Neck Pain Reduce Tips:ಕಂಪ್ಯೂಟರ್‌ ಮುಂದೆ ಕುಳಿತು ಕುತ್ತಿಗೆ ನೋವು ಬರುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ

(Neck Pain Reduce Tips)ಕಂಪ್ಯೂಟರ್ ಮುಂದೆ ಒಂದೆ ಭಂಗಿಯಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ಕುತ್ತಿಗೆ ನೋವು ಬರುತ್ತದೆ.ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಎಲ್ಲರೂ ಕೂಡ ಕುತ್ತಿಗೆ ನೋವು, ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ . ಕುತ್ತಿಗೆ ನೋವಿನಿಂದ ಬಳಲುತ್ತಿದ್ದರೆ ಈ ಸಮಸ್ಯೆಯಿಂದ ಹೊರ ಬರಲು ಎನು ಮಾಡಬೇಕು ಎಂಬ ಮಾಹಿತಿಯ ಕುರಿತು ತಿಳಿದುಕೋಳ್ಳಿ.

(Neck Pain Reduce Tips)ಕುಳಿತ ಜಾಗದಲ್ಲೇ ವ್ಯಾಯಾಮ ಮಾಡಿ
ಕಂಪ್ಯೂಟರ್‌ ಮುಂದೆ ಕುಳಿತು ನಿಮ್ಮ ಕುತ್ತಿಗೆ ಹಿಡಿದುಕೊಂಡಿದ್ದರೆ ನಿಮ್ಮ ಚೇರ್‌ ನಲ್ಲಿ ಕುಳಿತು ಕುತ್ತಿಗೆಯನ್ನು ಎಡಕ್ಕೆ ಮತ್ತು ಬಲಕ್ಕೆ ಹತ್ತು ಬಾರಿ ತಿರುಗಿಸಿ. ಈ ವ್ಯಾಯಾಮವನ್ನು ಪ್ರತಿ ಮೂರು ಗಂಟೆಗಳಿಗೊಮ್ಮೆ ಮಾಡುವುದರಿಂದ ನಿಮ್ಮ ಕುತ್ತಿಗೆ ನೋವು ಕಡಿಮೆ ಆಗುತ್ತದೆ. ಆದಷ್ಟು ನಿಮ್ಮ ಚೇರ್‌ ಗೆ ಒರಗಿಕೊಂಡು ನೇರವಾಗಿ ಕುಳಿತು ಕೆಲಸ ಮಾಡಿ.

ವಿರಾಮವಿಲ್ಲದೆ ಕೆಲಸ ಬೇಡ
ಒಂದೆ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಅತಿ ಹೆಚ್ಚು ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೆಲಸದ ಮಧ್ಯೆ ಆಗಾಗ ಎದ್ದು ನಡೆಯಬೇಕು ಮತ್ತು ಲಂಚ್‌ ಬ್ರೇಕ್‌ ನಲ್ಲಿ ಲ್ಯಾಪ್‌ ಟಾಪ್‌ ಮುಂದೆ ಕುಳಿತು ಕೆಲಸವನ್ನು ಮಾಡುತ್ತಾ ಆಹಾರ ಸೇವನೆ ಮಾಡಬೇಡಿ.

ಯೋಗ ಮಾಡಿ
ಬೆಳಗ್ಗೆ ಎದ್ದು ಯೋಗ ಮಾಡುವ ಹವ್ಯಾಸ ರೂಡಿಸಿಕೊಳ್ಳಿ. ಯೋಗ ಮಾಡುವುದರಿಂದ ನಿಮ್ಮ ರಕ್ತ ಪರಿಚಲನೆ ಸುಧಾರಿಸುತ್ತದೆ. ಮತ್ತು ಕುತ್ತಿಗೆ ನೋವು ಕಡಿಮೆ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ಯೋಗ ಮಾಡುವ ಹವ್ಯಾಸ ರೂಡಿಸಿಕೊಂಡರೆ ಉತ್ತಮ.

ಆಫೀಸ್‌ ಲಿಪ್ಟ್‌ ಬದಲು ಮೆಟ್ಟಿಲು ಬಳಸಿ
ಆಫೀಸ್‌ ಗೆ ಹೋದಾಗ ಲೀಪ್ಟ್‌ ಬಳಸುವ ಬದಲು ಮೆಟ್ಟಿಲನ್ನು ಹತ್ತು ಹೋಗುವ ಹವ್ಯಾಸ ರೂಡಿಸಿಕೊಳ್ಳಿ ಎಕೆಂದರೆ ದಿನವಿಡಿ ಒಂದೆ ಭಂಗಿಯಲ್ಲಿ ಲ್ಯಾಪ್‌ ಟಾಪ್‌ ಮುಂದೆ ಕುಳಿತು ಕೆಲಸ ಮಾಡುವುದರಿಂದ ಕುತ್ತಿಗೆ ನೋವು ನಿಮ್ಮನ್ನು ಕಾಡುತ್ತಿರುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಮೆಟ್ಟಿಲುಗಳನ್ನು ಬಳಸುವುದು ಉತ್ತಮ.

ಲ್ಯಾಪ್‌ ಟಾಪ್‌ ತೊಡೆಯ ಮೇಲೆ ಇಟ್ಟು ಕೆಲಸ ಮಾಡಬೇಡಿ
ಮನೆಯಲ್ಲಿ ಕೆಲಸ ಮಾಡುವವರು ಲ್ಯಾಪ್‌ ಟಾಪ್‌ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುತ್ತಾರೆ . ಆದಷ್ಟು ತೊಡೆಯ ಮೇಲೆ ಲ್ಯಾಪ್‌ ಟಾಪ್‌ ಇಟ್ಟು ಕೆಲಸ ಮಾಡುವುದನ್ನು ಕಡಿಮೆ ಮಾಡಿದರೆ ನಿಮ್ಮ ಕುತ್ತಿಗೆ ನೋವು ಕಡಿಮೆ ಆಗುತ್ತದೆ. ಸಣ್ಣ ಟೇಬಲ್‌ ಇರಿಸಿ ಅದರ ಮೇಲೆ ಲ್ಯಾಪ್‌ ಟಾಪ್‌ ಇಟ್ಟು ಕೆಲಸ ಮಾಡಿ.

ಇದನ್ನೂ ಓದಿ:Actresses Diet Information:ಪಿಟ್‌ ಆಗಿರಲು ನಟಿಯರು ಯಾವೆಲ್ಲಾ ಆಹಾರ ಸೇವನೆ ಮಾಡುತ್ತಾರೆ ಗೊತ್ತಾ?

ಇದನ್ನೂ ಓದಿ:Purify Your Blood Naturally:ನಿಮ್ಮ ದೇಹದ ರಕ್ತ ಶುದ್ಧಿಗಾಗಿ ಬಳಸಿ ಈ ಕೆಳಗಿನ ಆಹಾರ

ಹೀಟಿಂಗ್‌ ಪ್ಯಾಡ್‌ ಬಳಕೆ ಮಾಡಿ
ಕುತ್ತಿಗೆ ನೋವು ಕಾಣಿಸಿಕೊಂಡಾಗ ಹೀಟಿಂಗ್‌ ಪ್ಯಾಡ್‌ ಕುತ್ತಿಗೆಯ ಮೇಲೆ ಇಟ್ಟು ಕೊಳ್ಳುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದುವೇಳೆ ತೀವ್ರವಾದ ಕುತ್ತಿಗೆ ನೋವಿದ್ದರೆ ನಿರ್ಲಕ್ಷ್ಯ ಬೇಡ ವೈದ್ಯರನ್ನು ಬೇಟಿ ಆಗುವುದು ಉತ್ತಮ.

Neck Pain Reduce Tips Neck pain from sitting in front of the computer? Follow these tips

Comments are closed.