ಸ್ಟ್ರೋಕ್ ಪತ್ತೆ ಹೆಚ್ಚುತ್ತೆ BE FAST ! ಸ್ಟ್ರೋಕ್ ಕಾರಣ, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ : ಅಪೊಲೋ ವೈದ್ಯರ Exclusive ಮಾಹಿತಿ

ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಟ್ರೋಕ್ (Stroke) ಗೆ ಗುರಿಯಾಗಿದ್ದು, ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಡಾ.ಯತೀಶ್ ಅವರು ಸ್ಟ್ರೋಕ್ ಪತ್ತೆ ಹೆಚ್ಚುಲು BE FAST ಸೂತ್ರ ಜೊತೆಗೆ ಸ್ಟ್ರೋಕ್‌ಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು : ಅತ್ಯಂತ ಸಕ್ರಿಯ ರಾಜಕಾರಣಿ ಎನ್ನಿಸಿಕೊಂಡು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸ್ಟ್ರೋಕ್ ಗೆ (Stroke) ಗುರಿಯಾಗಿದ್ದು, ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆದರೆ ಕುಮಾರಸ್ವಾಮಿಯವರು ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಕುಮಾರಸ್ವಾಮಿಯವರ ಈ ಹೆಲ್ದಿ ಫಾಸ್ಟ್ ರಿಕವರಿ ಹಿಂದಿರೋ ಶಕ್ತಿ ಡಾ. ಸತೀಶ್ ಚಂದ್ರ (Dr. Sathishchandra) . ಇವರೊಂದಿಗೆ ಡಾ.ಯತೀಶ್ (Dr.Yathindra) ಹಾಗೂ ತಂಡ.

ಈ ಸ್ಟ್ರೋಕ್ ಹೇಗಾಗುತ್ತೆ  ? ಸ್ಟ್ರೋಕ್ ಆದ ತಕ್ಷಣದಲ್ಲಿ ಏನಾಗುತ್ತೆ? ತಕ್ಷಣ ರೋಗಿ ಹಾಗೂ ಆತನ ಕುಟುಂಬಸ್ಥರು ಏನು ಮಾಡಬೇಕು? ಇದೆಲ್ಲದರ ಬಗ್ಗೆ ಅಪೋಲೋ ಆಸ್ಪತ್ರೆ ಮುಖ್ಯಸ್ಥರು ಹಾಗೂ ಖುದ್ದು ಮಾಜಿಸಿಎಂ ಸಿಎಂ ಎಚ್ಡಿಕೆ ಚೇತರಿಸಿಕೊಳ್ಳೋದ್ರಲ್ಲಿ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಿದ ವೈದ್ಯರಾದ ಡಾ.ಯತೀಶ್ ಮಾಹಿತಿ ನೀಡಿದ್ದಾರೆ. ಪ್ರತಿಯೊಬ್ಬರು ಓದಲೇ ಬೇಕಾದ ಮಾಹಿತಿ ಇಲ್ಲಿದೆ.

Stroke detection increases BE FAST Stroke Cause Treatment Prevention Exclusive information from Apollo Doctors
Image Credit : Apollo Hospital

ಸ್ಟ್ರೋಕ್ ಅನ್ನೋದು ಎಲ್ಲ ವಯೋಮಾನದಲ್ಲೂ, ಎಲ್ಲಿ ಯಾವಾಗ ಬೇಕಾದರೂ ಬರಬಹುದಾದ ಆರೋಗ್ಯ ಸಮಸ್ಯೆ. ವಿಶ್ವದ ನಾಲ್ಕು ಜನರಲ್ಲಿ ಒಬ್ಬರಿಗೆ ಅವರ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸ್ಟ್ರೋಕ್ ಅನುಭವ ಆಗಬಹುದು. ಆದರೆ ಸ್ಟ್ರೋಕ್ ನ್ನು ಗುರುತಿಸುವುದು ಹೇಗೆ ಅನ್ನೋದನ್ನು ಜನರು ಮೊದಲು ಅರಿತುಕೊಳ್ಳಬೇಕು.

ಇದನ್ನೂ ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾಗಿ ಗಂಜಿ ಕುಡಿದ್ರೆ ಏನಾಗುತ್ತೆ ಗೊತ್ತಾ ?

BE FAST ಅನ್ನೋದನ್ನು ನಾವು ಕೇವಲ ರೋಗಿಯ ಚಿಕಿತ್ಸೆಯಲ್ಲಿ ಮಾತ್ರವಲ್ಲ ಈ ಸ್ಟ್ರೋಕ್ ಗುರುತಿಸುವಿಕೆಯಲ್ಲೂ ಬಳಸುತ್ತೇವೆ.
• B ಅಂದ್ರೆ ಬ್ಯಾಲೆನ್ಸಿಂಗ್ ಅಂದ್ರೆ ನಿಮಗೆ ದೇಹದ ಮೇಲಿನ ಹತೋಟಿ ತಪ್ಪುತ್ತಿದ್ಯಾ ಅನ್ನೋದನ್ನು ಗಮನಿಸಿ
• E ಅಂದ್ರೇ ಕಣ್ಣು, ಅಂದ್ರೇ ನಿಮ್ಮ ದೃಷ್ಟಿ ಮಂದವಾಗ್ತಿದ್ಯಾ ಅನ್ನೋದನ್ನು ಗಮನಿಸಿ
• F ಅಂದ್ರೇ ಫೇಸ್ ಗ್ರೂಪಿಂಗ್ ಅಂದ್ರೆ ನಿಮ್ಮ ಮುಖ ಎಡ ಅಥವಾ ಬಲಕ್ಕೆನಾದ್ರೂ ಟರ್ನ್ ಆಗ್ತಿದ್ಯಾ ಅಂತ ನೋಡಿ
• S ಅಂದ್ರೇ ಸ್ಲರಿಂಗ್ ಆಫ್ ಸ್ಪೀಚ್ ಅಂದ್ರೇ ನಿಮ್ಮ ಮಾತು ತೊದಲುತ್ತಿದ್ಯಾ ಅನ್ನೋದನ್ನು ಗಮನಿಸಿ
• T ಅಂದ್ರೇ ಟೈಂ ಟೂ ವರ್ಕ್ ಅಂತ. ಅಂದ್ರೇ ತಕ್ಷಣ ಕಾರ್ಯಪ್ರವೃತ್ತರಾಗಿ ಚಿಕಿತ್ಸೆಗೆ ಹೋಗಬೇಕು ಅಂತ ಅರ್ಥ

ಒಟ್ಟಿನಲ್ಲಿ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ BE FAST ಅನ್ನೋದನ್ನು ಗಮನಿಸಿಕೊಂಡು ಎಲ್ಲರೂ ಸ್ಟ್ರೋಕ್ ಬಗ್ಗೆ ಕಾಳಜಿ ವಹಿಸಿ. ಈ ತರಹದ ಲಕ್ಷಣವಿದ್ದರೇ ತಕ್ಷಣ ಆಸ್ಪತ್ರೆಗೆ ಧಾವಿಸಿ. ಅಲ್ಲಿ ಅಗತ್ಯವಿದ್ದರೇ, ಎಂಆರ್ ಆಯ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್ ಮಾಡಿ ಸಮಸ್ಯೆಯನ್ನು ಕಂಡುಕೊಂಡು ಅದಕ್ಕೆ ಅಗತ್ಯ ಚಿಕಿತ್ಸೆ ಕೊಡುತ್ತಾರೆ.

Stroke detection increases BE FAST Stroke Cause Treatment Prevention Exclusive information from Apollo Doctors
Image Credit : Medical News Today

ಇದನ್ನೂ ಓದಿ : ನೀವು ಮುಖ ತೊಳೆಯುವಾಗ ಈ ತಪ್ಪುಗಳನ್ನು ಮಾಡದಿರಿ

small vessel allusion ಅಥವಾ Large vessel allusion ಹೀಗೆ ಅಗತ್ಯವಿರೋ ಚಿಕಿತ್ಸೆ ಮಾಡುತ್ತಾರೆ. ಅಲ್ಲದೇ ಕಾಯಿಲೆ ಬರೋದಂತೆ ನೋಡಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಮುಖ್ಯವಾಗಿ ಬಿಪಿ ಮತ್ತು ಶುಗರ್ ಇರೋರು ಫಿಟನೆಸ್ ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಶುಗರ್ ಕಂಟ್ರೋಲ್ ಮಾಡಬೇಕು. ಧ್ಯಾನ ಹಾಗೂ ಯೋಗದಂತಹ ಚಿಕಿತ್ಸೆ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಅಂದ್ರೇ ಗೋಲ್ಡನ್ ಅವರ್ ಮುಗಿಯೋ ಮುನ್ನ ಸೂಕ್ತ ಚಿಕಿತ್ಸೆಗೆ ಅವಕಾಶ ಇರೋ ಆಸ್ಪತ್ರೆಯನ್ನು ಆಯ್ದುಕೊಳ್ಳಿ ಎಂದು ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ.ಯತೀಶ್ ಜನರಿಗೆ ಮನವಿ ಮಾಡಿದ್ದಾರೆ.

Stroke detection increases BE FAST Stroke Cause Treatment Prevention Exclusive information from Apollo Doctors, Karnataka Ex CM HD Kumaraswamy Faceing Stroke Problem

Comments are closed.