Peanut Health Benefits : ಚಳಿಗಾಲದಲ್ಲಿ ಶೇಂಗಾ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

ಚಳಿಗಾಲ (Winter) ಪ್ರಾರಂಭವಾಗುತ್ತಿದೆ. ದೇಹಕ್ಕೆ ಹೆಚ್ಚಿನ ಶಕ್ತಿಯ (Energy) ಅವಶ್ಯಕತೆ ಇದೆ. ಒಣ ಹವೆಯಿಂದ ರಕ್ಷಿಸಿಕೊಳ್ಳಲು ಉತ್ತಮ ಕೊಬ್ಬಿನ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಒಡೆದ ತುಟಿ, ಒಣಗಿದ ಚರ್ಮ ಇವುಗಳಿಗೆ ಆರೋಗ್ಯಕರ ಕೊಬ್ಬಿನಾಂಶವನ್ನು ಒದಗಿಸಬೇಕಾಗಿದೆ. ಉತ್ತಮ ಕೊಬ್ಬಿನಾಂಶ ಹೊಂದಿರುವ ಆಹಾರಗಳಲ್ಲಿ ಶೇಂಗಾವೂ (Peanut) ಒಂದು. ಇದನ್ನೂ ಕಡಲೆಕಾಯಿ ಎಂದೂ ಕರೆಯುತ್ತಾರೆ. ನಮಗೆಲ್ಲರಿಗೂ ತಿಳಿದಿರುವಂತೆ ಶೇಂಗಾ ಎಣ್ಣೆ ಹೆಚ್ಚಿನ ಜಿಡ್ಡಿನ ಅಂಶವನ್ನು ಹೊಂದಿದೆ. ಶೇಂಗಾ ಚಳಿಗಾಲದ ಸಮಸ್ಯೆಗಳಿಗೆ ಉತ್ತಮ ಪರಿಹಾರ ಒದಗಿಸಬಲ್ಲದು (Peanut Health Benefits).

ದ್ವಿದಳ ಧಾನ್ಯವಾದ ಶೇಂಗಾವು ವಿಶಿಷ್ಟ ರುಚಿಯನ್ನು ಹೊಂದಿದೆ. ಹುರಿದ ಶೇಂಗಾ, ಬೇಯಿಸಿದ ಶೇಂಗಾ ಹೀಗೆ ಹಲವಾರು, ರೀತಿಯಲ್ಲಿ ಇದನ್ನು ಉಪಯೋಗಿಸುತ್ತಾರೆ. ಶೇಂಗಾದಿಂದ ಚಟ್ನಿ, ಚಿತ್ರಾನ್ನ, ಚಟ್ನಿಪುಡಿ, ಹೋಳಿಗೆ, ಸ್ನ್ಯಾಕ್ಸ್‌, ಪೀನಟ್‌ ಬಟರ್‌, ಚಿಕ್ಕಿ ಮುಂತಾದವುಗಳನ್ನು ಮಾಡುತ್ತಾರೆ. ಶೇಂಗಾವು ನಮ್ಮ ಹಸಿವನ್ನು ಪೂರೈಸುತ್ತದೆ. ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಉತ್ತಮ ಕೊಬ್ಬಿನ ಅದ್ಭುತ ಮೂಲವಾಗಿದೆ. ಇದು ಅನೇಕ ಖನಿಜಗಳು, ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿವೆ. ಶೇಂಗಾವು ಹೃದಯದ ಆರೋಗ್ಯಕ್ಕೆ, ಕಾಂತಿಯುತ ಚರ್ಮ, ಕೂದಲಿಗೆ ಹೊಳುಪು, ದೇಹಕ್ಕೆ ಶಕ್ತಿ ಮತ್ತು ಪ್ರೋಟೀನ್‌ನಂತಹ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಪ್ರತಿನಿತ್ಯ ಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಯೂ ಸಾಧ್ಯ ಎನ್ನುತ್ತಾರೆ.

ಇದನ್ನೂ ಓದಿ : Evening Snacks : ಸಂಜೆಯ ಟೀ ಟೈಮ್‌ಗೆ ಇದು ಬೆಸ್ಟ್‌ : ಶೇಂಗಾದಿಂದ ಮಾಡಿ ಈ ರೀತಿಯ ಸ್ನಾಕ್ಸ್‌

ಚಳಿಗಾಲದಲ್ಲಿ ಶೇಂಗಾ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು :

  • ಶೇಂಗಾದಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಇದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಶೇಂಗಾದಲ್ಲಿ ಕಂಡುಬರುವ ಮೊನೊ-ಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಆಂಟಿಒಕ್ಸಿಡೆಂಟ್‌ಗಳು ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತದೆ.
  • ದೈನಂದಿನ ಆಹಾರದಲ್ಲಿ ಶೇಂಗಾ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ. ಇದು ಮೆದುಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ.
  • ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಆರೋಗ್ಯಕರ ಪ್ರೋಟೀನ್‌ ಅನ್ನು ಇದು ಪೂರೈಸುತ್ತದೆ.
  • ವೃದ್ಧಾಪ್ಯದಲ್ಲಿ ಮೂಳೆಗಳ ಬಲವನ್ನು ಹೆಚ್ಚಿಸಲು ಮತ್ತು ಕಾಪಾಡಿಕೊಳ್ಳಲು ಶೇಂಗಾ ಸಹಾಯ ಮಾಡುತ್ತದೆ.
  • ಶೇಂಗಾವು ಎಲ್ಲಾ ಮಧುಮೇಹಿಗಳಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಏಕೆಂದರೆ ಇದು ಸಕ್ಕರೆಯನ್ನು ಹೊಂದಿರುವುದಿಲ್ಲ.
  • ಪೌಷ್ಟಿಕವಾದ ಶೇಂಗಾವು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳ ಸಂಯೋಜನೆಯಿಂದಾಗಿ ಹೆಚ್ಚು ಸಮಯದವರೆಗೆ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಚಿಪ್ಸ್ ಮತ್ತು ಇತರ ಸರಳ ಕಾರ್ಬೋಹೈಡ್ರೇಟ್ ವಸ್ತುಗಳಿಗೆ ಹೋಲಿಸಿದರೆ, ಶೇಂಗಾವು ಆರೋಗ್ಯಕರ ತಿಂಡಿಯಾಗಿದೆ.

ಇದನ್ನೂ ಓದಿ : Healthy Stomach : ಔಷಧಗಳ ಬಳಕೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದದ್ದು ಏನು ಗೊತ್ತಾ…

(Peanut Health Benefits, eat this winter for good health)

Comments are closed.