Queen Elizabeth : ರಹಸ್ಯ ಪತ್ರವನ್ನು ಬರೆದಿಟ್ಟಿದ್ದರು ಎಲೆಜಬೆತ್​ : ಪತ್ರದಲ್ಲೇನಿದೆ ಎಂದು ತಿಳಿಯಲು ಕಾಯಬೇಕು ಇನ್ನೂ 63 ವರ್ಷ

ಸಿಡ್ನಿ : Queen Elizabeth  : ಬ್ರಿಟನ್​​ ರಾಣಿಯಾಗಿದ್ದ ಎರಡನೇ ಎಲೆಜಬೆತ್​ ನಿಧನರಾಗಿ ವಾರಗಳೆ ಕಳೆಯುತ್ತಾ ಬಂದರೂ ಸಹ ಈಗಲೂ ಕೂಡ ಅವರ ಸುತ್ತ ಅನೇಕ ವಿಚಾರಗಳು ಚರ್ಚೆಯಾಗುತ್ತಿದೆ. ಭಾರತೀಯರಂತೂ ರಾಣಿ ಎಲೆಜಬೆತ್​​ರ ಕಿರೀಟದ ಮೇಲೆ ಕಣ್ಣಿಟ್ಟಿದ್ದು ನಮಗೆ ನಮ್ಮ ಕೊಹಿನೂರ್​ ವಜ್ರವನ್ನು ವಾಪಸ್​ ಕೊಡಿ ಎಂದೆಲ್ಲ ಕೇಳ್ತಿದ್ದಾರೆ. ಬ್ರಿಟನ್​ ರಾಣಿ ಎಲೆಜಬೆತ್​​ ಕಿರೀಟದಲ್ಲಿರುವ ಕೊಹಿನೂರ್​ ವಜ್ರವು ಕರ್ನಾಟಕದ್ದು ಎಂದು ಹೇಳಲಾಗುತ್ತದೆ, ಆದರೆ ಇದೀಗ ಈ ವಜ್ರವು ಪುರಿ ಜಗನ್ನಾಥನಿಗೆ ಸೇರಿದ್ದು ಅಂತಾ ಮತ್ತೊಂದು ವಾದವು ಶುರುವಾಗಿದ್ದು ಕೊಹಿನೂರ್​ ವಜ್ರವನ್ನು ಪುರಿ ಜಗನ್ನಾಥನಿಗೆ ಹಿಂದಿರುಗಿಸಲು ಬ್ರಿಟನ್​ ಸರ್ಕಾರಕ್ಕೆ ಒತ್ತಡ ಹೇರುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆಯಲಾಗಿದೆ .


ಈ ಎಲ್ಲದರ ನಡುವೆ ಎರಡನೇ ಎಲೆಜಬೆತ್​ ಬರೆದಿರುವ ರಹಸ್ಯ ಪತ್ರವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ಈ ಪತ್ರವನ್ನು ಸಿಡ್ನಿಯ ಐತಿಹಾಸಿಕ ಕಟ್ಟಡದ ತಿಜೋರಿಯ ಒಳಗೆ ಭದ್ರವಾಗಿ ಇಡಲಾಗಿದೆ. ಈ ಪತ್ರದಲ್ಲಿ ರಾಣಿ ಎಲೆಜಬೆತ್​ ಏನನ್ನು ಬರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಅಂದರೆ ನೀವು ಇನ್ನೂ ಅರವತ್ಮೂರು ವರ್ಷಗಳ ಕಾಲ ಕಾಯಲೇಭೇಕು..! ಹೌದು ಮುಂದಿನ 63 ವರ್ಷಗಳವರೆಗೆ ಈ ಪತ್ರವನ್ನು ತೆರೆಯಲಾಗುವುದಿಲ್ಲ.
ಆಸ್ಟ್ರೇಲಿಯಾದ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಪತ್ರವನ್ನು ಸಿಡ್ನಿಯ ಐತಿಹಾಸಿಕ ಕಟ್ಟಡದ ತಿಜೋರಿಯಲ್ಲಿ ಇಡಲಾಗಿದೆ. ಈ ಪತ್ರವನ್ನು ಎರಡನೇ ಎಲೆಜಬೆತ್​ 1986ರಲ್ಲಿ ಬರೆದಿದ್ದರು. ಈ ಪತ್ರದಲ್ಲಿ ಅವರು ಸಿಡ್ನಿಯ ಜನರನ್ನು ಉದ್ದೇಶಿಸಿ ಬರೆದಿದ್ದಾರೆ ಎನ್ನಲಾಗಿದೆ.


ಕುತೂಹಲಕಾರಿ ವಿಚಾರ ಏನೆಂದರೆ ರಾಣಿ ಎರಡನೇ ಎಲೆಜಬೆತ್​ ಬರೆದಿದ್ದ ಈ ಪತ್ರದಲ್ಲಿ ಏನಿರಬಹುದು ಎಂಬುದರ ಸಣ್ಣ ಕುರುಹು ಕೂಡ ರಾಣಿಯ ವೈಯಕ್ತಿಕ ಸಿಬ್ಬಂದಿಗೂ ಸಹ ತಿಳಿದಿಲ್ಲ. ಪತ್ರದಲ್ಲಿ ಏನು ಬರೆಯಲಾಗಿದೆ ಎಂಬ ಕಿಂಚಿತ್​ ಐಡಿಯಾ ಕೂಡ ಯಾರಿಗೂ ಇಲ್ಲ. ಈ ಪತ್ರವನ್ನು ಸುರಕ್ಷಿತ ಸ್ಥಳದಲ್ಲಿ ಗಾಜಿನ ಪೆಟ್ಟಿಗೆಯ ಒಳಗಡೆ ಇಡಲಾಗಿದೆ. ಈ ಪತ್ರದಲ್ಲಿ ಏನಿದೆ ಎಂಬುದು ಇಂದಿಗೂ ಸ್ವಾರಸ್ಯಕರ ವಿಚಾರವೇ ಆಗಿದೆ. ಆದರೆ ಈ ಪತ್ರವನ್ನು ಯಾವುದೇ ಕಾರಣಕ್ಕೂ 2085ರವರೆಗೆ ತೆರೆಯಲಾಗುವುದಿಲ್ಲ.


ಈ ಪತ್ರದ ಸಂಬಂಧ ಸಿಡ್ನಿಯ ಲಾರ್ಡ್​ ಮೇಯರ್​ಗೆ ಈ ಸೂಚನೆಯೊಂದನ್ನು ನೀಡಲಾಗಿದೆ. 2085ನೇ ಇಸ್ವಿಯಲ್ಲಿ ನೀವೇ ಆಯ್ಕೆ ಮಾಡಿದ ಸೂಕ್ತ ದಿನದಂದು ದಯವಿಟ್ಟು ಈ ಲಕೋಟೆಯನ್ನು ತೆರೆಯಿರಿ. ಅಂದು ನಾನು ಸಿಡ್ನಿಯ ನಾಗರಿಕರಿಗೆ ಯಾವ ಸಂದೇಶವನ್ನು ನೀಡಿದ್ದೇನೆ ಎಂಬುದನ್ನು ತಿಳಿಸುವಿರಾ..? ಎಂದು ಬರೆಯಲಾಗಿದೆ. ಅಲ್ಲದೇ ಈ ಸೂಚನೆಯ ಜೊತೆಯಲ್ಲಿ ಎಲಿಜಬೆತ್​ ಆರ್ ಎಂದು ಸಹಿ ಮಾಡಲಾಗಿದೆ. ಎರಡನೇ ಎಲೆಜಬೆತ್​​ ಒಟ್ಟು ಹದಿನಾರು ಬಾರಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು.

ಇದನ್ನು ಓದಿ : Five men gang-rape : ಬಾಯ್​ಫ್ರೆಂಡ್​ ಎದುರಲ್ಲೇ ಮಹಿಳೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : husband put gum on his wife’s private part :ನಶೆಯಲ್ಲಿ ಪತ್ನಿಯ ಖಾಸಗಿ ಅಂಗಕ್ಕೆ ಗಮ್ ಹಾಕಿದ ಪಾಪಿ ಪತಿ

A Letter From Queen Elizabeth Is Locked In A Vault, Can’t Be Opened Until…

Comments are closed.