Rice Water: ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕೇ ? ರಾತ್ರಿ ಮಲಗುವ ಮುನ್ನ ಅಕ್ಕಿನೀರಿನಿಂದ ತಯಾರಿಸಿದ ಕ್ರೀಮ್‌ ಹಚ್ಚಿಕೊಳ್ಳಿ

(Rice Water)ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅಡುಗೆಮನೆಯಲ್ಲಿ ಬಳಸುವಂತಹ ಪ್ರತಿಯೊಂದು ಪದಾರ್ಥವು ಉಪಯೋಗಕ್ಕೆ ಬರುತ್ತದೆ. ಅಕ್ಕಿ ತೊಳೆದ ನೀರು ತ್ವಚೆಯನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ಮುಖದ ಸೌಂದರ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾತ್ರಿ ಮಲಗುವ ಮುನ್ನ ಅಕ್ಕಿನೀರಿನಿಂದ ತಯಾರಿಸಿದ ಕ್ರೀಮ್‌ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Rice Water : ಬೇಕಾಗುವ ಸಾಮಗ್ರಿಗಳು :

ಅಕ್ಕಿನೀರು
ಅಲವೇರಾ ಜೆಲ್
ವಿಟಮಿನ್ ಇ ಕ್ಯಾಪ್ಸೂಲ್

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಒಂದು ಚಮಚ ಅಲವೇರಾ ಜೆಲ್, ಮೂರು ಚಮಚ ಅಕ್ಕಿ ನೀರು, ಎರಡು ವಿಟಮಿನ್ ಇ ಕ್ಯಾಪ್ಸೂಲ್ ಹಾಕಿಕೊಂಡು ದಪ್ಪ ಹದ ಬರುವ ವರೆಗೂ ಕಲಸಿಕೊಳ್ಳಬೇಕು. ನಂತರ ಅದನ್ನು ಒಂದು ಸಣ್ಣ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಡಬ್ಬಿಯನ್ನು ಪ್ರಿಡ್ಜನಲ್ಲಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ:Homemade Moisturizer Cream:ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್ ಕ್ರೀಮ್ : ಇಲ್ಲಿದೆ ಟಿಪ್ಸ್

ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು
ಜೇಷ್ಠಮಧು ಪೌಡರ್
ಹಾಲು ಅಥವಾ ರೊಸ್ ವಾಟರ್

ಇದನ್ನೂ ಓದಿ:Rice Beauty tips :ಉಳಿದ ಅನ್ನ ಎಸೆಯುವ ಮುನ್ನ ಈ ಸ್ಟೋರಿ ಓದಿ

ಮಾಡುವ ವಿಧಾನ: Guava Leaf : ಸೀಬೆ ಗಿಡದ ಚಿಗುರೆಲೆ ಮಧುಮೇಹಕ್ಕೆ ಅದ್ಭುತ ಔಷಧಿ

ಒಂದು ಬೌಲ್ ನಲ್ಲಿ ಒಂದು ಚಮಚ ಗೋಧಿ ಹಿಟ್ಟು, ಒಂದು ಚಮಚ ಜೇಷ್ಠಮಧು ಪೌಡರ್ , ಎರಡು ಚಮಚ ಹಾಲನ್ನು ಹಾಕಿಕೊಂಡು ಫೇಸ್ ಪ್ಯಾಕ್ ತಯಾರಿಸಿಕೊಳ್ಳಬೇಕು. ನಂತರ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿ ಕೊಂಡು ಒಣಗುತ್ತಿದ್ದ ಹಾಗೆ ಮುಖವನ್ನು ತೊಳೆಯಬೇಕು. ಮುಖ ತೊಳೆದ ನಂತರ ಫೇಸ್ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ತಿಂಗಳಿಗೆ ಮೂರು ಬಾರಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ :

Need to increase the radiance of the face? Apply a cream made from rice water

Comments are closed.