೇಕು. ನಂತರ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಮಸಾಜ್‌ ಮಾಡುತ್ತಾ ತೊಳೆಯಬೇಕು. ಪ್ರತಿಬಾರಿ ಶಾಂಪೂ ಬಳಸುವ ಬದಲು ಪುಡಿಯನ್ನು ಬಳಸಿದರೆ ಕೂದಲಿಗೆ ಉತ್ತಮ.

ಅಂಟುವಾಳ
ನಮ್ಮ ಹಿರಿಯರು ಈ ಹಿಂದೆ ಸೋಪ್ ಬಳಕೆಯ ಬದಲು ಅಂಟುವಾಳ ಕಾಯಿಗಳನ್ನು ಬಳಸುತ್ತಿದ್ದರು.ಅಂಟುವಾಳ ನೈಸರ್ಗಿಕವಾಗಿ ಸಿಗುವುದರಿಂದ ಚರ್ಮಕ್ಕೆ ಯಾವುದೇ ಹಾನಿಯನ್ನು ಮಾಡುವುದಿಲ್ಲ.ಅಷ್ಟೇ ಅಲ್ಲದೆ ಬಂಗಾರವನ್ನೂ ಸ್ವಚ್ಚಗೊಳಿಸುವುದಕ್ಕೆ ಈ ಅಂಟುವಾಳ ಕಾಯಿಯನ್ನು ಬಳಸಲಾಗುತ್ತದೆ. ಇದನ್ನು ಕೂದಲು ಸ್ವಚ್ಚಗೊಳಿಸುವುದಕ್ಕೂ ಕೂಡ ಬಳಸಲಾಗುತ್ತದೆ. ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಕೂಡ ಇದಕ್ಕಿದೆ. ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಮೈಗ್ರೇನ್‌ ಸಮಸ್ಯೆ ಇರುವವರಿಗಂತೂ ಇದು ಉಪಕಾರಿಯಾಗಿದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಸುಲಭವಾಗಿ ನಿವಾರಣೆ ಮಾಡುವಂತಹ ಶಕ್ತಿ ಅಂಟುವಾಳಕ್ಕೆ ಇದೆ. ಅಷ್ಟೇ ಅಲ್ಲದೆ ಇದರ ರಸವನ್ನು ಪಿಂಪಲ್‌ ಗೆ ಹಚ್ಚಿದರೆ ಪಿಂಪಲ್‌ ಮಾಯವಾಗುತ್ತದೆ.

ಇದನ್ನೂ ಓದಿ:Facial Beauty Tips :ಮುಖದ ಅಂದ ಹೆಚ್ಚಿಸಲು ಈ ನಾಲ್ಕು ಬ್ಯೂಟಿ ಟಿಪ್ಸ್‌ ಅನುಸರಿಸಿ

ಇದನ್ನೂ ಓದಿ:Winter Drink : ತಲೆನೋವು ಓಡಿಸುವ ಸೂಪರ್‌ ಡ್ರಿಂಕ್‌; ಇದನ್ನು ಕುಡಿಯದೇ ನಿಮ್ಮ ದಿನ ಪ್ರಾರಂಭಿಸಲೇ ಬೇಡಿ

ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಅಂಶ ಸಮೃದ್ಧವಾಗಿ ಇರುವುದರಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕೆ ಇದೆ. ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಕೆಮ್ಮು, ಶೀತ ಶ್ವಾಸಕೋಶದ ಸಮಸ್ಯೆಯನ್ನು ದೂರವಿಡಲು ಸಹಾಯ ಮಾಡುತ್ತದೆ. ಕೂದಲು ಗಂಟಾಗುವುದು ಮತ್ತು ಬಿಸಿಲಿನಿಂದ ಆಗುವ ಹಾನಿಯನ್ನು ತಡೆಯುವ ಶಕ್ತಿ ಈ ನೆಲ್ಲಿಕಾಯಿಗೆ ಇದೆ. ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಹಲವು ಪ್ರಯೋಜನವನ್ನು ಪಡೆದುಕೊಳ್ಳಬಹುದು.ನೆಲ್ಲಿಕಾಯಿಯಿಂದ ಮಾಡಿದ ಜ್ಯೂಸ್‌ ಕುಡಿಯುವುದರಿಂದ ಮಧುಮೇಹ ಇರುವವರಿಗೆ ತುಂಬಾ ಉಪಯುಕ್ತವಾಗಿದೆ.

Use natural powder instead of shampoo to wash hair

Comments are closed.