ರಾತ್ರಿ ಉಳಿದ ಅನ್ನವನ್ನು ಎಸೆಯಬೇಡಿ ! ಇದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

ರಾತ್ರಿ ಉಳಿದ ಅನ್ನವನ್ನು ಹೆಚ್ಚಿನವರು ಎಸೆಯುತ್ತಾರೆ. ಇನ್ನು ಕೆಲವರು ಚಿತ್ರಾನ್ನ, ಪಲಾವ್‌, ಮೊಸರಾನ್ನ ಅಥವಾ ಪುಳಿಗೋರೆ ಮಾಡಿ ತಿನ್ನುತ್ತಾರೆ. ರಾತ್ರಿ ಉಳಿದ ಅನ್ನದಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಆರೋಗ್ಯ (Health Tips) ಪ್ರಯೋಜನಕಾರಿ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿಯಾಗಿದೆ.

ರಾತ್ರಿ ಉಳಿದ ಅನ್ನವನ್ನು ಹೆಚ್ಚಿನವರು ಎಸೆಯುತ್ತಾರೆ. ಇನ್ನು ಕೆಲವರು ಚಿತ್ರಾನ್ನ, ಪಲಾವ್‌, ಮೊಸರಾನ್ನ ಅಥವಾ ಪುಳಿಗೋರೆ ಮಾಡಿ ತಿನ್ನುತ್ತಾರೆ. ರಾತ್ರಿ ಉಳಿದ ಅನ್ನದಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಆರೋಗ್ಯ (Health Tips) ಪ್ರಯೋಜನಕಾರಿ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿಯಾಗಿದೆ. ಸಾಮಾನ್ಯವಾಗಿ ಜನರು ತಪ್ಪು ಕಲ್ಪನೆಯಿಂದ ಹಿಂದಿನ ದಿನ ರಾತ್ರಿ ಉಳಿದ ಅನ್ನವನ್ನು ಪುನಃ ಬಳಸದೇ ಬಿಸಾಡುತ್ತಾರೆ.

ಯಾಕೆಂದರೆ ರಾತ್ರಿ ಉಳಿದ ಅನ್ನವನ್ನು ಮರುದಿನ ತಿನ್ನುವುದರಿಂದ ನೆನಪಿನ ಶಕ್ತಿಗೆ ತೊಂದರೆ ಆಗಬಹುದು ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆ (Gastric problem) ಹುಟ್ಟಿಕೊಳ್ಳಬಹುದು ಎನ್ನುವ ತಪ್ಪು ಕಲ್ಪನೆಯಿಂದಾಗಿ ರಾತ್ರಿ ಉಳಿದ ಅನ್ನವನ್ನು ಬಿಸಾಡುತ್ತಾರೆ. ಅದರಲ್ಲೂ ಹಿಂದಿನ ದಿನ ಉಳಿದ ಅನ್ನ ಅಥವಾ ತಂಗಳನ್ನವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನವಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Health Tips: Don't throw the leftover rice at night! Do you know how much benefit there is?
Image Credit To Original Source

ದೇಹದ ಉಷ್ಣತೆ ಕಡಿಮೆ ಮಾಡಲು ಸಹಕಾರಿ :

ಹಿಂದಿನ ದಿನ ರಾತ್ರಿ ಉಳಿದ ಅನ್ನವನ್ನು ಮರುದಿನ ಚಿತ್ರಾನ್ನ ಅಥವಾ ತಂಗಳನ್ನಕ್ಕೆ ಸಾರು, ಮೊಸರನ್ನು ಹಾಕಿಕೊಂಡು ತಿನ್ನುವುರಿಂದ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅದರಲ್ಲೂ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಬೆಳಿಗ್ಗೆ ಉಪಾಹಾರದ ಬದಲು ತಂಗಳ ಅನ್ನವನ್ನು ಸೇವಿಸುವುದರಿಂದ ನಮ್ಮ ದೇಹ ಉಷ್ಣತೆಯನ್ನು ಕಂಟ್ರೋಲ್‌ ಮಾಡುತ್ತದೆ. ಹೀಗೆ ತಂಗಳ ಅನ್ನವನ್ನು ಬೆಳಗಿನ ಸಮಯದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಕ್ರಮೇಣ ನೈಸರ್ಗಿಕವಾಗಿ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆ ನಿವಾರಣೆ ಸಹಕಾರಿ :

ತಂಗಳ ಅನ್ನದಲ್ಲಿ ಅಧಿಕ ರೀತಿಯ ಫೈಬರ್‌ ಇರುತ್ತದೆ. ಬೆಳಿಗ್ಗೆ ತಂಗಳ ಅನ್ನವನ್ನು ಸತತವಾಗಿ ತಿನ್ನುವುದರಿಂದ ಮಲಬದ್ಧತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಯಾರು ಸುದೀರ್ಘ ಕಾಲದ ಮಲಬದ್ಧತೆಗೆ ಒಳಗಾಗಿರುತ್ತಾರೆ. ಆ ರೀತಿ ಸಮಸ್ಯೆ ಇರುವವರು ಸತತವಾಗಿ ತಂಗಳ ಅನ್ನವನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

Health Tips: Don't throw the leftover rice at night! Do you know how much benefit there is?
Image Credit To Original Source

ಇದನ್ನೂ ಓದಿ : ಸ್ಟ್ರೋಕ್ ಪತ್ತೆ ಹೆಚ್ಚುತ್ತೆ BE FAST ! ಸ್ಟ್ರೋಕ್ ಕಾರಣ, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ : ಅಪೊಲೋ ವೈದ್ಯರ Exclusive ಮಾಹಿತಿ

ಎಲುಬುಗಳನ್ನು ಬಲವೃದ್ದಿ :

ಹಿಂದಿನ ದಿನ ರಾತ್ರಿ ಉಳಿದ ಅನ್ನದಲ್ಲಿ ಹೆಚ್ಚಿನ ಪ್ರಮಾಣದ ಐರನ್‌, ಪೊಟ್ಯಾಶಿಯಂ, ಕಾಲ್ಸಿಯಂ ಅನ್ನು ಒಳಗೊಂಡಿದೆ. ಇದರಿಂದ ಪ್ರತಿದಿನ ತಂಗಳ ಅನ್ನ ಸೇವನೆ ಮಾಡುವುದರಿಂದ ನಮ್ಮ ಎಲುಬುಗಳು ಹೆಚ್ಚು ಬಲಗೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ದೇಹದ ತೂಕವನ್ನು ಹೆಚ್ಚಿಸಲು ಬಯಸಿದರೆ ತಂಗಳ ಹೆಚ್ಚು ಸಹಾಯಕಾರಿ ಆಗಿರುತ್ತದೆ.

Health Tips: Don't throw the leftover rice at night! Do you know how much benefit there is?
Image Credit To Original Source

ಇದನ್ನೂ ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾಗಿ ಗಂಜಿ ಕುಡಿದ್ರೆ ಏನಾಗುತ್ತೆ ಗೊತ್ತಾ ?

ಅಲ್ಸಾರ್‌ ನಿವಾರಣೆಗೆ ಸಹಕಾರಿ :

ನಮ್ಮ ದೇಹದಲ್ಲಿ ಉಂಟಾಗುವ ಅಲ್ಸಾರ್‌ನಿಂದ ಮುಕ್ತಿ ಪಡೆಯಲು ತಂಗಳ ಅನ್ನ ಬೆಸ್ಟ್‌ ಎನ್ನಬಹುದು. ಪ್ರತಿದಿನ ತಂಗಳ ಅನ್ನವನ್ನು ತಪ್ಪದೇ ತಿನ್ನುವುದರಿಂದ ಅಲ್ಸರ್‌ ಉಂಟಾಗುವುದಿಲ್ಲ. ಒಂದು ವೇಳೆ ಅಲ್ಸಾರ್‌ಗೆ ಒಳಗಾಗದವರು ವಾರದಲ್ಲಿ ಮೂರು ದಿನ ಬೆಳಿಗ್ಗೆ ತಂಗಳ ಅನ್ನವನ್ನು ತಿನ್ನುವುದರಿಂದ ಅಲ್ಸರ್‌ನಿಂದ ಬಹಳ ಬೇಗನೇ ಗುಣಮುಖರಾಗಬಹುದು.

Health Tips: Don’t throw the leftover rice at night! Do you know how much benefit there is?

Comments are closed.