Turmeric lemon face pack : ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಳಸಿ ಅರಿಶಿನ – ನಿಂಬು ಫೇಸ್​ಪ್ಯಾಕ್​

Turmeric lemon face pack :ಮುಖದ ಕಾಂತಿ ಹೆಚ್ಚಿಸುವ ವಿಚಾರದಲ್ಲಿ ಅರಿಶಿಣ ಹಾಗೂ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಪದಾರ್ಥಗಳನ್ನು ತ್ವಚೆಗೆ ಲೇಪಿಸುವುದರಿಂದ ಮುಖಕ್ಕೆ ಕಾಂತಿ ಸಿಗೋದರ ಜೊತೆಗೆ ಮುಖದ ಮೇಲಿನ ಮೊಡವೆ, ಸುಕ್ಕಿನ ಕಲೆಗಳೂ ವಾಸಿಯಾಗುತ್ತದೆ. ಇದು ಚರ್ಮದ ಮೇಲಿನ ಕಲೆಗಳನ್ನೂ ವಾಸಿ ಮಾಡುತ್ತದೆ. ಅರಿಶಿಣದಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಾ ಗುಣಗಳು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ. ಇದನ್ನು ಹೊರತುಪಡಿಸಿ ಅರಿಶಿಣದಲ್ಲಿ ಮಾಂಗನೀಸ್​, ಕಬ್ಬಿಣಾಂಶ, ಪೊಟ್ಯಾಷಿಯಂ, ವಿಟಾಮಿನ್​ ಸಿ ಗುಣಗಳು ಇವೆ. ಇತ್ತ ನಿಂಬುವಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕಂಡುಬರುತ್ತವೆ, ಇದು ಚರ್ಮ ಮತ್ತು ಮುಖದ ಸೌಂದರ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಹಾಗಾದರೆ ಮುಖದ ಮೇಲಿನ ಮೊಡವೆ, ಸುಕ್ಕುಗಳನ್ನು ತಡೆಗಟ್ಟಲು ನಿಂಬು ಹಾಗೂ ಅರಿಶಿಣದ ಫೇಸ್​ ಪ್ಯಾಕ್​ನ್ನು ಯಾವ ರೀತಿ ತಯಾರಿಸಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ : ಅರಿಶಿನ ಮತ್ತು ನಿಂಬೆ ಫೇಸ್ ಪ್ಯಾಕ್ ಮಾಡಲು, ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಅರಿಶಿನ ಮತ್ತು 1 ಚಮಚ ನಿಂಬೆ ರಸವನ್ನು ತೆಗೆದುಕೊಳ್ಳಿ. ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಈ ಪ್ಯಾಕ್​​ನ್ನು ಹಾಕಿಕೊಳ್ಳಿ. ಈ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿಕೊಳ್ಳಿ. ಇದರಿಂದ ತ್ವಚೆಯ ಮೈಬಣ್ಣ ಕಾಂತಿಯುತವಾಗುತ್ತದೆ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಕೆ ಮಾಡಬಹುದು .

ನೀವು ಎಣ್ಣೆಯುಕ್ತ ಮುಖವನ್ನು ಹೊಂದಿದ್ದರೆ ಅರಿಶಿನ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಎರಡು ಚಮಚ ನಿಂಬೆ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಮೂರರ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆ ಬಿಡಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು, ನೀವು ಒಂದು ಚಮಚ ಅರಿಶಿನ ಮತ್ತು ಒಂದು ಚಮಚ ನಿಂಬೆ ಮಿಶ್ರಣವನ್ನು ಬಳಕೆ ಮಾಡಬಹುದು. ಇದು ಮುಖಕ್ಕೆ ಹೊಳಪನ್ನು ನೀಡುತ್ತದೆ. ಈ ಪ್ಯಾಕ್ ಅನ್ನು 5 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ.

ಸುಕ್ಕಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಒಂದು ಚಮಚ ಅರಿಶಿನ, ಒಂದು ಚಮಚ ನಿಂಬೆ ಮತ್ತು ಒಂದು ಚಮಚ ಸೌತೆಕಾಯಿ ರಸವನ್ನು ಮಿಶ್ರಣ ಮಾಡಬಹುದು. ಇದು ಮುಖದ ಸುಕ್ಕುಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಡಾರ್ಕ್​ ಸರ್ಕಲ್​ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಇದನ್ನು ಓದಿ : turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!

ಇದನ್ನೂ ಓದಿ : Cucumber For Skin: ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸೌತೆಕಾಯಿ ಪಾತ್ರ ಎಂತದ್ದು ಗೊತ್ತಾ..?

Turmeric lemon face pack benefits

Comments are closed.