Carrot Juice Benefits : ಒಂದು ಲೋಟ ಕ್ಯಾರೆಟ್​ ಜ್ಯೂಸ್​​​ ಸೇವನೆಯಿಂದ ದೇಹಕ್ಕೆ ಸಿಗಲಿದೆ ಅಗಾಧ ಲಾಭ

Carrot Juice Benefits ಕ್ಯಾರಟ್​ ಹಲ್ವಾ ಅಂದರೆ ಬಹುತೇಕ ಎಲ್ಲರೂ ಇಷ್ಟ ಪಡ್ತಾರೆ. ಇದಕ್ಕೆ ಬೇಡ ಎನ್ನುವವರ ಸಂಖ್ಯೆ ತುಂಬಾನೇ ಕಡಿಮೆ. ಈ ಕ್ಯಾರಟ್​ನ್ನು ನೀವು ಕೇವಲ ಹಲ್ವಾದ ರೂಪದಲ್ಲಿ ಮಾತ್ರವಲ್ಲ. ಆರೋಗ್ಯಕರವಾಗಿ (Health Tips) ಜ್ಯೂಸ್​ ರೂಪದಲ್ಲಿ ಸೇವನೆ ಮಾಡಬಹುದು. ಒಂದು ಲೋಟ ಕ್ಯಾರಟ್​ ಜ್ಯೂಸ್​ ಸೇವನೆಯಿಂದ ನಿಮ್ಮ ದೇಹಕ್ಕೆ ಅಗಾಧ ಪ್ರಮಾಣದ ಲಾಭ ಸಿಗಲಿದೆ. ಇದು ಬಾಯಿಗೂ ರುಚಿ ಜೊತೆಗೆ ದೇಹದ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿ.

ನೀವು ದಿನದ ಆರಂಭವನ್ನು ಕ್ಯಾರಟ್​ ಜ್ಯೂಸ್​ನಿಂದ ಆರಂಭಿಸಿದರೆ ಕಾಯಿಲೆಗಳು ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ. ಇದರಿಂದ ದೇಹಕ್ಕೆ ಅಗಾಧ ಪ್ರಮಾಣದಲ್ಲಿ ಪೌಷ್ಠಿಕಾಂಶ ಸಿಗೋದ್ರ ಜೊತೆಯಲ್ಲಿ ದಿನವಿಡೀ ದೇಹದಲ್ಲಿ ಶಕ್ತಿ ಉಳಿದಿರುತ್ತದೆ.

ಕ್ಯಾರೆಟ್​ಗಳು ನಿಮಗೆ ಕೆಂಪು ಹಾಗೂ ಕೇಸರಿ ಬಣ್ಣದಲ್ಲಿ ಲಭ್ಯವಿರುತ್ತದೆ. ಕ್ಯಾರೆಟ್​ನಲ್ಲಿ ವಿಟಾಮಿನ್​ ಎ ಅಂಶ ಅಗಾಧವಾಗಿದೆ. ನೀವು ದಿನಕ್ಕೆ 1 ಲೋಟ ಕ್ಯಾರೆಟ್​ ಜ್ಯೂಸ್​ ಸೇವಿಸಿದರೆ ನಿಮ್ಮ ದೇಹದಲ್ಲಿ ಅಗಾಧ ಪ್ರಮಾಣದಲ್ಲಿ ವಿಟಾಮಿನ್​ ಎ ಶೇಖರಣೆ ಆಗಲಿದೆ. ಕೇವಲ ವಿಟಾಮಿನ್​ ಎ ಮಾತ್ರವಲ್ಲದೇ ವಿಟಾಮಿನ್​ ಸಿ, ವಿಟಾಮಿನ್​ ಕೆ, ವಿಟಾಮಿನ್​ ಬಿ 6, ವಿಟಾಮಿನ್​ ಇ, ಪೊಟ್ಯಾಷಿಯಂ , ಮೆಗ್ನಿಷಿಯಂ ಕೂಡ ಅಗಾಧ ಪ್ರಮಾಣದಲ್ಲಿದೆ.

ಕ್ಯಾರೆಟ್​ ಜ್ಯೂಸ್​ನಲ್ಲಿ ಬೀಟಾ ಕ್ಯಾರೋಟಿನ್​ ಹಾಗೂ ವಿಟಾಮಿನ್​ ಎ ಹೇರಳವಾಗಿದೆ. ಇದರಿಂದ ನಿಮ್ಮ ದೇಹದಲ್ಲಿ ಜೀವಕೋಶಗಳಿಗೆ ಯಾವುದೇ ಹಾನಿ ಉಂಟಾಗದಂತೆ ತಡೆಯುತ್ತದೆ. ಜೀವಕೋಶಗಳ ಹಾನಿಯಿಂದ ಉಂಟಾಗಬಲ್ಲ ಇತರೆ ಕಾಯಿಲೆಗಳ ಅಪಾಯವನ್ನೂ ಇದು ಕಡಿಮೆ ಮಾಡುತ್ತದೆ. ಕ್ಯಾರೆಟ್​ ಜ್ಯೂಸ್​ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಲಾಭವಿದೆ. ಇದರಲ್ಲಿ ಲ್ಯುಟಿನ್​, ಜಿಯಾಕ್ಸಾಂಥಿನ್​​ ಅಂಶವು ರೆಟಿನಾ ಹಾಗೂ ಕಣ್ಣಿನ ಮಸೂರಗಳಿಗೆ ಅತ್ಯಧಿಕ ಪ್ರಯೋಜನವನ್ನು ನೀಡುತ್ತದೆ. ನೇರಾಳಾತೀತ ಬೆಳಕನಿಂದ ಕಣ್ಣಿನ ಮೇಲೆ ಉಂಟಾಗುವ ಹಾನಿಯನ್ನು ರಕ್ಷಿಸಲು ಇದು ಸಹಕಾರಿಯಾಗಿದೆ.

ಇದನ್ನು ಓದಿ : Home Remedies For Headache :ತಲೆನೋವಿನಿಂದ ಹೈರಾಣಾಗಿದ್ದೀರೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

ಇದನ್ನೂ ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!

ಇದನ್ನೂ ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ

Carrot Juice Benefits : Health Tips

Comments are closed.