ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟ : ಸ್ಥಳಕ್ಕೆ ಎನ್‌ಐಎ- ಹೈ ಅಲರ್ಟ್‌ ಘೋಷಣೆ

Delhi Car Blast Red fort : ದೆಹಲಿ : ಐತಿಹಾಸಿಕ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ. 1 ರ ಸಮೀಪದ ಲಾಜ್‌ಪತ್ ರಾಯ್ ಮಾರ್ಕೆಟ್ (Lajpat Rai Market) ಪ್ರದೇಶದಲ್ಲಿ ಇಂದು ಸಂಜೆ ಭಯಾನಕ ಸ್ಫೋಟ ಸಂಭವಿಸಿದೆ. ಈ ಘಟನೆಯಿಂದ ಪ್ರದೇಶದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಫೋಟದ ತಕ್ಷಣವೇ ಮತ್ತೊಂದು ಕಾರಿಗೆ ಬೆಂಕಿ ತಗುಲಿ ಇಡೀ ವಾಹನ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಯು ತಕ್ಷಣವೇ ಸುತ್ತಮುತ್ತ ನಿಲ್ಲಿಸಿದ್ದ ಮೂರು-ನಾಲ್ಕು ಇತರ ವಾಹನಗಳಿಗೂ ಹರಡಿದ್ದು, ಕಾರುಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿವೆ. ಸ್ಫೋಟದ ಶಬ್ದವು ತುಂಬಾ ಜೋರಾಗಿದ್ದು, ಅನೇಕ ಕಿಲೋಮೀಟರ್ ದೂರದವರೆಗೆ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Delhi Car Blast Red fort High alert NIA in Spot

ಈ ಪ್ರಬಲ ಸ್ಫೋಟದ ತೀವ್ರತೆಗೆ ಸಮೀಪದ ಲಾಲ್ ಜೈನ್ ಮಂದಿರ ಮತ್ತು ಸುತ್ತಮುತ್ತಲಿನ ಅಂಗಡಿಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಮಾಹಿತಿ ಸಿಕ್ಕ ತಕ್ಷಣ ದೆಹಲಿ ಅಗ್ನಿಶಾಮಕ ದಳವು ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದೆ. ಘಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು, ವಿಶೇಷ ದಳದ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯ ದಳವು ಸ್ಥಳದಲ್ಲಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ : ಆರ್‌ಎಸ್‌ಎಸ್‌ ಆದಾಯದ ಮೂಲ ಪ್ರಶ್ನಿಸಿದ ಸಚಿವ ಪ್ರಿಯಾಂಕ ಖರ್ಗೆಗೆ ಮೋಹನ್‌ ಭಾಗ್ವತ್‌ ತಿರುಗೇಟು

ಭದ್ರತಾ ದೃಷ್ಟಿಯಿಂದ ಇಡೀ ಪ್ರದೇಶವನ್ನು ಸುತ್ತುವರಿದು, ಹೈ ಅಲರ್ಟ್ ಘೋಷಿಸಲಾಗಿದೆ. ಸ್ಫೋಟವು ಉಗ್ರ ಕೃತ್ಯವೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ಮುಂದುವರಿಸಿದ್ದಾರೆ.

Delhi Car Blast Red fort : ಸ್ಥಳಕ್ಕೆ ದೌಡಾಯಿಸಿದ NIA, NSG ಪಡೆ

ದೆಹಲಿಯಲ್ಲಿ ಕಾರು ಬ್ಲಾಸ್ಟ್‌ ಆಗುತ್ತಿದ್ದಂತೆಯೇ ಎನ್‌ಐಎ ಅಲರ್ಟ್‌ ಆಗಿದೆ. ಎನ್‌ಐಎ ಅಧಿಕಾರಿಗಳು ಹಾಗೂ ಎನ್‌ಎಸ್‌ಜಿ ಕಮಾಂಡೋಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾರು ಸ್ಪೋಟಗೊಂಡಿರುವ ಸ್ಥಳದಲ್ಲಿ ಪರಿಶೀಲನೆ ನಡೆಸುವ ಕಾರ್ಯವನ್ನು ಮಾಡುತ್ತಿದೆ.

ಮತ್ತೊಂದೆಡೆಯಲ್ಲಿ ಪೊಲೀಸರ ಜೊತೆಗೆ ಬಾಂಬ್‌ ನಿಷ್ಕ್ರೀಯ ದಳ, ಶ್ವಾನದಳ ಕೂಡ ಸ್ಥಳಕ್ಕೆ ಭೇಟಿ ನೀಡಿದೆ. ಘಟನೆಯಿಂದಾಗಿ ದೆಹಲಿಯಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಯಾವ ಕಾರಣದಿಂದ ಈ ಸ್ಪೋಟ ಸಂಭವಿಸಿದೆ ಅನ್ನೋದು ತಿಳಿದು ಬಂದಿಲ್ಲ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories