Strike of government employees: ಸರಕಾರಿ ನೌಕರರ ಅನಿರ್ದಿಷ್ಟಾವದಿ ಮುಷ್ಕರ ಹಿನ್ನಲೆ ಇಂದು ಸಂಜೆ ತುರ್ತು ಸಭೆ

ಬೆಂಗಳೂರು: (Strike of government employees) ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸರಕಾರಿ ನೌಕರರು ಮುಷ್ಕರ ನಡೆಸಲು ಸಿದ್ದರಾಗಿದ್ದು, ಈ ನಡುವೆ ನೌಕರರ ಮುಷ್ಕರವನ್ನು ತಡೆಯಲು ರಾಜ್ಯ ಸರಕಾರ ಕಸರತ್ತು ನಡೆಸುತ್ತಿದೆ. ಇಂದು ಮಧ್ಯಾಹ್ನ ಹಲವು ನೌಕರ ಮುಖಂಡರ ಜೊತೆ ನಡೆಸಿದ್ದ ಸಭೆ ವಿಫಲವಾಗಿದ್ದು, ಇದರ ಬೆನ್ನಲ್ಲೇ ಸಂಜೆ ಮತ್ತೆ ತುರ್ತು ಸಭೆಯನ್ನು ನಡೆಸಲು ರಾಜ್ಯ ಸರಕಾರ ಮುಂದಾಗಿದೆ.

28 ನೇ ವೇತನ ಪರಿಷ್ಕರಣೆಗೆ ಆಗ್ರಹಿಸಿ ಹಾಗೂ 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಾಳೆ ಮುಷ್ಕರಕ್ಕೆ ಸಿದ್ದರಾಗಿದ್ದು, ನಾಳೆ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದು ನಿಂತಿದ್ದಾರೆ. ಬೇಡಿಕೆಗಳ ಪರವಾಗಿ ಸರಕಾರದ ಆದೇಶ ಬಂದಲ್ಲಿ ಮಾತ್ರವೇ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಆದರೆ ಯಾವುದೇ ಕಾರಣಕ್ಕೂ ಹೋರಾಟವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಐದು ರಾಜ್ಯಗಳ ಮಾದರಿಯಂತೆ ಎನ್‌ಪಿಎಸ್‌ ರದ್ದು ಮಾಡಿ ಒಪಿಎಸ್‌ ಜಾರಿ ಮಾಡಿ ಎಂದು ಮನವಿ ಮಾಡಲಾಗಿತ್ತು. ಅದರ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಹೀಗಾಗಿ ನಮ್ಮ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟವನ್ನು ನಾವು ನಿಲ್ಲಿಸುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಈ ಬಾರಿ ಮಂಡಿಸಿದ ಬಜೆಟ್‌ ನಲ್ಲಿ ಸರಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಜ್ಯ ಸರಕಾರ ಯಾವುದೇ ಪ್ರಸ್ತಾಪ ಮಾಡಿಲ್ಲದ ಕಾರಣ ಮತ್ತು ಹೊಸ ಪಿಂಚಣಿ ನೀತಿ ರದ್ದತಿಗೆ ಆಗ್ರಹಿಸಿ ಸರಕಾರಿ ನೌಕರರು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ.ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಗ್ರಾಮ ಪಂಚಾಯತಿ ಸಿಬ್ಭಂದಿ, ನಗರ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಕಾಯಂ ಪೌರ ಕಾರ್ಮಿಕರು, ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ : Schools-colleges closed: ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ನಾಳೆ ಶಾಲಾ-ಕಾಲೇಜುಗಳು ಬಂದ್‌

ಕರ್ನಾಟಕ ಸಚಿವಾಲಯ ನೌಕರರ ಸಂಘ, ವಿವಿಧ ನಿಗಮ ಮಂಡಳಿಗಳ ನೌಕರರು, ಅರಣ್ಯ ಇಲಾಖೆ ನೌಕರರು ಭಾಗವಹಿಸುತ್ತಿದ್ದು, ಅನಿರ್ದಿಷ್ಟಾವದಿ ಮುಷ್ಕರಕ್ಕೆ ಶಾಲಾ ಶಿಕ್ಷಕರೂ ಕೂಡ ಕೈಜೋಡಿಸಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿನ ವಾಹನಗಳ ನೋಂದಣಿ, ಪರವಾನಗಿ ವಿತರಣೆ ಕಾರ್ಯಗಳು, ಹೀಗೆ ಬಹುತೇಕ ಸೌಲಭ್ಯಗಳಲ್ಲಿ ನಾಳೆ ವ್ಯತ್ಯಯವಾಗಲಿದೆ.

Strike of government employees: The background of the indefinite strike of government employees is an emergency meeting this evening

Comments are closed.