Lost Phone Account Block: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಖಾತೆ ಇರುವ ಸ್ಮಾರ್ಟ್‌ಫೋನ್ ಕಳುವು/ಕಾಣೆಯಾದರೆ ಏನು ಮಾಡಬೇಕು?

ಡಿಜಿಟಲ್ ವ್ಯವಸ್ಥೆಯ ಮೂಲಕ ಹಣ ಪಾವತಿಸುವುದನ್ನೇ ಇತ್ತೀಚಿನ ದಿನಗಳಲ್ಲಿ ಹಲವರು ಅನುಸರಿಸುತ್ತಿದ್ದಾರೆ. ಅಂಗಡಿಗಳಲ್ಲಿ ಏನನ್ನಾದರೂ ಖರೀದಿಸಿದರೆ ಕ್ಯೂಆರ್‌ ಕೋಡ್ ಸ್ಕಾನ್ ಮಾಡುವ ಮೂಲಕ ಸುಲಭವಾಗಿ ಹಣ ಪಾವತಿಸುವ ವ್ಯವಸ್ಥೆ ಎಲ್ಲರ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೂ ಲಗ್ಗೆಯಿಟ್ಟಿದೆ. ದಿನನಿತ್ಯದ ಜೀವನದಲ್ಲಿ ಬಂದಲ್ಲಿ ಹೋದಲ್ಲಿ ಬಳಸುವ ಗೂಗಲ್ ಪೇ, ಫೋನ್‌ ಪೇ, ಪೇಟಿಎಂ (Google Pay, Phone Pe, Paytm) ಮುಂತಾದ ಅಪ್ಲಿಕೇಶನ್‌ಗಳ ಕುರಿತು ಅಷ್ಟೇ ಜಾಗೃತಿಯನ್ನು ಸಹ ನಾವು ಹೊಂದಿರಬೇಕು. ಒಂದಾನುವೇಳೆ ನಾವು ಬಳಸುವ, ಗೂಗಲ್ ಪೇ, ಫೋನ್‌ ಪೇ, ಪೇಟಿಎಂಯಂತಹ ಅಪ್ಲಿಕೇಶನ್‌ಗಳು ಇನ್ಸ್ಟಾಲ್ ಇರುವ ಸ್ಮಾರ್ಟ್‌ಫೋನ್ ಕಾಣೆಯಾದರೆ ನಮ್ಮ ಯುಪಿಐ ಖಾತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಕನ್ನ ಬೀಳುವ ಸಾಧ್ಯತೆಯೂ ಇರುತ್ತದೆ. ನಮ್ಮ ಹಣದ ಬಗ್ಗೆ ನಾವೇ ಜೋಪಾನ ಮಾಡಿಕೊಳ್ಳಬೇಕು ತಾನೇ? ಹಾಗಾದರೆ ಗೂಗಲ್ ಪೇ, ಫೋನ್‌ ಪೇ, ಪೇಟಿಎಂಯಂತಹ ಅಪ್ಲಿಕೇಶನ್‌ಗಳು ಇನ್ಸ್ಟಾಲ್ ಇರುವ ಸ್ಮಾರ್ಟ್‌ಫೋನ್ (Smartphone Stolen Theft) ಕಾಣೆಯಾದರೆ  ಏನು ಮಾಡುವುದು? ಎಂಬ ಪ್ರಶ್ನೆ ನಿಮ್ಮಲ್ಲಿರಲಿ ಬಿಡಲಿ, ನೀವು ಈ ಮಾಹಿತಿಯನ್ನು ಖಂಡಿತವಾಗಿಯೂ (Lost Phone Account Block) ತಿಳಿದಿಟ್ಟುಕೊಳ್ಳಲೇಬೇಕು.

ನಿಮ್ಮ ಕಾಣೆಯಾದ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಪೇ ಅಪ್ಲಿಕೇಶನ್ ಬ್ಲಾಕ್ ಮಾಡುವುದು ಹೇಗೆ?

ಗೂಗಲ್ ಪೇಯ 18004190157 ನಂಬರ್‌ಗೆ ಫೋನ್ ಮಾಡಿ ನಿಮ್ಮ ಸಮಸ್ಯೆಯನ್ನು ಸಮರ್ಪಕವಾಗಿ ಮನದಟ್ಟು ಮಾಡಿ.

ಗೂಗಲ್ ಪೇ ಅಪ್ಲಿಕೇಶನ್‌ನ ಪ್ರತಿನಿಧಿ ನಿಮಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುತ್ತಾರೆ. ಆ ಸೂಚನೆಯನ್ನು ಪಾಲಿಸಿ ನಿಮ್ಮ ಕಳುವು ಅಥವಾ ಕಾಣೆಯಾದ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಪೇ ಖಾತೆಯನ್ನು ಬ್ಲಾಕ್ ಮಾಡಿ.

ಫೋನ್ ಪೇ ಬಳಸುವ ಸ್ಮಾರ್ಟ್‌ಫೋನ್ ಕಾಣೆ ಅಥವಾ ಕಳುವಾದರೆ ಏನು ಮಾಡಬೇಕು?
ಫೋನ್ ಪೇ ಬಳಸುವ ನಿಮ್ಮ ಸ್ಮಾರ್ಟ್‌ಫೋನ್ ಕಾಣೆ ಅಥವಾ ಕಳುವು ಆದರೂ ಸಹ ಸರಳವಾಗಿ ನಿಮ್ಮ ಫೋನ್ ಪೇ ಖಾತೆಯನ್ನು ಬ್ಲಾಕ್ ಮಾಡಬಹುದು. ಫೋನ್ ಪೇ ಕಸ್ಟಮರ್ ಕೇರ್ ನಂಬರ್ 08068727374 ಅಥವಾ 02268727374 ನಂಬರ್‌ಗೆ ಸಂಪರ್ಕಿಸಿ ನಿಮ್ಮ ದೂರನ್ನು ದಾಖಲಿಸಬೇಕು. ಫೋನ್ ಪೇ ಗ್ರಾಹಕ ಸೇವಾ ಸಿಬ್ಬಂದಿಗೆ ನಿಮ್ಮ ಸಮಸ್ಯೆಯನ್ನು ಅರ್ಥೈಸಬೇಕು. ಗ್ರಾಹಕ ಸೇವಾ ಸಿಬ್ಬಂದಿ ನಿಮ್ಮ ಬಳಿ ನಿಮ್ಮ ಫೋನ್ ಪೇ ಅಕೌಂಟ್‌ನ ದೃಢೀಕರಣಕ್ಕಾಗಿ ಕೆಲವು ಮಾಹಿತಿಗಳನ್ನು ಕೇಳಬಹುದು. ಅವುಗಳನ್ನು ನೀಡಿ

ಪೇಟಿಎಂ ಬಳಸುವ ಸ್ಮಾರ್ಟ್‌ಫೋನ್ ಕಾಣೆ ಅಥವಾ ಕಳುವಾದರೆ ಏನು ಮಾಡಬೇಕು?
ತಕ್ಷಣವೇ ಪೇಟಿಎಂ ಗ್ರಾಹಕ ಸೇವಾ ಸಿಬ್ಬಂದಿಯ 01204456456 ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿ.
ಅವರು ಸೂಚಿಸಿದ ಕ್ರಮಗಳನ್ನು ಕೈಗೊಳ್ಳಿ ಮತ್ತು ಪೇಟಿಎಂಬ ವೆಬ್‌ಸೈಟ್‌ನಲ್ಲಿ ಎಲ್ಲ ಡಿವೈಸ್‌ಗಳಲ್ಲೂ ಲಾಗೌಟ್ ಎಂಬ ಅಯ್ಕೆಯನ್ನು ಆರಿಸಿಕೊಳ್ಳಿ.

24*7 ಆಯ್ಕೆ ಆರಿಸಿಕೊಂಡು ಫ್ರಾಡ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮದೇ ಖಾತೆ ಎಂಬುದಕ್ಕೆ ಖಚಿತವಾದ ಡಾಕ್ಯುಮೆಂಟ್ ಒಂದನ್ನು ನೀಡಿ ಖಚಿತಪಡಿಸಿ. ಪೇಟಿಎಂ ವತಿಯಿಂದ ನಿಮಗೆ ಒಂದು ಒಂದು ಮೆಸೆಜ್ ಮೂಲಕ ನಿಮ್ಮದೇ ಅಕೌಂಟ್ ಎಂಬುದನ್ನು ದೃಢಪಡಿಸಿ.

ತದನಂತರ ಪೇಟಿಎಂ ವತಿಯಿಂದ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

(Lost Phone Account Block Google Pay Phone Pe Paytm)

Comments are closed.