hamsalekha admitted to hospital:ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಬೆಂಗಳೂರು : hamsalekha admitted to hospital: ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಾದಬ್ರಹ್ಮ ಎಂದೇ ಖ್ಯಾತಿ ಪಡೆದಿರುವ ಹಂಸಲೇಖರನ್ನು ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಂಸಲೇಖ ಎದೆ ನೋವಿನಿಂದ ಬಳಲಿದ ಕಾರಣ ಅವರನ್ನು ರಾಜಾಜಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ಸಮಯದ ಹಿಂದಷ್ಟೇ ಹಂಸಲೇಖ ಓಪನ್​ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು.


ಹಂಸಲೇಖರಿಂದ ಗ್ಯಾಸ್ಟ್ರಿಕ್​ ಸಮಸ್ಯೆಯಿಂದಾಗಿ ಈ ರೀತಿ ಎದೆ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಹಂಸಲೇಖರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಹಂಸಲೇಖ ಆರೋಗ್ಯದ ವಿಚಾರದಲ್ಲಿ ಆತಂಕ ಪಡೆಬೇಕಾದ ಯಾವುದೇ ವಿಚಾರಗಳಿಲ್ಲ ಎಂದು ಅಪೋಲೋ ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ .


ಹೃದಯ ಸಂಬಂಧಿ ಕಾಯಿಲೆಯನ್ನು ಹೊಂದಿರುವ ನಾದಬ್ರಹ್ಮ ಹಂಸಲೇಖರಿಗೆ ಥೈರಾಯ್ಡ್​ ಸಮಸ್ಯೆ ಕೂಡ ಇದೆ. ಕೆಲವು ಸಮಯದ ಹಿಂದೆ ಅವರು ಓಪನ್​ ಹಾರ್ಟ್​ ಸರ್ಜರಿಗೆ ಒಳಗಾಗಿದ್ದರಿಂದ ಸ್ವಲ್ಪ ಆತಂಕಕ್ಕೆ ಕಾರಣವಾಗಿತ್ತು. ಆದರೆ ಹಂಸಲೇಖರನ್ನು ಸದ್ಯ ಜನರಲ್​ ವಾರ್ಡ್ನಲ್ಲಿಯೇ ಇಡಲಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರು ಒಂದು ದಿನ ಆಸ್ಪತ್ರೆಯಲ್ಲಿ ಇರುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹಂಸಲೇಖ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : BBK Season9 :ಬಿಗ್ ಬಾಸ್ ಮನೆಯಿಂದ ನವಾಜ್ ಔಟ್

ಇದನ್ನೂ ಓದಿ : Kodachadri to Kollura Ropeway : ಕೊಡಚಾದ್ರಿಯಿಂದ ಕೊಲ್ಲೂರ ರೋಪ್ ವೇ : ಕಾಮಗಾರಿಗೆ ಟೆಂಡರ್ ಕರೆದ ಸರ್ಕಾರ, ಪರಿಸರವಾದಿಗಳ ಆಕ್ಷೇಪ

music director hamsalekha admitted to hospital due to chest pain

Comments are closed.