ನಿಮ್ಮ ಸೊಂಪಾದ ತಲೆ ಕೂದಲ ಬೆಳವಣಿಗಾಗಿ ಈ ಹರ್ಬಲ್‌ ಶ್ಯಾಂಪೂವನ್ನು ಬಳಸಿ

ಹವಾಮಾನ ಏರುಪೇರಿನಿಂದ, ಕೆಲವೊಂದು ಕಲುಷಿತ ಆಹಾರ ಪದ್ಧತಿಯಿಂದ ಕೂದಲು ಉದುರುವ ಸಮಸ್ಯೆ ಸಾಮಾನ್ಯ. ಅಷ್ಟೇ ಅಲ್ಲದೇ ವಿಪರೀತ ತಲೆ ಹೊಟ್ಟು, ವಯೋಸಹಜದಿಂದಲೂ ತಲೆಕೂದಲು ಉದುರುತ್ತದೆ. ಇದಕ್ಕಾಗಿ ಹಲವು ಶ್ಯಾಂಪೂ, ಮನೆಮದ್ದುಗಳನ್ನು ಬಳಸಿ ನೋಡಿದ್ದರು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಇನ್ನು ಕೆಲವರಿಗೆ ಪೌಷ್ಠಿಕಾಂಶದ ಕೊರತೆಯಿಂದಲೂ ಕೂದಲು ಉದುರುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇನ್ನು ಹಾರ್ಮೋನು ಏರಿಳಿತದಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಮನೆಯಲ್ಲೇ ತಯಾರಿಸುವ ಈ ಹರ್ಬಲ್‌ ಶ್ಯಾಂಪೂವನ್ನು (Herbal shampoo) ಒಮ್ಮೆ ಬಳಸಿ ನೋಡಿ. ಹಾಗಾದರೆ ಈ ಹರ್ಬಲ್‌ ಶ್ಯಾಂಪೂವನ್ನು ಮನೆಯಲ್ಲೇ ಹೇಗೆ ತಯಾರಿಸುವುದು ಎನ್ನುವುದನ್ನು ತಿಳಿಯೋಣ.

ಶ್ಯಾಂಪೂ ತಯಾರಿಸುವ ವಿಧಾನ :
ಮೊದಲಿಗೆ ಸ್ವಲ್ಪ ದಾಸವಾಳ ಎಲೆಗಳನ್ನು ಎರಡರಿಂದ ಮೂರು ಬಾರೀ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಶ್ಯಾಂಪೂಗೆ ನೀವು ಹೆಚ್ಚಾಗಿ ಯಾವುದಾದರೂ ನಾಟಿ ದಾಸವಾಳ ಎಲೆಗಳನ್ನು ತೆಗೆದುಕೊಳ್ಳುವುದು ಉತ್ತಮ. ನಂತರ ತೊಳೆದ ದಾಸವಾಳ ಎಲೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಎರಡು ಲೋಟ ನೀರನ್ನು ಹಾಕಿಕೊಂಡು, ಗ್ಯಾಸ್‌ ಮೇಲೆ ಇಟ್ಟುಕೊಂಡು ಎರಡರಿಂದ ಮೂರು ನಿಮಿಷಗಳ ಕಾಲ ಕುದಿಸಿಕೊಂಡರೆ ಸಾಕು. ಒಲೆ ಮೇಲೆ ಕುದಿಸಲು ಇಟ್ಟಾಗ ಅದು ಹಸಿರು ಬಣ್ಣಕ್ಕೆ ಬಂದ ಕೂಡಲೇ ಗ್ಯಾಸ್‌ ಆಫ್‌ ಮಾಡಬೇಕು.

ನಂತರ ಅದನ್ನು ತಣ್ಣಗೆ ಆಗುಲು ಬಿಡಬೇಕು. ಪೂರ್ತಿ ತಣ್ಣಗೆ ಆದ ಮೇಲೆ ಅದನ್ನು ಕೈಯಲ್ಲಿ ಚೆನ್ನಾಗಿ ಕಿವುಚಿಕೊಳ್ಳಬೇಕು. ಈ ರೀತಿ ಬಿಸಿ ಮಾಡಿದ ದಾಸವಾಳವನ್ನು ಕಿವುಚುವುದರಿಂದ ಜಾಸ್ತಿ ನೊಳ್ಳೆ ಆಗುವುದಿಲ್ಲ. ಚೆನ್ನಾಗಿ ದಾಸವಾಳವನ್ನು ಕಿವುಚಿದ ನಂತರ ಅದನ್ನು ಒಂದು ಪಾತ್ರೆಗೆ ಜರಡಿ ಮೂಲಕ ಸೊಸಿಕೊಳ್ಳಬೇಕು. ಇದನ್ನು ಒಂದು ಗಾಜಿನ ಬಾಟೆಲ್‌ನಲ್ಲಿ ಹಾಕಿಕೊಂಡು ಫ್ರಿಜ್‌ನಲ್ಲಿ ಒಂದು ವಾರದ ತನಕ ಇಟ್ಟುಕೊಳ್ಳಬಹುದು. ನಂತರ ನೀವು ತಲೆ ಸ್ನಾನ ಯಾವಾಗ ಮಾಡುತ್ತೀರಾ ಆಗ ನಿಮ್ಮಗೆ ಬೇಕಾದಷ್ಟು ದಾಸವಾಳ ನೀರನ್ನು ಹಾಗೂ ನೀವು ಬಳಸುವ ಶ್ಯಾಂಪೂವನ್ನು ಮಿಕ್ಸ್‌ ಮಾಡಿಕೊಂಡು ತಲೆಹಚ್ಚಿಕೊಂಡು ತಲೆ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ದಾಸವಾಳದ ಎಲೆಯಲ್ಲಿ ಇರುವ ಅಂಶಗಳು ನಮ್ಮ ಕೂದಲಿನ ಬೆಳೆವಣೆಗೆ ತುಂಬಾನೆ ಕೆಲಸವನ್ನು ಮಾಡುತ್ತದೆ. ದಾಸವಾಳದ ಎಲೆ ಬಳಕೆಯಿಂದ ನಮ್ಮ ತಲೆ ಕೂದಲು ಬೆಳವಣೆಗೆ ತುಂಬಾ ಪೂರಕವಾಗಿರುತ್ತದೆ. ಇದ್ದರಿಂದಾಗಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಬೊಕ್ಕ ತಲೆಗೆ ಭಯ ಪಡುವ ಪುರುಷರಿಗೆ ಇದು ತುಂಬಾ ಉಪಯುಕ್ತವಾಗಿರುತ್ತದೆ.ಈ ಶ್ಯಾಂಪೂ ಬಳಕೆಯಿಂದ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ.

ಇದನ್ನೂ ಓದಿ : Besan Hair Mask: ಚಳಿಗಾಲದ ತಲೆಹೊಟ್ಟು ಸಮಸ್ಯೆಗೆ, ಕಡಲೆ ಹಿಟ್ಟಿನ ಹೇರ್‌ ಮಾಸ್ಕ್‌ನಲ್ಲಿದೆ ಪರಿಹಾರ

ಇದನ್ನೂ ಓದಿ : Spectacle Marks : ನಿಮಗೆ ಸ್ಪೆಕ್ಟ್ಸ್‌ ಹಾಕಿ ಮೂಗಿನ ಮೇಲೆ ಮಾರ್ಕ್‌ ಆಗಿದೆಯೇ? ಮಾರ್ಕ್‌ ಹೋಗಲಾಡಿಸಲು ಹೀಗೆ ಮಾಡಿ

ಹಾಗೆಯೇ ಕೂದಲು ಉದುರುವುದು ತಕ್ಷಣವೇ ನಿಲ್ಲುತ್ತದೆ. ಈ ಶ್ಯಾಂಪೂ ಬಳಕೆಯಿಂದ ಕೂದಲು ತುಂಬಾ ಆರೋಗ್ಯಕರವಾಗಿ ಬೆಳೆಯುತ್ತದೆ. ಇದನ್ನು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೂಡ ಬಳಸಬಹುದು. ಈ ಶ್ಯಾಂಪೂ ಬಳಕೆಯಿಂದ ವಿಪರೀತವಾಗಿ ಕೂದುಲು ಉದುರುವಿಕೆಯನ್ನು ನಿಲ್ಲಿಸುತ್ತದೆ. ಅಧಿಕ ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ. ಕೂದಲು ಡ್ರೈ ಆಗುವುದನ್ನು ತಪ್ಪಿಸುತ್ತದೆ. ಹಾಗೆಯೇ ಕೂದಲು ಎರಡು ಆಗುವುದನ್ನು ತಪ್ಪಿಸುತ್ತದೆ. ಕೂದಲು ಮೃದುವಾಗಿ ಬೆಳೆಯುತ್ತದೆ.

Use this herbal shampoo for your lush head hair growth

Comments are closed.