ಮಧ್ಯಾಹ್ನದ ಊಟ ಮಾಡಿದ ಕೂಡಲೇ ಹೆಚ್ಚಿನವರು ಸಣ್ಣ ನಿದ್ರೆ (Sleep tips) ಮಾಡುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವೊಬ್ಬರು ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆಯಲ್ಲೇ ಕಳೆಯುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗುತ್ತದೆ. ನಮ್ಮ ಆರೋಗ್ಯಕರ ಜೀವನಕ್ಕೆ ಎಷ್ಟು ನಿದ್ರೆ ಬೇಕು ಅಷ್ಟು ಮಾಡುವುದು ಒಳ್ಳೆಯದು. ಅದಕ್ಕಿಂತ ಹೆಚ್ಚಿನ (Sleeping Benefits) ನಿದ್ರೆ ನಮ್ಮ ದೇಹವನ್ನು ಜಡ ಮಾಡುತ್ತದೆ. ಇದರಿಂದ ನಮ್ಮಲ್ಲಿ ಆಸಕ್ತಿಗಳು ಕಡಿಮೆ ಆಗುತ್ತದೆ. ಹಾಗೆಯೇ ಹೆಚ್ಚಿನ ನಿದ್ರೆಯು ನಮ್ಮಲ್ಲಿ ಸೋಮಾರಿತನವನ್ನು ಉಂಟು ಮಾಡುತ್ತದೆ.
ಒಬ್ಬ ವ್ಯಕ್ತಿ ಆರೋಗ್ಯವಾಗಿರಲೂ ದಿನಕ್ಕೆ 8 ಗಂಟೆ ನಿದ್ದೆ ಅವಶ್ಯಕ. ಅಂದರೆ, ದಿನದಲ್ಲಿ ಶೇ. 33ರಷ್ಟು ಸಮಯ ನಿದ್ದೆಗೆ ಮೀಸಲಿಡಬಹುದು. ಅದರಲ್ಲೂ ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ನಿದ್ರಿಸಬೇಕು ಇವೆರಡೂ ಮುಖ್ಯವಾದದ್ದು. ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ. ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತದೆ. ವಯಸ್ಕರಿಗೆ ಕನಿಷ್ಟ 8 ತಾಸು ನಿದ್ರಾ ಸಮಯ ಅತ್ಯವಶ್ಯಕ ಆಗಿರುತ್ತದೆ. ಆದರೆ ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರಿಸುವುದರಿಂದ ನಮ್ಮ ದೇಹದ ಮೇಲೆ ಆಗುವ ಪರಿಣಾಮಗಳನ್ನು ಈ ಕೆಳಗೆ ತಿಳಿಸಲಾಗಿದೆ.
ಕೂದಲು ಉದುರುವಿಕೆ ಹೆಚ್ಚಾಗುತ್ತೆ
ನಾವು ಹಗಲಿನ ವೇಳೆಯಲ್ಲಿ ಹೆಚ್ಚು ಹೊತ್ತು ಮಲಗುವುದರಿಂದ ನಮ್ಮ ಕೂದಲುಗಳು ಉದುರುವುದಕ್ಕೆ ಶುರುವಾಗುತ್ತದೆ. ಯಾಕೆಂದರೆ ಕೂದಲಿಗೂ ಸೂರ್ಯನ ಬೆಳಕು ಹಾಗೂ ಗಾಳಿ ಅವಶ್ಯಕತೆ ಇರುತ್ತದೆ. ಅದರಲ್ಲೂ ಹೆಚ್ಚು ಹೊತ್ತು ಮಲಗುವುದರಿಂದ ಕೂದಲು ಕೂಡ ಜಡದಂತೆ ಇರುತ್ತದೆ. ಇದರಿಂದಾಗಿ ಹಗಲಿನ ವೇಳೆ ಅತಿ ಹೆಚ್ಚಿನ ನಿದ್ರೆ ನಮ್ಮ ಕೂದಲಿನ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.

ಜೀರ್ಣಾಂಗ ವ್ಯವಸ್ಥೆ ದುರ್ಬಲತೆ ಉಂಟಾಗುತ್ತೆ
ನಾವು ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಬೇಕೆಂದರೆ ನಾವು ಆಕ್ಟೀವ್ ಆಗಿರುವುದು ಬಹಳ ಮುಖ್ಯವಾಗಿರುತ್ತದೆ. ದಿನಪೂರ್ತಿ ಮಲಗಿ ನಿದ್ರೆ ಮಾಡುವುದರಿಂದ ಹೆಚ್ಚಿನ ಪರಿಣಾಮ ಜೀರ್ಣಾಂಗದ ಮೇಲೆ ಬೀರಿರುತ್ತದೆ. ಹೀಗಾಗಿ ಹಗಲಿನ ವೇಳೆಯಲ್ಲಿ ನಿದ್ರೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹಾಳಾಗುತ್ತದೆ.

ರಾತ್ರಿ ನಿದ್ದೆ ಬರುವುದಿಲ್ಲ
ಮನುಷ್ಯನಿಗೆ ರಾತ್ರಿ ಬರುವ ನಿದ್ರೆ ತುಂಬಾ ಮುಖ್ಯವಾಗಿರುತ್ತದೆ. ಯಾಕೆಂದರೆ ನಮ್ಮ ದೇಹವು ರಾತ್ರಿ ವೇಳೆ ಎಲ್ಲಾ ರೀತಿಯ ಕ್ರಿಯೆಗಳನ್ನು ಪ್ರಾರಂಭಿಸುತ್ತದೆ. ಆ ಹೊತ್ತಿನಲ್ಲಿ ನಮ್ಮ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ ಹಗಲಿನ ವೇಳೆ ಹೆಚ್ಚು ನಿದ್ರಿಸುವುದರಿಂದ ರಾತ್ರಿ ವೇಳೆ ನಿದ್ರೆ ಬರದಂತೆ ಮಾಡುತ್ತದೆ. ಹೀಗಾಗಿ ಹಗಲಿನ ವೇಳೆ ನಿದ್ರೆ ಮಾಡುವುದಕ್ಕಿಂತ ರಾತ್ರಿ ವೇಳೆ ನಿದ್ರೆ ನಮ್ಮ ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ : ರಾತ್ರಿ ಉಳಿದ ಅನ್ನವನ್ನು ಎಸೆಯಬೇಡಿ ! ಇದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?
ಕಣ್ಣಿನ ಸುತ್ತ ಕಪ್ಪು ಉರ್ತುಲ ಉಂಟಾಗುತ್ತೆ
ಸಾಮಾನ್ಯವಾಗಿ ಹೆಚ್ಚು ನಿದ್ರಿಸುವವರ ಕಣ್ಣಿನ ಸುತ್ತ ಕಪ್ಪು ಉರ್ತುಲಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಹಗಲಿನ ವೇಳೆ ಅರೆ ನಿದ್ರೆ ಅವಸ್ಥೆಯಲ್ಲಿ ಇರುವುದರಿಂದ ಕಣ್ಣಿನ ಸುತ್ತ ಕಪ್ಪು ಉರ್ತುಲವನ್ನು ಉಂಟು ಮಾಡುತ್ತದೆ. ಹೀಗಾಗಿ ಹಗಲಿನ ವೇಳೆಯಲ್ಲಿ ಮಾಡುವ ನಿದ್ರೆ ಕಣ್ಣಿನ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : ಸ್ಟ್ರೋಕ್ ಪತ್ತೆ ಹೆಚ್ಚುತ್ತೆ BE FAST ! ಸ್ಟ್ರೋಕ್ ಕಾರಣ, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ : ಅಪೊಲೋ ವೈದ್ಯರ Exclusive ಮಾಹಿತಿ
ಏಕೆ ರಾತ್ರಿ ವೇಳೆ ನಿದ್ರಿಸಬೇಕು ?
ನಮ್ಮ ದೇಹವು ಒಂದು ಯಂತ್ರವಿದ್ದಂತೆ, ದಿನ ಪೂರ್ತಿ ಕೆಲಸ ಮಾಡುವ ನಮ್ಮ ಕಣ್ಣು,ಕಾಲು ಕೈ, ಕಿವಿ, ನಾಲಿಗೆ, ಮೆದುಳು, ಹ್ರದಯದ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ. ನಿದ್ರಾವಸ್ಥೆಯಲ್ಲಿ ಮೆದುಳು ಕೆಲುವು ಕ್ರಮಗಳನ್ನು ಕೈಗೊಳ್ಳುತ್ತವೆ. ಸದ್ಯಕ್ಕೆ ಇದ್ಯಾವುದು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ, ಶರೀರಕ್ಕೆ ನಿದ್ರೆ ಬಹಳ ಮುಖ್ಯವಾದುದ್ದೆಂದು ಹೇಳಲಾಗುತ್ತದೆ. ಮನುಷ್ಯರು ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ. ಒಟ್ಟಾರೆ ಹಗಲಿನ ಹೊತ್ತಿನಲ್ಲಿ ಮಾಡುವ ನಿದ್ರೆಗಿಂತ ರಾತ್ರಿ ನಿದ್ರಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು
Sleep tips: Are there all these problems due to sleeping during the day? How many hours of sleep per day is best