ಆಧಾರ್ ಅಪ್‌ಡೇಟ್‌ಗೆ ಕೇಂದ್ರದ ಗುಡ್ ನ್ಯೂಸ್! ಈಗ ಸೇವೆ ಸಂಪೂರ್ಣ ಉಚಿತ

ಆಧಾರ್ ವಿವರಗಳನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲು ಕೇಂದ್ರ ಸರ್ಕಾರ ಮತ್ತೊಂದು ವರ್ಷದ ಗಡುವು ನೀಡಿದೆ. ಹೊಸ Aadhaar App ಮೂಲಕ ವೇಗವಾದ ಮತ್ತು ಸುರಕ್ಷಿತ ಸೇವೆಗಳು ಜನರಿಗೆ ಲಭ್ಯವಾಗಲಿವೆ.

ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಆನ್‌ಲೈನ್ ಮೂಲಕ ಉಚಿತವಾಗಿ ಆಧಾರ್ ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಹೊಸ ಆದೇಶದ ಪ್ರಕಾರ, ನಾಗರಿಕರು 2027ರ ಜೂನ್‌ 14ರವರೆಗೆ myAadhaar ಪೋರ್ಟಲ್‌ ಮೂಲಕ ಯಾವುದೇ ಶುಲ್ಕವಿಲ್ಲದೆ ತಮ್ಮ ವಿವರಗಳನ್ನು ನವೀಕರಿಸಿಕೊಳ್ಳಬಹುದು.

ಈ ಕುರಿತು Unique Identification Authority of India ಮಹತ್ವದ ಪ್ರಕಟಣೆ ಹೊರಡಿಸಿದೆ. ಮೇ 13ರಂದು ಬಿಡುಗಡೆ ಮಾಡಿದ ಅಧಿಕೃತ ಮೆಮೊರಾಂಡಂನಲ್ಲಿ ಈ ಮಾಹಿತಿ ನೀಡಲಾಗಿದೆ. ಆಧಾರ್ ಸೇವೆಗಳನ್ನು ಇನ್ನಷ್ಟು ಸುಲಭ ಮತ್ತು ಡಿಜಿಟಲ್ ಸ್ನೇಹಿಯಾಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಇದೀಗ ತಂತ್ರಜ್ಞಾನ ಕ್ಷೇತ್ರದಲ್ಲಿಯೂ UIDAI ಹಲವು ಬದಲಾವಣೆಗಳನ್ನು ಪರಿಚಯಿಸಿದೆ. ಹಳೆಯ ‘mAadhaar’ ಆಪ್‌ಗೆ ಬದಲಾಗಿ ಹೊಸ ತಲೆಮಾರಿನ ‘Aadhaar App’ ಅನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಹೆಚ್ಚು ಸುರಕ್ಷತೆ ಮತ್ತು ಸುಧಾರಿತ ಗೌಪ್ಯತಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಹೊಸ ಆಪ್‌ನಲ್ಲಿ QR ಕೋಡ್ ಆಧಾರಿತ ಆಧಾರ್ ಶೇರ್ ಮಾಡುವ ವ್ಯವಸ್ಥೆ, ಸುಲಭ ಸೇವೆಗಳು ಹಾಗೂ ವೇಗವಾದ ಅಪ್‌ಡೇಟ್ ಆಯ್ಕೆಗಳು ಲಭ್ಯವಿವೆ. ಮೊಬೈಲ್‌ ಸಂಖ್ಯೆ ಹಾಗೂ ವಿಳಾಸ ಬದಲಾವಣೆ ಪ್ರಕ್ರಿಯೆಯನ್ನು ಕೂಡ ಹೆಚ್ಚು ಸರಳಗೊಳಿಸಲಾಗಿದೆ.

ಕೇಂದ್ರ ಐಟಿ ಸಚಿವಾಲಯದ ಮಾಹಿತಿ ಪ್ರಕಾರ, ಹೊಸ Aadhaar Appಗೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಸುಮಾರು 2.1 ಕೋಟಿ ಮಂದಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಇದಲ್ಲದೆ, ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಕೊಂಡಿದ್ದು, ಸುಮಾರು 6 ಲಕ್ಷ ಮಂದಿ ವಿಳಾಸ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ Aadhaar App ಪ್ರಸ್ತುತ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳು ಈ ಆಪ್ ಮೂಲಕ ದೊರೆಯುವ ಸಾಧ್ಯತೆ ಇದೆ ಎಂದು ತಂತ್ರಜ್ಞಾನ ತಜ್ಞರು ಹೇಳುತ್ತಿದ್ದಾರೆ.

ಡಿಜಿಟಲ್ ಸೇವೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ತಮ್ಮ ಆಧಾರ್ ದಾಖಲೆಗಳನ್ನು ಸರಿಯಾದ ಸಮಯಕ್ಕೆ ನವೀಕರಿಸಿಕೊಳ್ಳುವುದು ಅಗತ್ಯ ಎಂದು UIDAI ಸಲಹೆ ನೀಡಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories