hair masks to stop hair fall in winters :ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟ್ರೈ ಮಾಡಿ ಈ ಹೇರ್​ಮಾಸ್ಕ್​​​

hair masks to stop hair fall in winters :ಚಳಿಗಾಲ ಬಂತು ಅಂದರೆ ಸಾಕು. ಕೂದಲು ಶುಷ್ಕವಾಗಿಬಿಡುತ್ತದೆ. ಅಲ್ಲದೇ ಚಳಿಗಾಲದಲ್ಲಿ ಕೂದಲು ಉದುರುವಿಕೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಚಳಿಗಾಲದ ಸಂದರ್ಭದಲ್ಲಿ ನೀವು ಕೂದಲಿನ ಬಗ್ಗೆ ವಿಶೇಷ ಕಾಳಜಿಯನ್ನೇ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ತಲೆಗೆ ಬಿಸಿ ನೀರಿನಿಂದ ಸ್ನಾನ ಮಾಡುವುದು ನಿಜಕ್ಕೂ ಒಳ್ಳೆಯದಲ್ಲ. ಆಗಾಗ ತಲೆಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಜ್​ ಮಾಡುವುದರಿಂದ ಕೂದಲು ಕಾಂತಿಯುತವಾಗಿ ಕಾಣುವಂತೆ ಮಾಡಬಹುದಾಗಿದೆ. ನೀವು ಕೂಡ ನಿಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವವರಾಗಿದ್ದರೆ ನೀವು ಮನೆಮದ್ದಿನ ಮೂಲಕವೇ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮೆಂತೆ, ಮೊಸರು ಹಾಗೂ ಕರಿಬೇವು :

ಚಳಿಗಾಲದಲ್ಲಿಯೂ ನೀವು ರೇಷ್ಮೆ ಎಳೆಯಂತಹ ಕೂದಲುಗಳನ್ನು ಪಡೆಯಬೇಕು ಅಂದುಕೊಂಡಿದ್ದರೆ ನೀವು ಈ ಮಾಸ್ಕ್​ನ್ನು ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ರಾತ್ರಿ ವೇಳೆ 1 ಚಮಚ ಮೆಂತೆಯನ್ನು ನೆನೆಯಲು ಹಾಕಿ. ನೆನೆಸಿದ ಮೆಂತೆಯನ್ನು ಮಿಕ್ಸರ್​ ಜಾರ್​ಗೆ ಹಾಕಿ ಇದಕ್ಕೆ ಒಂದು ಹಿಡಿ ಕರಿಬೇವು, ಮೊಸರನ್ನು ಹಾಕಿ ರುಬ್ಬಿ. ಈ ಮಾಸ್ಕ್​ನ್ನು ನಿಮ್ಮ ತಲೆಗೆ ಹಾಕಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ರಾಸಾಯನಿಕಗಳು ಕಡಿಮೆ ಇರುವ ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ನೀವು ರೇಷ್ಮೆಯಂತೆ ಕೂದಲನ್ನು ಹೊಂದುವಿರಿ.

ಚಳಿಗಾಲದಲ್ಲಿ ಡ್ಯಾಂಡ್ರಫ್​​ನಿಂದ ಪಾರಾಗಲು ಬಳಸಿ ಈ ಮನೆಮದ್ದು :

ಚಳಿಗಾಲದಲ್ಲಿ ಡ್ಯಾಂಡ್ರಫ್​ ಸಮಸ್ಯೆಯು ಬಹುತೇಕ ಎಲ್ಲರಿಗೂ ಕಾಡುತ್ತದೆ. ಚಳಿಗಾಲದಲ್ಲಿ ಒಣ ಚರ್ಮ ಉಂಟಾಗುವ ಸಂಖ್ಯೆಯು ಹೆಚ್ಚಿರೋದ್ರಿಂದ ನಿಮಗೆ ಹೊಟ್ಟಿನ ಸಮಸ್ಯೆ ಇನ್ನಷ್ಟು ಕಾಡುತ್ತದೆ. ಈ ಸಮಸ್ಯೆಯಿಂದ ಪಾರಾಗಬೇಕೆಂದು ಅನೇಕರು ಸಾಕಷ್ಟು ಶಾಂಪೂ, ಕಂಡಿಷನರ್​ಗಳ ಮೊರೆ ಹೋಗ್ತಾರೆ. ಆದರೆ ಇದಕ್ಕೆ ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ. ನೀವು ಮನೆಯಲ್ಲಿನ ಕೆಲ ವಸ್ತುಗಳನ್ನೇ ಬಳಕೆ ಮಾಡಿಕೊಂಡು ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ. (remedies to deal with dandruff)

1 ಚಮಚ ಮೆಂತೆ ಪೌಡರ್​ ಹಾಗೂ 1 ಚಮಚ ತ್ರಿಫಲ ಚೂರ್ಣವನ್ನು ಮೊಸರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಮಾರನೇ ದಿನ ಬೆಳಗ್ಗೆ ಈ ಮಿಶ್ರಣವನ್ನು ನಿಮ್ಮ ತಲೆಗೆ ಹೇರ್​ ಮಾಸ್ಕ್​​ನಂತೆಯೇ ಬಳಿಸಿ. ಒಂದು ಗಂಟೆಯ ಬಳಿಕ ಶುದ್ಧವಾದ ಬೆಚ್ಚನೆಯ ನೀರಿನಿಂದ ಇದನ್ನು ತೊಳೆಯಿರಿ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಈ ರೀತಿ ಮಾಡಿ.

ಒಂದು ಕಪ್​ನಲ್ಲಿ ತೆಂಗಿನ ಎಣ್ಣೆಯನ್ನು 2 ನಿಮಿಷಗಳ ಕಾಲ ಬಿಸಿ ಮಾಡಿ. ಇದಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ ಹಾಗೂ ಇದನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ರಾತ್ರಿಯಿಡೀ ಅಥವಾ ತಲೆ ಸ್ನಾನ ಮಾಡುವ 2 ಗಂಟೆಗಳ ಮುನ್ನ ಹಚ್ಚಿಕೊಳ್ಳಿ. ಬಳಿಕ ತಲೆಸ್ನಾನ ಮಾಡಿ. ವಾರಕ್ಕೆ ಒಮ್ಮೆ ಈ ರೀತಿಯಾಗಿ ಮಾಡಿ.

ತೆಂಗಿನ ಎಣ್ಣೆಯಲ್ಲಿ 1 ಚಮಚ ನಿಂಬೆ ಹಾಗೂ 5 ಗ್ರಾಂ ಭಸ್ಮವನ್ನು ಮಿಶ್ರಣ ಮಾಡಿ. ರಾತ್ರಿಯಿಡೀ ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು ಮಾರನೇ ದಿನ ಬೆಳಗ್ಗೆ ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರ ಈ ರೀತಿ ಮಾಡಿ.

1 ಕಪ್​ ಅಲೋವೇರಾ ಜೆಲ್​​ನ್ನು ಎರಡು ಟೇಬಲ್​ ಸ್ಪೂನ್​​ ಕ್ಯಾಸ್ಟರ್​ ಎಣ್ಣೆಯೊಂದಿಗೆ ಸೇರಿಸಿ. ಇದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಮಾರನೇ ದಿನ ಬೆಳಗ್ಗೆ ಸ್ನಾನ ಮಾಡಿ. ವಾರಕ್ಕೊಮ್ಮೆ ಈ ರೀತಿ ಮಾಡೋದ್ರಿಂದ ನಿಮಗೆ ಡ್ಯಾಂಡ್ರಫ್​ ಸಮಸ್ಯೆ ದೂರಾಗಲಿದೆ.

ಇದನ್ನು ಓದಿ : Beetroot juice :ಬೀಟ್​ರೂಟ್​ ಜ್ಯೂಸ್​ ಸೇವನೆಯಿಂದ ವಾಸಿಯಾಗಲಿದೆ ಈ ಎಲ್ಲಾ ಸಮಸ್ಯೆ

ಇದನ್ನೂ ಓದಿ : Home Remedies For Headache :ತಲೆನೋವಿನಿಂದ ಹೈರಾಣಾಗಿದ್ದೀರೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

Try these Fenugreek, curd, and curry leaves mask to stop hair fall in winters, Hair masks Hair fall

Comments are closed.