Chinese Soldiers : 2020ರ ಜೂನ್ ತಿಂಗಳಲ್ಲಿ ಗಾಲ್ವಾನ್ ವ್ಯಾಲಿ ಕಣಿವೆಯಲ್ಲಿ ಉಂಟಾಗಿದ್ದ ಭಾರತ ಹಾಗೂ ಚೀನಾ ನಡುವಿನ ಸಂಘರ್ಷದಲ್ಲಿ ಚೀನಾವು ಕನಿಷ್ಟ 42 ಸೈನಿಕರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ. ಚೀನಾವು ಗಾಲ್ವಾನ್ ಘರ್ಷಣೆಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಚೀನಾವು ಹೇಳಿಕೊಂಡಿದ್ದಕ್ಕಿಂತ 9 ಪಟ್ಟು ಅಧಿಕ ಮಂದಿ ಸೈನಿಕರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ತನಿಖಾ ಪತ್ರಿಕೆ ದಿ ಕ್ಲಾಕ್ಸನ್ ವರದಿಯು ಮಾಹಿತಿ ನೀಡಿದೆ. ಸಾಮಾಜಿಕ ಮಾಧ್ಯಮಗಳ ಸಂಶೋಧನಾ ವರದಿಗಳು ಆಧರಿಸಿ ಈ ಮಾಹಿತಿಯನ್ನು ಪತ್ತೆ ಮಾಡಲಾಗಿದೆ.
ಸಂಘರ್ಷದ ಆರಂಭದ ದಿನಗಳು ಅಂದರೆ ಜೂನ್ 15 ಹಾಗೂ 16ನೇ ತಾರೀಖಿನಲ್ಲಿ ವೇಗವಾಗಿ ಹರಿಯುತ್ತಿದ್ದ ಗಾಲ್ವಾನ್ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಕನಿಷ್ಟ 38 ಸೈನಿಕರು ಕೊಲ್ಲಲ್ಪಟ್ಟರು ಎಂದು ಘಟನೆ ನಡೆದು ವರ್ಷಗಳ ಬಳಿಕ ತಯಾರಿಸಲಾದ ತನಿಖಾ ವರದಿಯು ಹೇಳುತ್ತಿದೆ. ಶೂನ್ಯ ತಾಪಮಾನದಲ್ಲಿ ಕತ್ತಲೆಯಲ್ಲಿ ನದಿ ದಾಟುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಚೀನಾ ಧೃಡೀಕರಣ ನೀಡಿದ್ದ ಸಾವನ್ನಪ್ಪಿದ ನಾಲ್ವರು ಸೈನಿಕರಲ್ಲಿ ಓರ್ವ ಯೋಧ ಮಾತ್ರ ಮೃತಪಟ್ಟಿದ್ದಾರೆ. ಜೂನಿಯರ್ ಸಾರ್ಜೆಂಟ್ ವಾಂಗ್ ಝುರಾನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಗಾಲ್ವಾನ್ ಡಿಕೋಡೆಡ್ ಶೀರ್ಷಿಕೆಯ ವರದಿಯು ಹೇಳಿದೆ.
ವಾಂಗ್ ಜೊತೆಯಲ್ಲಿ ಆ ರಾತ್ರಿ ಕನಿಷ್ಟ 38 ಸೈನಿಕರು ನದಿಯ ನೀರಿನಲ್ಲಿ ಕೊಚ್ಚಿ ಹೋದರು . ಇದರಲ್ಲಿ ಅಧಿಕೃತವಾಗಿ ಸಾವನ್ನಪ್ಪಿದ್ದಾರೆ ಎಂದು ಚೀನಾ ಸರ್ಕಾರದಿಂದ ಘೋಷಣೆಯಾದ ನಾಲ್ವರು ಸೈನಿಕರು ಕೇವಲ ಒಬ್ಬರು ಮಾತ್ರ ಎಂದು ವರದಿಯು ಹೇಳಿದೆ.
ಅವಘಡದ ಬಳಿಕ ಸೈನಿಕರ ಶವಗಳನ್ನು ಮೊದಲು ಶಿಕ್ವಾನ್ಹೆ ಹುತಾತ್ಮರ ಸ್ಮಶಾನಕ್ಕೆ ಕೊಂಡೊಯ್ಯಲಾಯ್ತು.ಬಳಿಕ ಅಲ್ಲಿಯೇ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ ಎಂದು ತನಿಖಾ ಪತ್ರಿಕೆಯ ವರದಿಯು ಹೇಳಿದೆ.
42 Chinese Soldiers, Not 4, Killed In Galwan, Claims Report: 10 Points
ಇದನ್ನು ಓದಿ : Garbage Cess : ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ನಿಮ್ಮ ಮನೆ ಕಸ: ಬೆಂಗಳೂರಿನಲ್ಲಿ ಸದ್ಯದಲ್ಲೇ ಗಾರ್ಬೇಜ್ ಸೆಸ್
ಇದನ್ನೂ ಓದಿ : 100% Covid vaccination coverage : ಎರಡನೆ ಡೋಸ್ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ರಾಜ್ಯದ ಈ ಜಿಲ್ಲೆ