Karavali bomb blast case: ಸ್ಫೋಟಕ್ಕೂ ಮುನ್ನ ರಿಂಗಣಿಸಿದ ಸ್ಯಾಟಲೈಟ್‌ ಫೋನ್‌ : ಕರಾವಳಿಯಲ್ಲಿ ಮತ್ತೇ ಆತಂಕ

ಮಂಗಳೂರು: (Karavali bomb blast case) ಮಂಗಳೂರಲ್ಲಿ ಆಟೋದಲ್ಲಿ ನಡೆದಿರುವ ಸ್ಪೋಟ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡಿದೆ. ಇದೀಗ ಉಗ್ರರು ಸ್ಫೋಟಕ್ಕೂ ಮೊದಲು ಸ್ಯಾಟಲೈಟ್‌ ಫೋನ್‌ ಬಳಸಿರುವುದು ತಿಳಿದುಬಂದಿದೆ. ಅಲ್ಲದೇ ಉಗ್ರರ ಟಾರ್ಗೆಟ್ ಆಗಿರುವುದು ಪಂಪ್ ವೆಲ್ ಅಲ್ಲಾ ಬದಲಾಗಿ ಹಿಂದೂ ದೇವಾಲಯಗಳು ಮತ್ತು ಸಾರ್ವಜನಿಕ ಪ್ರದೇಶಗಳು ಎನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಮಂಗಳೂರು ನಗರದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ(Karavali bomb blast case)ಗೊಂಡಿದ್ದು, ಆಟೋದಲ್ಲಿ ಪ್ರಯಾಣಿಕನಾಗಿದ್ದ ಉಗ್ರ ಶಾರೀಖ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದಾನೆ. ಹೀಗಾಗಿ ಪೊಲೀಸರಿಗಾಗಲಿ, ತನಿಖಾ ಸಂಸ್ಥೆಗಳಿಗಾಗಲಿ ಆತನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಪೊಲೀಸರು ಈಗಾಗಲೇ ಶಾರೀಖ್ ಗೆ ಸಹಕಾರ ನೀಡುತ್ತಿದ್ದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಾಗಿದೆ. ಶಾರೀಖ್‌ ಸ್ಫೋಟಕ್ಕೂ ಮೊದಲು ಸ್ಯಾಟಲೈಟ್‌ ಫೋನ್‌ ಬಳಸಿರುವುದು ತಿಳಿದು ಬಂದಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ್ಯಾಟಲೈಟ್‌ ಫೋನ್‌ ಆಕ್ಟಿವ್‌ ಆಗಿರುವುದು ತಿಳಿದು ಬಂದಿದೆ. ಬೇಹುಗಾರಿಕಾ ಇಲಾಖೆಯಿಂದ ಸ್ಯಾಟಲೈಟ್‌ ಫೋನ್‌ ಬಳಕೆ ಆಗಿರುವುದು ಪತ್ತೆಯಾಗಿದ್ದು, ಕಕ್ಕಿಂಜೆ ಎನ್ನುವ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್‌ ಫೋನ್‌ ರಿಂಗ್‌ ಆಗಿರುವ ಲೊಕೇಷನ್‌ ಪತ್ತೆಯಾಗಿದೆ. ಸ್ಯಾಟಲೈಟ್‌ ಫೋನ್‌ ಬಳಕೆ ಈಗಾಗಲೇ ನಿಷೇದವಾಗಿದ್ದು, ಶಾರೀಖ್‌ ಸ್ಫೋಟಕ್ಕೂ ಮುನ್ನ ನಿಷೇದಿತ ತುರಾಯು ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿರುವ ಶಂಕೆ ಅಧಿಕಾರಿಗಳಿಗೆ ವ್ಯಕ್ತವಾಗಿದೆ.

ಇದನ್ನೂ ಓದಿ : ನಮ್ಮ ಟಾರ್ಗೆಟ್ ಕದ್ರಿ ಎಂದ ಉಗ್ರರು : ಮಂಗಳೂರು ಬ್ಲಾಸ್ಟ್ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್

ಇದನ್ನೂ ಓದಿ : Coastal Bomb blast: ಕರಾವಳಿ ಸ್ಫೋಟದ ಮಾಸ್ಟರ್‌ ಮೈಂಡ್‌ ಅರಾಫತ್‌ : ಸಿಗ್ನಲ್‌ ಆಪ್‌ ಬಳಕೆ !

ಮಂಗಳೂರಿನ ಆರು ಕಡೆ ಸ್ಫೋಟ ನಡೆಸಲು ಪ್ಲ್ಯಾನ್‌.. ?
ಉಗ್ರ ಶಾರೀಖ್‌ ಜನ ಜಂಗುಳಿ ಇರುವ ಪ್ರದೇಶಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದು, ಮಂಗಳೂರಿನ ಹಿಂದೂ ದೇವಾಲಯಗಳನ್ನೂ ಉಡಾಯಿಸಲು ಸಂಚು ರೂಪಿಸಿದ್ದ. ಮಂಗಳೂರಿನ ಮೂರು ಪ್ರಸಿದ್ದ ದೇವಾಲಯ, ಎರಡು ಸಾರ್ವಜನಿಕ ಪ್ರದೇಶಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ. ಹಾಗಿದ್ದರೆ ಆತನ ಟಾರ್ಗೆಟ್‌ ಯಾವುವು ?
ಮೊದಲನೇ ಟಾರ್ಗೆಟ್‌ : ಪ್ರಸಿದ್ದ ಕದ್ರಿ ಮಂಜುನಾಥ ದೇವಾಲಯ. ಇಲ್ಲಿಗೆ ಪ್ರತಿ ದಿನ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ದಿನನಿತ್ಯ ಈ ದೇವಾಲಯ ಜನದಟ್ಟಣೆಯಿಂದ ತುಂಬಿರುತ್ತದೆ.
ಎರಡನೇ ಟಾರ್ಗೆಟ್‌ : ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಮಂಗಳೂರು. ಇದು ಕೂಡ ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಇಲ್ಲಿಗೂ ಕೂಡ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಧಾವಿಸಿ ಬರುತ್ತಾರೆ.
ಮೂರನೆಯದಾಗಿ ಮಂಗಳೂರಿನ ಮಂಗಳಾದೇವಿ ದೇವಾಲಯ. ಮಂಗಳೂರು ನಗರದ ಪ್ರಮುಖ ದೇವಾಲಯಗಳಲ್ಲಿ ಮಂಗಳಾದೇವಿ ದೇವಾಲಯವೂ ಕೂಡ ಒಂದಾಗಿದೆ. ಹಿಂದೂ ದೇವಾಲಯಗಳಲ್ಲಿ ಒಂದಾದ ಮಂಗಳಾದೇವಿ ದೇವಾಲಯಕ್ಕೆ ಅನೇಕ ಸಂಖ್ಯೆಯಲ್ಲಿ ಹಿಂದೂ ಭಕ್ತರು ಬರುತ್ತಾರೆ.
ಮಂಗಳೂರಿನ ಸಾರ್ವಜನಿಕ ಪ್ರದೇಶವಾದ ರೈಲ್ವೇ ನಿಲ್ದಾಣ ಮತ್ತು ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣ ವನ್ನೂ ಕೂಡ ಟಾರ್ಗೆಟ್‌ ಮಾಡಿದ್ದ. ಇಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಬಂದು ಹೋಗುತ್ತಿರುತ್ತಾರೆ. ದೇವಾಲಯಕ್ಕಿಂತಲೂ ಈ ಸಾರ್ವಜನಿಕ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚು. ಹಾಗಾಗಿ ಉಗ್ರ ಶಾರೀಖ್‌ ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ.
ಕೊನೆಯದಾಗಿ ಸಂಘನಿಕೇತನ ಪ್ರದೇಶವನ್ನು ಕೂಡ ಟಾರ್ಗೆಟ್‌ ಮಾಡಿಕೊಂಡಿದ್ದ ಎನ್ನಲಾಗಿದೆ. ಒಂದೇ ಒಂದು ಬಾಂಬ್‌ ಸ್ಫೋಟದಿಂದ ಇಡೀ ಕರಾವಳಿಯನ್ನೇ ರಕ್ತದೋಕುಳಿಯಲ್ಲಿ ಮಲಗಿಸುವ ಅತೀ ದೊಡ್ಡ ಹುನ್ನಾರವನ್ನು ಶಾರೀಖ್‌ ಹಾಕಿದ್ದ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ.

(Karavali bomb blast case) The car blast case in Mangalore has taken many turns. Now it is known that the terrorists used a satellite phone before the blast. Also, explosive information has come out that instead of Pump Well Allah, the target of terrorists is Hindu temples and public areas.

Comments are closed.