Remedies For Boils:ಈ ಮನೆಮದ್ದು ಬಳಸಿ ನೋಡಿ ಕುರು, ನೋವು ತಕ್ಷಣ ಕಡಿಮೆಯಾಗುತ್ತದೆ

(Remedies For Boils)ದೇಹದ ಉಷ್ಣತೆ ಹೆಚ್ಚಾದಾಗ ಕುರು ಆಗುತ್ತದೆ , ಈ ಕುರು ವೀಪರಿತ ನೋವನ್ನುಂಟುಮಾಡುತ್ತದೆ. ಕಾಲಲ್ಲಿ ಈ ಕುರು ಆದರೆ ನಡೆಯಲಾರದಷ್ಟು ನೋವು ಆಗುತ್ತದೆ. ಈ ಕುರು ವಾಸಿ ಮಾಡಲು ಸುಲಭ ಪರಿಹಾರದ ಮಾಹಿತಿ ಇಲ್ಲಿದೆ. ಕುರು ಪರಿಹಾರ ಮಾಡಿಕೊಳ್ಳಲು ಮನೆಮದ್ದಿನ ಮಾಹಿತಿ ಕುರಿತು ತಿಳಿದುಕೊಳ್ಳೋಣ.

(Remedies For Boils)ಆಲೂಗಡ್ಡೆ
ಆಲೂಗಡ್ಡೆ ಅರ್ಧ ಭಾಗವನ್ನು ತುರಿದುಕೊಂಡು ರಸವನ್ನು ಬೌಲ್ ನಲ್ಲಿ ಹಿಂಡಿಕೊಳ್ಳಬೇಕು. ಆಲೂಗಡ್ಡೆ ರಸವನ್ನು ಕುರು ಆಗಿರುವ ಜಾಗಕ್ಕೆ ದಿನದಲ್ಲಿ ನಾಲ್ಕು ಬಾರಿ ಹಚ್ಚಿಕೊಳ್ಳುವುದರಿಂದ ಬೇಗ ಕುರು ಕಡಿಮೆ ಆಗುತ್ತದೆ. ಕುರು ಆದ ಪ್ರಾರಂಭದಿಂದ ಹಚ್ಚುತ್ತಾ ಬಂದರೆ ಇನ್ನು ಉತ್ತಮ.

ನಾಚಿಕೆ ಮುಳ್ಳು

ಕುಟ್ಟಣಿಗೆಯಲ್ಲಿ ನಾಚಿಕೆ ಮುಳ್ಳನ್ನು ಜಜ್ಜಿಕೊಂಡು ಬೌಲ್‌ ಗೆ ಹಾಕಬೇಕು ಅದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಬೇಕು. ಈ ಪೇಸ್ಟ್‌ ಅನ್ನು ಕುರು ಆಗಿರುವ ಜಾಗಕ್ಕೆ ಹಚ್ಚಿಕೊಂಡು ಹತ್ತಿ ಇಟ್ಟು ಬ್ಯಾಂಡೆಜ್‌ ಕಟ್ಟಿ ನಾಲ್ಕು ಗಂಟೆಯವರೆಗೆ ಬಿಡಬೇಕು. ಹೀಗೆ ಕುರು ಆದಾಗ ಪ್ರತಿದಿನ ಮಾಡುವುದರಿಂದ ಕುರು ಕಡಿಮೆ ಆಗುವುದರ ಜೊತೆಗೆ ನೋವು ಕಡಿಮೆ ಆಗುತ್ತದೆ.

ಈರುಳ್ಳಿ, ತುಪ್ಪ, ಅರಿಶಿಣ ಮಿಶ್ರಣ

ಮೊದಲಿಗೆ ಈರುಳಿಯನ್ನು ಗ್ಯಾಸ್‌ ಮೇಲೆ ಇಟ್ಟು ಸುಟ್ಟುಕೊಂಡು ಸಿಪ್ಪೆ ತೆಗೆದುಕೊಂಡು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಈರುಳ್ಳಿಯನ್ನು ಬೌಲ್‌ ಗೆ ಹಾಕಿಕೊಂಡು ತುಪ್ಪ, ಅರಿಶಿಣ ಹಾಕಿ ಮಿಶ್ರಣ ಮಾಡಿ ಪೇಸ್ಟ್‌ ಮಾಡಿಕೊಳ್ಳಬೇಕು . ತದನಂತರ ವಿಳ್ಯದೆಲೆಗೆ ಹರಳೆಣ್ಣೆ ಹಚ್ಚಿ ಬಿಸಿ ಮಾಡಿಕೊಂಡು ತಯಾರಿಸಿಕೊಂಡ ಪೇಸ್ಟ್‌ ಹಚ್ಚಬೇಕು ಇದನ್ನು ಕುರು ಇರುವ ಜಾಗಕ್ಕೆ ಇಟ್ಟುಕೊಂಡು ಬಟ್ಟೆಯನ್ನು ಕಟ್ಟಿಕೊಳ್ಳಬೇಕು. ಸತತವಾಗಿ ಮೂರು ದಿನ ಈ ಮನೆಮದ್ದು ಮಾಡಿಕೊಳ್ಳುವುದರಿಂದ ತಟ್ಟನೆ ಕುರು ಮಾಯವಾಗುವುದರ ಜೊತೆಗೆ ನೋವು ಕಡಿಮೆ ಆಗುತ್ತದೆ.

ಇದನ್ನೂ ಓದಿ:Rose Petals Face pack:ಮುಖ ಅಂದವಾಗಿಸಲು ಇಲ್ಲಿದೆ ಗುಲಾಬಿ ಎಸಳಿನ ಫೇಸ್‌ ಪ್ಯಾಕ್‌

ಇದನ್ನೂ ಓದಿ:Pomegranate Peel Tambuli:ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿ ನೋಡಿ ರುಚಿ ರುಚಿ ತಂಬುಳಿ

ಬೇವಿನ ಎಲೆ ರಸ ಮತ್ತು ಅರಿಶಿಣ ಮಿಶ್ರಣ

ಬೌಲ್ ನಲ್ಲಿ ಬೇವಿನ ಎಲೆ ರಸ ಮತ್ತು ಅರಿಶಿಣ ಹಾಕಿ ಮಿಶ್ರಣ ಮಾಡಿಕೊಂಡು ಪೇಸ್ಟ್‌ ಮಾಡಿಕೊಳ್ಳಬೇಕು . ಈ ಪೇಸ್ಟ್‌ ಅನ್ನು ಕುರು ಜಾಗಕ್ಕೆ ಲೇಪನ ಮಾಡಿಕೊಂಡರೆ ಕುರು ಕಡಿಮೆಯಾಗುತ್ತದೆ.

ಬಾಳೆ ದಿಂಡಿನ ಪಲ್ಯವನ್ನು ತಿನ್ನುವುದರಿಂದ ಕುರ ಶಮನವಾಗುತ್ತದೆ. ಉದ್ದಿನ ಬೇಳೆಯನ್ನು ನೀರಲ್ಲಿ ನೆನಸಿ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ಇದನ್ನು ಕುರದ ಸುತ್ತ ಲೇಪನ ಮಾಡುವುದರಿಂದ ಎರಡು ದಿನದಲ್ಲಿ ಕುರು ಕಡಿಮೆ ಆಗುತ್ತದೆ.

Remedies For Boils Try using this home remedy, the boil pain will be reduced immediately

Comments are closed.