Uniform color for schools: ಶಾಲೆಗಳಿಗೆ ಏಕರೂಪದ ಬಣ್ಣ :8,100 ಶಾಲಾ- ಕಾಲೇಜು ಕೊಠಡಿಗೆ ವಿವೇಕಾನಂದರ ಹೆಸರಿಡಲು ಶಿಕ್ಷಣ ಇಲಾಖೆ ಚಿಂತನೆ

ಬೆಂಗಳೂರು: (Uniform color for schools) ರಾಜ್ಯಾದ್ಯಂತ ಶಾಲೆಗಳಿಗೆ ಏಕರೂಪದ ಬಣ್ಣ ಬಳಿಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಲ್ಲದೇ ಸರಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ 8,100 ಕೊಠಡಿಗೆ ವಿವೇಕಾನಂದರ ಹೆಸರಿಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ವಿವೇಕಾನಂದ ಪರಿಕಲ್ಪನೆಯ ಬಣ್ಣ ಬಳಸಲು ಸರ್ಕಾರ ಚಿಂತನೆಯನ್ನು ನಡೆಸಿದೆ.

ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು(Uniform color for schools) ಕೊಠಡಿಗೆ ಸ್ವಾಮಿ ವಿವೇಕಾನಂದ ಅವರು ಹೆಸರು ಇಡಲು ನಿರ್ಧಾರ ಮಾಡಲಾಗಿದ್ದು, ವಿವೇಕಾನಂದರ ಪರಿಕಲ್ಪನೆಯ ಬಣ್ಣ ಬಳಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಏಕರೂಪದ ವಿವೇಕಾನಂದ ಪರಿಕಲ್ಪನೆಯ ಬಣ್ಣ ಮಾಡಲು ಮುಂದಾಗಿದ್ದು,ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ ಹೆಸರಿಡಲು ಇಲಾಖೆ ಮುಂದಾಗಿದೆ. 992 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜು‌ ಕೊಠಡಿಗಳ ನಿರ್ಮಾಣ ಕಾರ್ಯ ಕೂಡ ಆರಂಭವಾಗಿದೆ.

ರಾಜ್ಯದ 8,100 ಶಾಲಾ- ಕಾಲೇಜು ಕೊಠಡಿಗಳಿಗೆ ಏಕರೂಪದ ಬಣ್ಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿವೇಕಾನಂದರ ಪರಿಕಲ್ಪನೆಗೆ ಪೂರಕವಾದ ಏಕರೂಪದ ಬಣ್ಣ, ವಿವೇಕಾನಂದರ ಭಾವಚಿತ್ರ, ಅವರ ತತ್ವಗಳು, ಸಂದೇಶಗಳನ್ನು ಕೊಠಡಿಗಳ ಗೋಡೆಯ ಮೇಲೆ ಬರೆಸಲು ಚಿಂತನೆಗಳನ್ನು ನಡೆಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಮತ್ತೊಂದು ಸುತ್ತಿನ ಕೇಸರಿ ವಾಗ್ವಾದ ಶುರುವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Yellow alert on the coast: ಕರಾವಳಿಯಲ್ಲಿ ನಾಳೆ ಭಾರೀ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ಇದನ್ನೂ ಓದಿ : Crime News: ಪತಿಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಂದ ಪತ್ನಿ ಮತ್ತು ಪ್ರಿಯಕರ

ಬಿಜೆಪಿ ಸರ್ಕಾರದ ಕೇಸರೀಕರಣ ವಿರುದ್ಧ ಪ್ರತಿಪಕ್ಷಗಳ ಅಪಸ್ವರ ಕೇಳಿ ಬರುವ ಸಾಧ್ಯತೆಯಿದ್ದು, ಪಠ್ಯ ಪರಿಷ್ಕರಣದ ವೇಳೆ ಬಲ ಪಕ್ಷಗಳ ವಿಚಾರ ಸೇರಿಸಲಾಗಿತ್ತು ಎಂಬ ಆರೋಪವಿದೆ. ಮತ್ತೊಮ್ಮೆ ಪಠ್ಯ ಮರು ಪರಿಸ್ಕರಿಸಲಾಗಿದ್ದು, ಭಗತ್ ಸಿಂಗ್ ಗದ್ಯ ಕೈಬಿಟ್ಟು ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಡಗೇವಾರ್ ಅವರ ಭಾಷಣ ಸೇರಿಸಿದ್ದಾರೆಂಬ ಅಂಶವು ಹಲವು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಶಾಲಾ ಕೊಠಡಿಯ ಹೆಸರಲ್ಲಿ ವಾಗ್ವಾದ ಮಾಡಲಾಗುತ್ತಿದ್ದು, ಆದರ್ಶಕ್ಕಾಗಿ ವಿವೇಕಾನಂದರ ಹೆಸರಿನ್ನಿಡಲು ಶಿಕ್ಷಣ ಇಲಾಖೆ‌ ಚಿಂತನೆ ನಡೆಸಿದೆ. ಮಕ್ಕಳನ್ನು ಆದರ್ಶದ ಕಡೆಗೆ ಆರ್ಕಷಿಸುವ ಸಲುವಾಗಿ ಶಿಕ್ಷಣ ಇಲಾಖೆ ಚಿಂತನೆ ಮಾಡಿಕೊಂಡಿದ್ದು, ಇದರಲ್ಲೂ ರಾಜಕಾರಣೀಗಳು ರಾಜಕೀಯ ನಡೆಸುತ್ತಿದ್ದಾರೆ.

ಇದನ್ನೂ ಓದಿ : Diabetes in dogs : ನಾಯಿಗಳಿಗೆ ಡಯಾಬಿಟಿಸ್ ಕಾಟ : ಮುನ್ನೆಚ್ಚರಿಕೆಗಳೇನು ? ಚಿಕಿತ್ಸೆ ಏನು ? ಇಲ್ಲಿದೆ ಡಿಟೇಲ್ಸ್

“ಇದ್ರಲ್ಲೂ ರಾಜಕೀಯ ಬೇಡಾ..! ಮಕ್ಕಳಿಗೆ ಶಿಕ್ಷಣ ಮುಖ್ಯ. ಬಣ್ಣಗಳಲ್ಲಿ ಬೇಧಬಾವ ಮಾಡದೆ ಕಲಿಯಲು‌ ಬಿಡಿ, ಪಠ್ಯಪುಸ್ತಕ, ಶಿಕ್ಷಣ ವಿಚಾರದಲ್ಲಿ ರಾಜಕೀಯ ನಿಲ್ಲಿಸಿ, ಗುಣಮಟ್ಟದ ಶಿಕ್ಷಣದ ಅಭಿವೃದ್ಧಿಗೆ ಕೈಜೋಡಿಸಿ ಮಕ್ಕಳ ಶಿಕ್ಷಣದಲ್ಲಿ ರಾಜಕೀಯವನ್ನು ನಿಲ್ಲಿಸಿ.” ಎಂದು ಶಿಕ್ಷಣ ಇಲಾಖೆ ತಿಳಿಸಿದೆ

(Uniform color for schools) The education department has decided to paint uniform colors for schools across the state. Also, the Department of School Education and Literacy has decided to name Vivekananda’s name for 8,100 newly constructed rooms in government schools and colleges. The government has thought of using Vivekananda concept color.

Comments are closed.