ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ….ಇದು ಕೊರೊನಾಕ್ಕಿಂತಲೂ ಮಾರಕ !

0
  • ವಂದನಾ ಕೊಮ್ಮುಂಜೆ

ಕೊರೋನಾ ಅನ್ನೋ ಮಾರಿ ಇಡೀ ವಿಶ್ವವನ್ನೇ ಆವರಿಸಿದೆ. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೂ ಕಿಲ್ಲರ್ ಕೊರೊನಾ ಅಟ್ಟಹಾಸವನ್ನೇ ಮರೆಯುತ್ತಿದೆ. ಕೊರೊನಾಕ್ಕೆ ಔಷಧ ಕಂಡು ಹಿಡಿಯಲು ಸಾಕಷ್ಟು ಸಂಶೋಧನೆಗಳೇ ನಡೆಯುತ್ತಿದ್ರೂ ಯಾವುದೂ ಫಲಕೊಡ್ತಿಲ್ಲ. ಈ ಮಹಾಮಾರಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದೆಂಬ ಮಾಹಿತಿ ಜನರನ್ನು ತಲ್ಲಣಗೊಳಿಸಿರೋದಂತು ಸತ್ಯ. ಆದರೆ ಕಿಲ್ಲರ್ ಕೊರೊನಾಕ್ಕಿಂತಲೂ ಭೀಕರವಾಗಿರೋ ಮಹಾಮಾರಿ ದೇಶವನ್ನು ಕಾಡಲು ರೆಡಿಯಾಗಿ ನಿಂತಿದೆ. ಪೋಷಕರು ಸ್ವಲ್ಪ ಯಾಮಾರಿದ್ರೂ ಮಕ್ಕಳಿಗೆ ಅಪಾಯ ಕಟ್ಟಿಟ್ಟಬುತ್ತಿ.

ಅಷ್ಟಕ್ಕೂ ನಾವು ಹೇಳ್ತಿರೋ ಆ ಮಹಾಮಾರಿ ಬೇರಾವುದೂ ಅಲ್ಲಾ ಸಿಗರೇಟ್..ಖುಷಿ ನೀಡಿ ಸಾವನ್ನು ಹತ್ತಿರ ತರುವ ವಸ್ತು ಸಿಗರೇಟ್ ಅಂತ ಗೊತ್ತಿದ್ರ‍್ರೂ ಇದಕ್ಕೆ ಅಡಿಕ್ಟ್ ಆಗುವವರ ಸಂಖ್ಯೆ ಕಡಿಮೆಯೇನಿಲ್ಲ. ಸ್ಟ್ರೆಸ್, ಕೆಲಸದ ಒತ್ತಡದ ಕಾರಣಕೊಟ್ಟು ಪೋಷಕರು ಜಾರಿಕೊಳ್ತಿದ್ದಾರೆ. ಆದರೆ ಇದರಿಂದ ಎಫೆಕ್ಟ್ ಆಗಿರೋದು ಮಾತ್ರ ಮಕ್ಕಳ ಮೇಲೆ. ಹೌದು, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿರೋ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗ್ತಿದೆ. ಮಕ್ಕಳು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ಕ್ಯಾನ್ಸರ್ ಕಾರಕ ಅಂಶ ಹೆಚ್ಚಾಗೋದಕ್ಕೆ ಕಾರಣವಾಗಿರೋದು ಸಿಗೇರ್ ನಂತಹ ಮಾದಕ ದ್ರವ್ಯ ಸೇವನೆ.

Smoking is injurious to health

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 8 ರಿಂದ 16 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಮೋಕಿಂಗ್ ದಾಸರಾಗುತ್ತಿದ್ದಾರೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಕದ್ದುಮುಚ್ಚಿ ಸಿಗರೇಟ್ ಸೇದುವುದನ್ನೇ ಚಟವಾಗಿ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಸಿಗರೇಟ್ ಮಾರಾಟ ಮಾಡಬಾರದು ಅನ್ನೋ ನಿಮಯವಿದ್ರೂ ಸಿಲಿಕಾನ್ ಸಿಟಿಯ ಅಂಗಡಿಗಳು ಮಾತ್ರ ನಿಯಮ ಪಾಲಿಸುತ್ತಿಲ್ಲ. ಇನ್ನು ಸಿಗರೇಟ್ ಸೇದುತ್ತಿರೋ ಮಕ್ಕಳನ್ನ ಪ್ರಶ್ನಿಸಿದ್ರೂ ಬೇರೊಂದು ಗಲ್ಲಿಗೆ ಶಿಫ್ಟ್ ಆಗೋದು ಮಾಮೂಲಿ ಅಂತಿದ್ದಾರೆ ಬೆಂಗಳೂರಿನ ನಿವಾಸಿಗರು. ಇನ್ನು ಸಿಗರೇಟ್ ಸೇವನೆ ಮಾಡೋ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತೀರಾ ಕಡಿಮೆಯಾಗಿರೋದ್ರಿಂದಾಗಿ ಕೊರೊನಾ, ಡೆಂಗ್ಯೂ ಸೇರಿದಂತೆ ಹಲವರು ರೋಗಗಳು ಮಕ್ಕಳನ್ನು ಬಹುಬೇಗನೆ ಬಾದಿಸಲಿದೆ. ಇದೀಗ ಎಲ್ಲೆಡೆ ಕೊರೊನಾ ಭೀತಿ ಆವರಿಸಿರೋದ್ರಿಂದಾಗಿ ಮಕ್ಕಳ ಕೈಗೆ ಸಿಗರೇಟ್ ಸಿಗದಿರೋ ರೀತಿ ನೋಡಿಕೊಳ್ಳುವುದು ತೀರಾ ಒಳಿತು.

Smoking is injurious to health

ಸಿಗರೇಟ್‌ನಿಂದ ಜೀವಕ್ಕೆ ಆದೀತು ಆಪತ್ತು !
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರೋದ್ರಿಂದ ಬಹುಬೇಗನೆ ಅನಾರೋಗ್ಯ ಭಾದಿಸುತ್ತೆ. ಗಾಳಿಯಲ್ಲಿ ಹರಡುವ ವೈರಸ್ ಗಳು ಬಹುವೇಗವಾಗಿ ದೇಹವನ್ನು ಸೇರುವ ಸಾಧ್ಯತೆ ಜಾಸ್ತಿ ಇರುತ್ತೆ. ಜೊತೆಗೆ ಸಿಗರೇಟ್ ಗೆ ಮಕ್ಕಳು ಅಡಿಕ್ಟ್ ಆಗೋದ್ರಿಂದ ಮಾನಸಿಕ ಬೆಳವಣಿಗೆಯ ಮೇಲೂ ಗಂಭೀರ ಸ್ವರೂಪ ಪರಿಣಾಮವನ್ನು ಬೀರುತ್ತಿದೆ.

Smoking is injurious to health

ಪೋಷಕರೇ ಬಿ ಕೇರ್ ಫುಲ್ !
ಹಲವು ಪೋಷಕರು ಸಿಗರೇಟ್ ಗೆ ದಾಸರಾಗಿರುತ್ತಾರೆ. ಮಕ್ಕಳ ಮುಂದೆ ಸಿಗರೇಟ್ ಸೇವನೆ ಮಾಡೋದ್ರಿಂದ ಮಕ್ಕಳ ಮನಸಿನ ಮೇಲೆಯೂ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಪೋಷಕರು ಸಿಗರೇಟ್ ಸೇದುವುದನ್ನು ಗಮನಿಸೋ ಮಕ್ಕಳು ಕೂಡ ಕುತೂಹಲದಿಂದಲೇ ಸಿಗರೇಟ್ ಸೇವನೆ ಮಾಡ್ತಿದ್ದಾರೆ. ಆರಂಭದಲ್ಲಿ ಒಂದೋ ಎರಡೋ ಸಿಗರೇಟ್ ಸೇದೋ ಮಕ್ಕಳು ಕ್ರಮೇಣ ಸಿಗರೇಟ್ ಗೆ ದಾಸರಾಗಿ ಬಿಡ್ತಿದ್ದಾರೆ. ಪೋಷಕರೇ ನಿಮ್ಮ ಬ್ಯೂಸಿ ಲೈಫ್ ನಲ್ಲಿ ಕೆಲಸಕ್ಕೆ ಒತ್ತು ಕೊಡೋ ನೀವು ಮಕ್ಕಳ ಮೇಲೆಯೂ ಕಣ್ಣಿಟ್ಟಿರೋದು ಒಳಿತು.

ಇದನ್ನೂ ಓದಿ : ಹಸಿದಾಗ ಕಲ್ಲಂಗಡಿ ಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ ?

ಇದನ್ನೂ ಓದಿ : ಹೀಗೆ ಮಾಡಿದ್ರೆ ಅಸಿಡಿಟಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

Leave A Reply

Your email address will not be published.