ಪಾಕಿಸ್ತಾನ : Acid Served In Water Bottles : ಖಾನಾವಳಿಯೊಂದರಲ್ಲಿ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತರಿಗೆ ನೀರಿನ ಬಾಟಲಿಯಲ್ಲಿ ಆಸಿಡ್ನ್ನು ನೀಡಿದ ಪಾಕಿಸ್ತಾನದ ರೆಸ್ಟೋರೆಂಟ್ ವ್ಯವಸ್ಥಾಪಕನೊಬ್ಬನನ್ನು ಲಾಹೋರ್ ಪೊಲೀಸರು ಬಂಧಿಸಿದ ಘಟನೆಯೊಂದು ವರಿಯಾಗಿದೆ. ಸೆಪ್ಟೆಂಬರ್ 27ರಂದು ಐತಿಹಾಸಿಕ ಗ್ರೇಟರ್ ಇಕ್ಬಾಲ್ ಪಾರ್ಕ್ನ ಪೂಯೆಟ್ ರೆಸ್ಟೋರೆಂಟ್ನಲ್ಲಿ ಈ ಘಟನೆ ಸಂಭವಿಸಿದೆ. ಅಪ್ತಾಪ್ತರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಫ್ಐಆರ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮುಹಮ್ಮದ್ ಆದಿಲ್ ಎಂಬವರ ಕುಟುಂಬದ ಬರ್ತಡೇ ಪಾರ್ಟಿಯೊಂದನ್ನು ರೆಸ್ಟಾರೆಂಟ್ನಲ್ಲಿ ಆಯೋಜಿಸಲಾಗಿತ್ತು. ಮುಹಮ್ಮದ್ ಆದಿಲ್ ಸೋದರಳಿಯ ಆಹಾರವನ್ನು ಸೇವಿಸಿದ ಬಳಿಕ ಕೈ ತೊಳೆದುಕೊಳ್ಳಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಹೋಟೆಲ್ನ ಸಿಬ್ಬಂದಿ ಕೈ ತೊಳೆದುಕೊಳ್ಳಲು ನೀರಿನ ಬಾಟಲಿಯನ್ನು ನೀಡಿದ್ದಾರೆ. ಇದರಲ್ಲಿ ಕೈ ತೊಳೆದುಕೊಳ್ಳುತ್ತಿದ್ದಂತೆಯೇ ಪುಟ್ಟ ಬಾಲಕ ಅಳಲು ಆರಂಭಿಸಿದ್ದಾನೆ. ಮಾತ್ರವಲ್ಲದೇ ಆತನ ಕೈಗಳಲ್ಲಿ ಸುಟ್ಟ ಗಾಯಗಳು ಕಾಣಿಸಿಕೊಂಡ ಬಳಿಕ ಅದು ನೀರಿನ ಬಾಟಲಿಯಲ್ಲ ಬದಲಾಗಿ ಆಸಿಡ್ ಬಾಟಲಿ ಎಂದು ತಿಳಿದು ಬಂದಿದೆ . ಇದಾದ ಬಳಿಕ ಮುಹಮ್ಮದ್ ಆದಿಲ್ ರೆಸ್ಟಾರೆಂಟ್ ವ್ಯವಸ್ಥಾಪಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದು ಮಾತ್ರವಲ್ಲದೇ ಇದೇ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎರಡೂವರೆ ವರ್ಷದ ಮತ್ತೋರ್ವ ಬಾಲಕಿ ವಾಜಿಹಾ ಕೂಡ ಇದು ಆಸಿಡ್ ಬಾಟಲಿಯೆಂದು ತಿಳಿಯದೇ ನೀರಿನ ಬಾಟಲಿ ಎಂದುಕೊಂಡು ಅದನ್ನೇ ಕುಡಿದಿದ್ದಾಳೆ. ಕೂಡಲೇ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಮಕ್ಕಳ ಪೈಕಿ ಆಸಿಡ್ ಕುಡಿದ ವಾಜಿಹಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ : Cough Syrup : ಕೆಮ್ಮಿನ ಔಷಧ ಕುಡಿದು 66 ಮಕ್ಕಳ ಸಾವು.. ತನಿಖೆಗೆ ಮುಂದಾದ WHO
ಇದನ್ನು ಓದಿ : Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್
ಇದನ್ನೂ ಓದಿ : 12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್
Acid Served In Water Bottles In Pak Restaurant, Manager Arrested