Bharat Jodo Yatre : ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಎಂಟ್ರಿ

ಮಂಡ್ಯ : Bharat Jodo Yatre Rahul Gandhi : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೀತಿರೋ ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಗಾಂಧಿ ಎಂಟ್ರಿ ಕೊಟ್ಟಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಬ್ರೇಕ್ ನೀಡಲಾಗಿತ್ತು. ಎರಡು ದಿನಗಳ ಕಾಲ ರಾಹುಲ್ ಗಾಂಧಿ ಹಾಗೂ ಸೋನಿಯಾ ಕಬಿನಿಯ ಫಾರೆಸ್ಟ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ರು.

ಇಂದು ಬೆಳಗ್ಗೆ ಮಂಡ್ಯ ಜಿಲ್ಲೆ ಬೆಳ್ಳಾಳೆಯಿಂದ ಕರ್ನಾಟಕದಲ್ಲಿ ಐದನೇ ದಿನದ ಪಾದಯಾತ್ರೆ ಆರಂಭವಾಗಿತ್ತು. ರಾಹುಲ್ ಗಾಂಧಿ ಎಂದಿನಂತೆ ಪಾದಯಾತ್ರೆ ಆರಂಭಿಸಿದ್ರು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಬಿನಿ ಬಳಿಯ ಆರೆಂಜ್‌ ಕೌಂಟಿ ರೆಸಾರ್ಟ್‌ನಿಂದ ವಾಟರ್‌ವುಡ್‌ ರೆಸಾರ್ಟ್​ಗೆ ಬೋಟ್‌ ಮೂಲಕ ಪ್ರಯಾಣ ಬೆಳೆಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದರು. ಪಾಂಡವಪುರದ ತೂಬಿನಕೆರೆಯಲ್ಲಿ ಹೆಲಿಕಾಪ್ಟರ್‌ ಲ್ಯಾಂಡಿಂಗ್ ಆಯಿತು. ನಂತರ ತೂಬಿನಕೆರೆಯಿಂದ ಜಕ್ಕನಹಳ್ಳಿಗೆ ಸೋನಿಯಾ ಆಗಮಿಸಿ ಬೆಳಗ್ಗೆ 8ಗಂಟೆಗೆ ಜಕ್ಕನಹಳ್ಳಿಯಿಂದ ಸಾಂಕೇತಿಕವಾಗಿ ಯಾತ್ರೆಯಲ್ಲಿ ಭಾಗಿಯಾದರು. ಸೋನಿಯಾ ಗಾಂಧಿ ಸುಮಾರು 10-15 ನಿಮಿಷ ಕಾಲ ಹೆಜ್ಜೆ ಹಾಕಿದ್ರು. ಆ ಮೂಲಕ ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಗಾಂಧಿ ಬಲ ತುಂಬಿದ್ರು. ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇಂದಿನ ಪಾದಯಾತ್ರೆ ಬೆಳಗ್ಗೆ 11 ಗಂಟೆಗೆ ಖಾರದ್ಯಾ ಕೆರೆ ತಲುಪಲಿದೆ. ಸಂಜೆ 4 ಗಂಟೆವರೆಗೆ ನಾಯಕರು ವಿಶ್ರಾಂತಿ ಪಡೆಯಲಿದ್ದು ಸಂಜೆ 4 ಗಂಟೆಗೆ ಭಾರತ್ ಜೋಡೋ ಯಾತ್ರೆ ಪುನಾರಂಭವಾಗುತ್ತೆ. ಸಂಜೆ 7ಕ್ಕೆ ಬ್ರಹ್ಮದೇವರ ಹಳ್ಳಿಗೆ ತಲುಪಿ ರಾತ್ರಿ ವಿಸ್ಡಮ್​ ಶಾಲೆಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ನಾಳೆ ನಾಗಮಂಗಲದಲ್ಲಿ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ : Cough Syrup : ಕೆಮ್ಮಿನ ಔಷಧ ಕುಡಿದು 66 ಮಕ್ಕಳ ಸಾವು.. ತನಿಖೆಗೆ ಮುಂದಾದ WHO

Bharat Jodo Yatre Sonia Gandhi has given entry to Naditiro Bharat Jodo Yatra led by Rahul Gandhi

Comments are closed.