Rose Petals Face pack:ಮುಖ ಅಂದವಾಗಿಸಲು ಇಲ್ಲಿದೆ ಗುಲಾಬಿ ಎಸಳಿನ ಫೇಸ್‌ ಪ್ಯಾಕ್‌

(Rose Petals Face pack)ಹೂವುಗಳ ರಾಣಿ ಎಂದು ಕರೆಸಿಕೊಳ್ಳುವ ಗುಲಾಬಿ ಹೂವನ್ನು ಇಷ್ಟ ಪಡದವರು ಇಲ್ಲ , ಇದರಿಂದ ಸೌಂದರ್ಯದ ಹಲವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಪ್ರಾಚೀನ ಕಾಲದಿಂದಲು ಕೂಡ ಗುಲಾಬಿಯನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿದೆ. ಗುಲಾಬಿ ದಳಗಳಿಂದ ತಯಾರಿಸಿದ ರೋಸ್‌ ವಾಟರ್‌, ತೈಲವನ್ನು ಜನರು ಅತಿಹೆಚ್ಚಾಗಿ ಬಳಸುತ್ತಾರೆ. ಗುಲಾಬಿ ಹೂವಿನ ಫೇಸ್‌ ಪ್ಯಾಕ್‌ ಮಾಡಿಕೊಂಡು ಹಚ್ಚುವುದರಿಂದ ಮುಖದ ಸೌಂದರ್ಯ ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಈ ಫೇಸ್‌ ಪ್ಯಾಕ್‌ ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Rose Petals Face pack)ಬೇಕಾಗುವ ಸಾಮಾಗ್ರಿಗಳು:
ಗುಲಾಬಿ ಹೂವು
ಕಡ್ಲೆಹಿಟ್ಟು
ಅರಿಶಿಣ
ಜೇನುತುಪ್ಪ
ಮೊಸರು

ಮಾಡುವವಿಧಾನ
ನಾಲ್ಕು ಗುಲಾಬಿ ಹೂವಿನ ಎಸಳನ್ನು ಬಿಡಿಸಿಕೊಂಡು ಬೆಚ್ಚಗಿನ ನೀರಲ್ಲಿ ತೊಳೆದು ಮಿಕ್ಸಿ ಜಾರಿಯಲ್ಲಿ ಹಾಕಿ ಎರಡು ಚಮಚ ನೀರು ಬೇರೆಸಿಕೊಂಡು ಪೇಸ್ಟ್‌ ಮಾಡಿಕೊಳ್ಳಬೇಕು. ಬೌಲ್ ನಲ್ಲಿ ರಸವನ್ನು ಸೊಸಿಕೊಂಡು ಅದಕ್ಕೆ ಕಡ್ಲೆಹಿಟ್ಟು,ಅರಿಶಿಣ,ಜೇನುತುಪ್ಪ,ಮೊಸರು ಹಾಕಿ ಮಿಶ್ರಣ ಮಾಡಿ ಪೇಸ್‌ ಪ್ಯಾಕ್‌ ಮಾಡಿಕೊಳ್ಳಬೇಕು. ಈ ಪೇಸ್‌ ಪ್ಯಾಕ್‌ ಹೇಗೆ ಹಚ್ಚಿಕೊಳ್ಳುವುದು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಮೊದಲಿಗೆ ಮುಖವನ್ನು ತಣ್ಣಿರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಶುಭ್ರವಾದ ಬಟ್ಟೆಯಲ್ಲಿ ಮುಖವನ್ನು ಒರೆಸಿಕೊಂಡು ಈ ಪೇಸ್‌ ಪ್ಯಾಕ್‌ ಮುಖಕ್ಕೆ ಹಚ್ಚಬೇಕು. ಈ ಪೇಸ್‌ ಪ್ಯಾಕ್‌ ಒಣಗಿದ ನಂತರ ಎರಡು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಲ್ಲಿ ಮುಖವನ್ನು ತೊಳೆಯಬೇಕು. ಈ ಪೇಸ್‌ ಪ್ಯಾಕ್‌ ಅನ್ನು ತಿಂಗಳಿಗೆ ಎರಡು ಬಾರಿ ಹಚ್ಚುವುದರಿಂದ ಮುಖದ ಪಿಂಪಲ್‌ ಕಡಿಮೆ ಆಗುವಂತೆ ಮಾಡುತ್ತದೆ.

ಇದನ್ನೂ ಓದಿ:Hair Fall Problem Tips : ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಚಿಂತೆ ಬೇಡ ಈ ಟಿಪ್ಸ್‌ ಅನುಸರಿಸಿ

ಇದನ್ನೂ ಓದಿ:Curry Leaves: ರುಚಿಗೆ ಅಷ್ಟೇ ಅಲ್ಲ ಅರೋಗ್ಯಕ್ಕೂ ಉತ್ತಮ ಕರಿಬೇವಿನ ಎಲೆಗಳು

ಗುಲಾಬಿ ಹೂವು
ಗುಲಾಬಿ ಹೂವಿನ ದಳಗಳನ್ನು ಹಾಗೆ ಜಗಿದು ತಿನ್ನುವುದರಿಂದ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುತ್ತದೆ. ಕುದಿಯುವ ನೀರಿಗೆ ಗುಲಾಬಿ ದಳಗಳನ್ನು ಹಾಕಿಕೊಂಡು ಕುದಿಸಿಕೊಳ್ಳಬೇಕು. ನಂತರ ಜೇನುತುಪ್ಪ,ದಾಲ್ಚಿನಿ ಪುಡಿಯನ್ನು ಬೇರೆಸಿಕೊಂಡು ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಕುಡಿದರೆ ಬೊಜ್ಜು ಕರಗಿಸುತ್ತದೆ ಮತ್ತು ದೇಹದ ಆಯಾಸ ,ಒತ್ತಡ, ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಗುಲಾಬಿ ದಳದ ಪೌಡರ್‌ ಅನ್ನು ಬಾಡಿ ಸ್ಕ್ರಬ್‌ ಆಗಿ ಬಳಸುವುದರಿಂದ ದೇಹದ ಚರ್ಮವನ್ನು ಸುಂದರಗೊಳಿಸುತ್ತದೆ. ಅರ್ಧ‌ ಕಪ್ ಗುಲಾಬಿ ದಳದ ಪುಡಿ, ಅರ್ಧ ಕಪ್‌ ಬ್ರೌನ್‌ ಶುಗರ್‌ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಸ್ಕ್ರಬ್‌ ತಯಾರಿಸಿಕೊಳ್ಳಬೇಕು. ಸ್ನಾನಕ್ಕೆ ಹೋಗುವ ಮುನ್ನ ಈ ಸ್ಕ್ರಬ್‌ ಬಳಸಬೇಕು. ಪ್ರತಿದಿನ ಈ ಸ್ಕ್ರಬ್‌ ಬಳಸುವುದರಿಂದ ದೇಹದಲ್ಲಿನ ಸತ್ತ ಜೀವಕೋಶಗಳು, ಕೊಳೆ, ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Rose Petals Face pack Here is a Rose Petals pack to beautify your face

Comments are closed.