Saudi Arabia :ಹಣದಾಸೆಗಾಗಿ ಎಟಿಎಂ ಯಂತ್ರವನ್ನೇ ಮುರಿಯಲು ಹೊರಟಿದ್ದವನ ಬಂಧನ

Saudi Arabia : ಎಟಿಎಂ ಮಷಿನ್​​ಗಳನ್ನು ದೋಚುವ ಯತ್ನದಲ್ಲಿ ವಿಫಲನಾದ ಸುಡಾನ್​ ವಲಸಿಗನನ್ನು ಸೌದಿ ಅರೇಬಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಯತ್ನದಲ್ಲಿ ಈತ ಎಟಿಎಂ ಯಂತ್ರಕ್ಕೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ.


ಮಧ್ಯ ಸೌದಿ ಅರೇಬಿಯಾದ ಬುರೈದಾ ನಗರದಲ್ಲಿ ಆರೋಪಿಯು ಎಟಿಎಂ ಯಂತ್ರದಿಂದ ಹಣವನ್ನು ಕದಿಯಲು ಯತ್ನಿಸಿದ್ದ. ಇದಕ್ಕಾಗಿ ಆತ ವಿದ್ಯುತ್​ ಗರಗಸವನ್ನು ಬಳಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.


ಈತನ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗಿತ್ತಿದೆ. ಮತ್ತು ಈತನ ವಿರುದ್ಧ ಸಾರ್ವಜನಿಕ ಕಾನೂನು ಕ್ರಮಕ್ಕೆ ಉಲ್ಲೇಖಿಸಲಾಗಿದೆ ಎಂದು ಪೊಲೀಸ್​ ಇಲಾಖೆಯು ಮಾಹಿತಿ ನೀಡಿದೆ.


ಸೌದಿ ಅರೇಬಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ಧ್ವಂಸ ಪ್ರಕರಣಗಳು ಹೆಚ್ಚುತ್ತಿವೆ. ಎಟಿಎಂ ಯಂತ್ರಗಳನ್ನು ಧ್ವಂಸಗೊಳಿಸಲು ಯತ್ನಿಸಿದ ಆರೋಪದ ಅಡಿಯಲ್ಲಿ ಸೌದಿ ಪೊಲೀಸರು ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್​ ತಿಂಗಳಿನಲ್ಲಿ ಸೌದಿ ಪೊಲೀಸರು ದಕ್ಷಿಣ ಗಡಿ ಪ್ರದೇಶವಾದ ಅಸಿರ್​ನಲ್ಲಿ ಹಣವನ್ನು ದೋಚುವ ಸಲುವಾಗಿ ಎಟಿಎಂ ಯಂತ್ರ ಹಾನಿಗೊಳಿಸಿದ್ದ ಇಬ್ಬರನ್ನು ಬಂಧಿಸಿದ್ದರು.


2020ರ ಮಾರ್ಚ್​ ತಿಂಗಳಲ್ಲಿ ಸೌದಿ ಪೊಲೀಸರು ರಾಜಧಾನಿ ರಿಯಾದ್​​ನಲ್ಲಿ ಎಟಿಎಂ ಯಂತ್ರವನ್ನು ಸ್ಫೋಟಗೊಳಿಸಲು ಮುಂದಾಗಿದ್ದ 11 ಸದಸ್ಯರನ್ನು ಬಂಧಿಸಿದ್ದರು .

ಅರಬ್​ ರಾಷ್ಟ್ರದಲ್ಲಿ ಕೋವಿಡ್​ ವಿರುದ್ಧ 6 ತಿಂಗಳ ಹೋರಾಟ ನಡೆಸಿ ಗೆದ್ದ ಭಾರತೀಯ

ನವದೆಹಲಿ : ಗಡಿಯಲ್ಲಿ ನಿಂತು ದೇಶವನ್ನು ಕಾಯುವವರದ್ದು ಒಂದು ರೀತಿಯಲ್ಲಿ ಜೀವದ ಜೊತೆಯಲ್ಲಿ ಆಟವಾದರೆ ಕೋವಿಡ್​ ಸಾಂಕ್ರಾಮಿಕದ ವಿರುದ್ಧ ಜನರನ್ನು ರಕ್ಷಿಸುತ್ತಿರುವ ಮುಂಚೂಣಿ ಕಾರ್ಯಕರ್ತರ ಕಾಯಕ ಕೂಡ ಯಾವುದೇ ಹೋರಾಟಕ್ಕೆ ಕಡಿಮೆಯೇನಿಲ್ಲ. ಸೋಂಕಿನ ಭಯವಿದ್ದರೂ ಜನರಿಗಾಗಿ ಅವರ ಆರೋಗ್ಯಕ್ಕಾಗಿ ಹೋರಾಡುವ ಇವರ ಕಾರ್ಯವನ್ನು ಮೆಚ್ಚುವಂತದ್ದೇ. ಅದೇ ರೀತಿ ಅರಬ್​ ರಾಷ್ಟ್ರದಲ್ಲಿಯೂ ಮುಂಚೂಣಿ ಸಿಬ್ಬಂದಿಯಾಗಿದ್ದ (miraculous recovery from COVID) ಭಾರತೀಯ ವ್ಯಕ್ತಿ ಬರೋಬ್ಬರಿ ಆರು ತಿಂಗಳುಗಳ ಬಳಿಕ ಕೋವಿಡ್​ ಸೋಂಕಿನಿಂದ ಗುಣಮುಖರಾಗಿದ್ದಾರೆ .

ಕೇರಳ ಮೂಲದವರಾದ 38 ವರ್ಷದ ಅರುಣ್​ ಕುಮಾರ್​ ನಾಯರ್​ ಕೋವಿಡ್​ ಸೋಂಕಿಗೆ ಒಳಗಾದ ಬಳಿಕ ಅವರ ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗಿತ್ತು. ಹೀಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅರುಣ್​ಕುಮಾರ್​ ನಾಯರ್​ ಸರಿ ಸುಮಾರು ಆರು ತಿಂಗಳುಗಳ ಕಾಲ ಲೈಫ್​ಸಪೋರ್ಟಿಂಗ್​ ಸಿಸ್ಟಂನಲ್ಲಿಯೇ ಇದ್ದರು. ಒಟಿ ಟೆಕ್ನಿಷಿಯನ್​ ಆಗಿ ಸೇವೆ ಸಲ್ಲಿಸುತ್ತಿದ್ದ ಅರುಣ್​ ಕುಮಾರ್​ ಕೋವಿಡ್​​ ಹೋರಾಟದ ಹಾದಿ ಕೂಡ ದುರ್ಗಮವಾಗಿತ್ತು. ಇವರಿಗೆ ಕೇವಲ ಕೋವಿಡ್​ ಸೋಂಕಿನಿಂದ ಶ್ವಾಸಕೋಶ ಮಾತ್ರ ಹಾನಿಗೊಳಗಾಗಿರಲಿಲ್ಲ. ಈ ಅವಧಿಯಲ್ಲಿ ಅವರಿಗೆ ಹೃದಯ ಸ್ತಂಭನ ಕೂಡ ಉಂಟಾಗಿತ್ತು.

ಆದರೆ ಅರುಣ್​ ಕುಮಾರ್​ ನಾಯರ್​ ತಮ್ಮ ಹೋರಾಟವನ್ನು ಕೈ ಬಿಡಲಿಲ್ಲ. ಸುಮಾರು ಐದು ತಿಂಗಳುಗಳ ಕಾಲ ಆಸ್ಪತ್ರೆಯ ಐಸಿಯುವಿನಲ್ಲಿ ಲೈಫ್​ ಸಪೋರ್ಟಿಂಗ್​ ಸಿಸ್ಟಂನಲ್ಲಿಯೇ ಇದ್ದ ಅರುಣ್​ ಕುಮಾರ್​​ ಟ್ರಾಕಿಯೋಸ್ಟೊಮಿ ಹಾಗೂ ಬ್ರಾಂಕೋಸ್ಕೋಪಿಯೋದಂತಹ ಚಿಕಿತ್ಸೆಗಳನ್ನು ಮಾಡಿಸಿಕೊಂಡರು. ಕೃತಕ ಶ್ವಾಸಕೋಶದಿಂದ ಉಸಿರಾಡುತ್ತಿದ್ದ ಅರುಣ್​ ಕುಮಾರ್​ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿರುವ ಅರುಣ್​ ಕುಮಾರ್​ ನಾಯರ್​, ಬರೋಬ್ಬರಿ ಅರ್ಧ ವರ್ಷಗಳ ಕಾಲ ಜಗತ್ತಿನಲ್ಲಿ ಏನಾಯ್ತು ಎಂಬುದೇ ನನಗೆ ತಿಳಿದಿಲ್ಲ. ನನಗೆ ಈ ಮರುಜನ್ಮ ಸಿಕ್ಕಿದೆ. ನಾನು ಸಾವಿನ ದವಡೆಯಿಂದ ಬಚಾವಾಗಿ ಬಂದಿದ್ದೇನೆ ಎಂದು ಹೇಳಿದರು,

ಇನ್ನು ಆಸ್ಪತ್ರೆಯಲ್ಲಿ ಮುಂಚೂಣಿ ಸಿಬ್ಬಂದಿಯ ಕೋವಿಡ್​ ಹೋರಾಟವನ್ನು ಗಮನಿಸಿದ ಬಹುರಾಷ್ಟ್ರೀಯ ಆರೋಗ್ಯ ಸೇವಾ ಗುಂಪು ವಿಪಿಎನ್​​ ಹೆಲ್ತ್ ಕೇರ್​ ಅರುಣ್​ ಕುಮಾರ್​ರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಪವಾಡದ ರೀತಿಯಲ್ಲಿ ಕೋವಿಡ್​ನಿಂದ ಪಾರಾದ ಅರುಣ್​ ಕುಮಾರ್​​​ರಿಗೆ ಬುರ್ಜಿಲ್​ ಆಸ್ಪತ್ರೆಯಲ್ಲಿ ಗುರುವಾರ ನಡೆದ ಸಮಾರಂಭ ದಲ್ಲಿ ಅರುಣ್​ ಕುಮಾರ್​ರ ಎಮಿರೇಟ್ಸ್​ ಸಹೋದ್ಯೋಗಿಗಳು ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದ್ದಾರೆ.

Expat arrested for sawing off ATM in Saudi Arabia

ಇದನ್ನು ಓದಿ : Chinese Soldiers : ಗಾಲ್ವಾನ್​ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ತನಿಖಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ

ಇದನ್ನೂ ಓದಿ : Rahul Gandhi hits out at Modi govt :‘ಭಾರತವನ್ನು ಸಾಮ್ರಾಜ್ಯದಂತೆ ಆಳಲು ಸಾಧ್ಯವಿಲ್ಲ’ : ಮೋದಿ ಸರ್ಕಾರಕ್ಕೆ ರಾಹುಲ್​ ಟಾಂಗ್​

Comments are closed.