Metro ticket booking: ಇನ್ಮುಂದೆ ಪೇಟಿಎಂ, ಯಾತ್ರಾ ಆಪ್ ಗಳಲ್ಲೂ ಮೆಟ್ರೋ ಟಿಕೆಟ್ ಲಭ್ಯ; ಬಳಸುವ ವಿಧಾನ ಹೇಗೆ..?

ಬೆಂಗಳೂರು: Metro ticket booking: ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಪ್ರಯಾಣ ಮಾಡುವವರೇ ಜಾಸ್ತಿ. ರಸ್ತೆ ಟ್ರಾಫಿಕ್ ನಿಂದ ಮುಕ್ತಿ ಪಡೆಯುವ ಸಲುವಾಗಿ ಎಲ್ಲರೂ ಮೆಟ್ರೋವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಬೆಳಗ್ಗಿನ ಜಾವ ತುಂಬಾ ಅವಸರದಲ್ಲಿದ್ದಾಗ ಟಿಕೆಟ್ ಕ್ಯೂನಲ್ಲಿ ನಿಲ್ಲೋಕೆ ಟೈಂ ಇಲ್ಲ ಅನ್ನೋರಿಗೆ BMRCL ಆಪ್ ಗಳ ಮೂಲಕ ಟಿಕೆಟ್ ಬುಕ್ಕಿಂಗ್ ಸೇವೆಗಳನ್ನು ಒದಗಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೆಟ್ರೋ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಪೇಟಿಎಂ ಹಾಗೂ ಯಾತ್ರಾ ಅಪ್ಲಿಕೇಶನ್ ಗಳಲ್ಲೂ ಟಿಕೆಟ್ ಗಳನ್ನು ಖರೀದಿಸುವ ಅವಕಾಶವನ್ನು ಬಿಎಂಆರ್‍ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮೊಬೈಲ್ ಕ್ಯೂ ಆರ್ ಕೋಡ್ ಟಿಕೆಟಿಂಗ್ ಅನ್ನು ಒದಗಿಸುವುದರ ಜೊತೆಗೆ ಇಂದಿನಿಂದಲೇ ಈ ನಿಯಮವನ್ನು ಜಾರಿಗೆ ತಂದಿದೆ. ಹೀಗಾಗಿ ಇಂದಿನಿಂದಲೇ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Aniruddha Jatkar : ಮತ್ತೆ ಕಿರುತೆರೆಗೆ ಕಾಲಿಟ್ಟ ಅನಿರುದ್ಧ : “ಸೂರ್ಯವಂಶ” ಧಾರಾವಾಹಿಗೆ ಹೀರೋ

ಕ್ಯೂ ಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನ.1ರಿಂದ ಪರಿಚಯಿಸಿದ್ದ BMRCL ಅದನ್ನು ನಮ್ಮ ಮೆಟ್ರೋ ಮೊಬೈಲ್ ಆಪ್ ನಲ್ಲಿ ಮಾತ್ರ ಖರೀದಿಸಲು ಅವಕಾಶ ನೀಡಿತ್ತು. ಇದೀಗ ಪೇಟಿಎಂ (Paytm) ಹಾಗೂ ಯಾತ್ರಾ(Yaatra) ಆಪ್ ಗೂ ಈ ಸೌಲಭ್ಯವನ್ನು ವಿಸ್ತರಿಸಿದೆ.

ಪೇಟಿಎಂ, ಯಾತ್ರಾ ಆಪ್ ಗಳಲ್ಲಿ ಟಿಕೆಟ್ ಬುಕ್ಕಿಂಗ್ ಹೇಗೆ..?

ಮೊಬೈಲ್ ಪ್ಲೇಸ್ಟೋರ್ ನಲ್ಲಿ ಈ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು. ಮೆಟ್ರೋ ಪ್ರಯಾಣದ ದಿನದಂದು ಪ್ರವೇಶ ಹಾಗೂ ನಿರ್ಗಮನ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡು ಕ್ಯೂ ಆರ್ ಕೋಡ್ ಖರೀದಿಸಬಹುದು. ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಸ್ವಯಂಚಾಲಿತ ಪ್ರವೇಶ ದ್ವಾರಗಳ ಬಳಿ ಇರಿಸಲಾದ ಕ್ಯೂ ಆರ್ ಕೋಡ್ ರೀಡರ್ ಗಳಿಗೆ ಮೊಬೈಲ್ ಫೋನ್ ನಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರವೇಶ ಮಾಡಬಹುದು ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: CM Yogi Adityanath : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೃಷ್ಣ ನಗರಿ ಉಡುಪಿಗೆ ಆಗಮನ

ಇನ್ನು ಖರೀದಿಸಿದ ಮೊಬೈಲ್ ಕ್ಯೂ ಆರ್ ಕೋಡ್ ಟಿಕೆಟ್ ಆ ದಿನದ ರೈಲು ಸೇವೆ ಕೊನೆಗೊಳ್ಳುವ ತನಕ ಚಾಲ್ತಿಯಲ್ಲಿರುತ್ತದೆ. ಟಿಕೆಟ್ ಖರೀದಿಸಿದ ಬಳಿಕ ಪ್ರಯಾಣ ಕ್ಯಾನ್ಸಲ್ ಆದರೆ ಆ ದಿನದ ಟಿಕೆಟ್ ರದ್ದುಗೊಳಿಸಿ ಮೊತ್ತ ವಾಪಸ್ ಪಡೆಯಲು ಕೂಡಾ ಅವಕಾಶವಿದೆ. ಕ್ಯೂ ಆರ್ ಕೋಡ್ ಟಿಕೆಟ್ ಖರೀದಿ ಮಾಡುವವರಿಗೆ ಟಿಕೆಟ್ ನಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು BMRCL ತಿಳಿಸಿದೆ.

Metro ticket booking: From now on Metro tickets are available on Paytm and Yaatra apps How to use

Comments are closed.