ಪ್ರಿಯಾಂಕಾ ಗಾಂಧಿ ಮಗನಿಗೆ ಕಂಕಣ ಭಾಗ್ಯ; ವಾದ್ರಾ ಕುಟುಂಬದ ಸೊಸೆಯಾಗಲಿರುವ ಅವಿವಾ ಬೇಗ್ ಯಾರು?
Raihan Vadra-Aviva Baig Engagement: ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ರಾಜೀವ್ ವಾದ್ರಾ ಮತ್ತು ಅವರ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರ ನಿಶ್ಚಿತಾರ್ಥ ರಾಜಸ್ಥಾನದಲ್ಲಿ ಅತ್ಯಂತ ಖಾಸಗಿಯಾಗಿ ನೆರವೇರಿದೆ. ಈ ಸಂಭ್ರಮದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಮೂರು ವರ್ಷದ ಗೆಳೆತನ ಈಗ ಜೀವನದ ಹೊಸ ಹಂತಕ್ಕೆ
ಇತ್ತೀಚೆಗೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಣಥಂಬೋರ್ ಬಳಿ ನಡೆದ ಖಾಸಗಿ ಸಮಾರಂಭದಲ್ಲಿ ಕುಟುಂಬದ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ರೈಹಾನ್ ಮತ್ತು ಅವಿವಾ ಅವರ ಮೂರು ವರ್ಷದ ವಯಸ್ಸಿನ ಫೋಟೋ ಹಾಗೂ ಇತ್ತೀಚಿನ ಫೋಟೋಗಳನ್ನು ಒಟ್ಟಾಗಿ ಪೋಸ್ಟ್ ಮಾಡಿದ್ದಾರೆ.
“ಮೂರು ವರ್ಷದವರಿದ್ದಾಗಿನಿಂದಲೂ ಇವರಿಬ್ಬರು ಆತ್ಮೀಯ ಸ್ನೇಹಿತರು” ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ. ಜೀವನದ ಪ್ರತಿ ಹಂತದಲ್ಲೂ ನೀವು ಪರಸ್ಪರ ಒಬ್ಬರಿಗೊಬ್ಬರು ಆಸರೆಯಾಗಿ, ಸಂತೋಷದಿಂದ ಇರಿ” ಎಂದು ಹಾರೈಸಿದ್ದಾರೆ. ಈ ಸಮಾರಂಭದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ವಧು-ವರರ ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: 10,000ಕ್ಕೆ ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು: ಸ್ಯಾಮ್‌ಸಂಗ್, ರೆಡ್ಮಿ ಮತ್ತು ಪೊಕೊ ಯಾವುದು ಬೆಸ್ಟ್?
ಯಾರು ಈ ಅವಿವಾ ಬೇಗ್?
ಅವಿವಾ ಬೇಗ್ ಅವರು ರೈಹಾನ್ ವದ್ರಾ ಅವರ ಬಾಲ್ಯದ ಸ್ನೇಹಿತೆ ಮಾತ್ರವಲ್ಲದೆ, ವೃತ್ತಿಪರವಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಫ್ಯಾಷನ್ ಮತ್ತು ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ರೈಹಾನ್ ಮತ್ತು ಅವಿವಾ ಅವರು ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಅತಿ ರಾಜಕೀಯ ಗದ್ದಲವಿಲ್ಲದೆ, ಸರಳವಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರಿಯಾಂಕಾ ಗಾಂಧಿ ಅವರ ಪೋಸ್ಟ್‌ನಲ್ಲಿ ತಾಯಿಯೊಬ್ಬರ ಮಮತೆ ಹಾಗೂ ತನ್ನ ಮಗ ಮತ್ತು ಸೊಸೆಯ ಸುದೀರ್ಘ ಗೆಳೆತನದ ಬಗ್ಗೆ ಹೆಮ್ಮೆ ಎದ್ದು ಕಾಣುತ್ತಿತ್ತು.



